ಕಾರ್ಕಳ: ಎಂ.ಪಿ.ಎಂ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ-Times Of Karkala

ಕಾರ್ಕಳ,ನ.2.:ನಮ್ಮ ದೇಶದ ಭಾಷೆಗಳ ಪೈಕಿ ಅತ್ಯಂತ ಸಮೃಧ್ಧವಾದ ಮತ್ತು ಶ್ರೀಮಂತವಾದ ಭಾಷೆಯಾಗಿರುವ  ಕನ್ನಡವನ್ನು ಉಳಿಸಿ ಬೆಳೆಸಬೇಕಾದರೆ ನಾವು ಅದನ್ನು ಜೀವನದ ಪ್ರತಿ ಹಂತದಲ್ಲಿಯೂ ಬಳಸಬೇಕು ಎಂದು ಕಾರ್ಕಳದ ಪ್ರಖ್ಯಾತ ರಂಗಭೂಮಿ ಕಲಾವಿದ ಹಾಗೂ ಸಂಭಾಷಣಕಾರ  ಚಂದ್ರನಾಥ್ ಬಜಗೋಳಿ ನುಡಿದರು. ಅವರು ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾನುವಾರದಂದು  ಆಯೋಜಿಸಲಾಗಿದ್ದ  ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. 

ಜೀವನದಲ್ಲಿ ವೃತ್ತಿರಂಗದಲ್ಲಿ ಅಗತ್ಯವೆನಿಸುವ ಇತರ ಭಾಷೆಗಳನ್ನು ಕಲಿಯೋಣ. ಆದರೆ ನಮ್ಮ ನಾಡಿನ ಭಾಷೆ,  ಹೃದಯದ ಭಾಷೆಯಾದ ಕನ್ನಡವನ್ನು ಪ್ರೀತಿಸುವುದರ ಜೊತೆಗೆ ಅದರ ಪೂರ್ಣ ಜ್ಞಾನವನ್ನು ಪಡೆಯುವ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕಾಗಿದೆ   ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶ್ರೀವರ್ಮ ಅಜ್ರಿ ಎಂ. ಸಮಾರಂಭದ  ಅಧ್ಯಕ್ಷತೆಯ ನುಡಿಗಳನ್ನಾಡಿದರು. 

ವಾಣಿಜ್ಯ ಮತ್ತು ವ್ಯವಹಾರ ವಿಭಾಗದ ಮುಖ್ಯಸ್ಥೆ ಪ್ರೊ. ಜ್ಯೋತಿ.ಎಲ್.ಜನ್ನೆ, ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಪ್ರೊ. ವಿದ್ಯಾಧರ ಹೆಗ್ಡೆ ಎಸ್, ಪ್ರಾಧ್ಯಾಪಕರುಗಳಾದ ಕೃಷ್ಣಮೂರ್ತಿ ವೈದ್ಯ, ಪ್ರಭು ಕೆ.ಎಸ್, ಗಣೇಶ್ ಎಸ್, ಸುಷ್ಮಾ ರಾವ್ ಕೆ, ಮಂಜುನಾಥ ಬಿ ಹಾಗೂ ಮೈತ್ರಿ ಬಿ ಉಪಸ್ಥಿತರಿದ್ದರು. 

ಲಲಿತ ಕಲಾ ಸಂಘ ಆಯೋಜಿಸಿದ ವರ್ಚುವಲ್ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಕೋವಿಡ್ ಸೇನಾನಿಗಳಿಗಾಗಿ ಚಪ್ಪಾಳೆ ತಟ್ಟುವುದರ ಮೂಲಕ ಕೃತಜ್ಞತೆಯನ್ನು ಅರ್ಪಿಸಲಾಯಿತು.  ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಸ್ವಾತಿ ಸ್ವಾಗತಿಸಿ, ಸುಕನ್ಯ ವಂದಿಸಿದರು. ಪೃಥ್ವಿ ಶೆಟ್ಟಿ ಹಾಗೂ ಸುರಕ್ಷಾ ಕಾರ್ಯಕ್ರಮ ನಿರೂಪಿಸಿದರು. 
https://www.timesofkarkala.in/2020/10/blog-post_8.html


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget