ಕಾರ್ಕಳ:ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊತ್ತಮೊದಲ ಭಾರಿಗೆ ರೂಪದರ್ಶಿಗಳಿಂದ ನೂತನ ಮಾದರಿಯ ಕಾಂಜೀವರಂ ಸೀರೆಗಳ ಬಿಡುಗಡೆ ಕಾರ್ಯಕ್ರಮವು ಮುಕ್ತವಾಹಿನಿಯ ಸಹಯೋಗದೊಂದಿಗೆ ಜೋಡುರಸ್ತೆ ಪೂರ್ಣಿಮಾ ಸಿಲ್ಕ್ಸ್ ನಲ್ಲಿ ನಡೆಯಿತು.
ಪೂರ್ಣಿಮಾ ಸಮೂಹ ಸಂಸ್ಥೆಯ ಹಿರಿಯರಾದ ಉಮಾನಾಥ್ ಪ್ರಭು ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಿಟ್ಟೆ ವಿಶ್ವವಿದ್ಯಾನಿಲಯದ ಯೋಗೀಶ್ ರವರು ಪೂರ್ಣಿಮಾ ಪಾಂಡುರಂಗ ಪ್ರಭುರವರ ಯೋಜನೆ ಯೋಚನೆಯನ್ನು ರವಿಪ್ರಕಾಶ್ ಪ್ರಭುರವರು ನೆರವೇರಿಸಿ ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್ ನಲ್ಲಿ ಜನ ಮನ್ನಣೆ ಗಳಿಸಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್ ವಿ ಟಿ ಪದವಿಪೂರ್ವ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಉಷಾ ನಾಯಕ್,ಕಾರ್ಕಳ ಪುರಸಭಾ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್,ಬಿಜೆಪಿ ಕಾರ್ಕಳ ನಗರಾಧ್ಯಕ್ಷ ಅನಂತಕೃಷ್ಣ ಶೆಣೈ,ಕಾರ್ಕಳ,ಕಾರ್ಕಳ ಗ್ರಾಮಾಂತರ ಠಾಣೆಯ ನಾಸಿರ್ ಅಹಮದ್,ಉದ್ಯಮಿ ಭಾರತ್ ಶೆಟ್ಟಿ,ಕಿಶೋರ್,ಪೂರ್ಣಿಮಾ ಸಮೂಹ ಸಂಸ್ಥೆಯ ದಿನೇಶ್ ಪ್ರಭು,ಹರಿಪ್ರಸಾದ್ ಪ್ರಭು ಉಪಸ್ಥಿತರಿದ್ದರು.
ಸಮಾರಂಭದ ಅಂಗವಾಗಿ ಜೋಡುರಸ್ತೆಯ ಹೋಟೆಲ್ ಉಷಾ ಸಭಾಂಗಣದಲ್ಲಿ ಮಿಸ್ ಪೂರ್ಣಿಮಾ, ಮಿಸಸ್ ಪೂರ್ಣಿಮಾ, ಆದರ್ಶ ದಂಪತಿ,ಮಕ್ಕಳಿಗಾಗಿ ಗೇಮ್ ಷೋ ಗಳು ನಡೆದವು.
"ಸಂತೃಪ್ತ ಗ್ರಾಹಕನೇ ಶಾಶ್ವತ ಆಸ್ತಿ,ಗ್ರಾಹಕರ ಆಶೀರ್ವಾದವೇ ಶ್ರೀರಕ್ಷೆ.ಪೂರ್ಣಿಮಾ ಸಿಲ್ಕ್ಸ್ ನ ಒಂದನೇ ವರ್ಷದ ಹಾಗೂ ದೀಪಾವಳಿಯ ಪ್ರಯುಕ್ತ ರಿಯಾಯಿತಿ ನೀಡಲಾಗುವುದು"-ರವಿಪ್ರಕಾಶ್ ಪ್ರಭು
ರವಿಕಿರಣ ಪ್ರಭು ವಿಜೇತರಿಗೆ ಬಹುಮಾನ ವಿತರಿಸಿದರು.ಜೆಸಿ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.ಮುಕ್ತ ವಾಹಿನಿಯ ಕುಮಾರಿ ಸೌಮ್ಯ ಕೋಟ್ಯಾನ್ ಸ್ಪರ್ಧೆಗಳನ್ನು ನಡೆಸಿದರು.ತೀರ್ಪುಗಾರರಾಗಿ ಚಿತ್ರ ನಟಿ ರಕ್ಷಾ ಶೆಣೈ,ಮಾಲಿನಿ ಶೆಟ್ಟಿ ಮತ್ತು ಪ್ರಭು ಸಹಕರಿಸಿದರು.ರೂಪವಿನ್ಯಾಸಕಾರರಾಗಿ ಶಿಲ್ಪಿ ಕಿಣಿ ಮತ್ತು ರಾಖಿ ಭಟ್ ಸಹಕರಿಸಿದರು. ಶಿವ ಜಾಹೀರಾತು ಸಂಸ್ಥೆಯ ಮಾಲೀಕರಾದ ವರದರಾಯ ಪ್ರಭು ಧನ್ಯವಾದಗೈದರು.
Post a comment