✍️ಕಲೆ-ಕಲಾವಿದರಲ್ಲಿ ತಾರತಮ್ಯ ಏಕೆ?ತುಳು ರಂಗಭೂಮಿ ಕಲಾವಿದ ಸುನಿಲ್ ನೆಲ್ಲಿ ಗುಡ್ಡೆ-Times of karkala

ಕಲೆಯನ್ನೇ ನಂಬಿ ಕೊಂಡು ಇರುವ ಕಲಾವಿದರು ಕಳೆದ ಎಂಟು ತಿಂಗಳಿಂದ ಅತಿ ಸಂಕಷ್ಟದ ಜೀವನ ನಡೆಸುತ್ತಿರುವುದನ್ನು ನಾವೆಲ್ಲ ನೋಡಿದ್ದೇವೆ,ಕೇಳಿದ್ದೇವೆ.ಕಾರಣ ದೇಶಕ್ಕೆ ವಕ್ಕರಿಸಿದ ಮಹಾಮಾರಿ ಕೊರೋನ!ಸಾಮಾಜಿಕ ಅಂತರ ಹಾಗೂ ಸುರಕ್ಷತೆಯ ಬಗ್ಗೆ ಸರಕಾರದ ನಿಯಮಾನುಸಾರ ಜನರ ಆರೋಗ್ಯದ ನಿಟ್ಟಿನಲ್ಲಿ ಎಲ್ಲಾ ಸಭೆ ಸಮಾರಂಭಗಳನ್ನು ದೇವಸ್ಥಾನ ಉತ್ಸವ ಅಂಕ ಆಯಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ದ ಮೇಲೆ ನಿರ್ಬಂದನೆ ಹೇರಲಾಯಿತು. 


ಅವತ್ತಿನಿಂದ ಕಲಾವಿದರ ಬದುಕಲ್ಲಿ ಕಾರ್ಮೊಡದ ಕರಿ ಛಾಯೆ ಆವರಿಸ ತೊಡಗಿತು.ಇನ್ನು ಏನು? ಎತ್ತ? ಎನ್ನುವಷ್ಟರಲ್ಲಿ ಹಲವು ಸಂಕಷ್ಟಕಗಳ ನಡುವೆ ಕಲಾವಿದನ ಬದುಕು ಉರುಳಿ ಹೋಯಿತು.ಸರಕಾರದ ಕಿರು ಬೆರಳಿನ ಸಾಂತ್ವನದ ಹಣ ಬೆರಳಣಿಕೆಯಷ್ಟು ಕಲಾವಿದರಿಗೆ ದೊರೆತರೆ ಇನ್ನು ಸಂಘ ಸಂಸ್ಥೆಗಳಿಂದ ಆರ್ಥಿಕ ಸ್ಥಿತಿ ಕಷ್ಟದಲ್ಲಿರುವ ಹಲವು ಕಲಾವಿದರಿಗೆ ಸಹಾಯ ಮಾಡಿದರು. ಸಂಕಷ್ಟದ ಸಮಯದಲ್ಲಿ ಬಡ ಕಲಾವಿದರನ್ನು ಗುರುತಿಸಿ ಅವರಿಗೆ ಸಹಾಯ ಹಸ್ತ ನೀಡಿ ಮಾನವೀಯತೆ ಮೆರೆದ ಎಲ್ಲಾ ಸಂಘ ಸಂಸ್ಥೆಗಳಿಗೂ ನಮ್ಮ ಕಲಾವಿದರು ಚಿರಋಣಿ.

ಅವೆಲ್ಲ ಓರ್ವ ಕಲಾವಿದನ  ಎಂಟು ತಿಂಗಳ ಬದುಕಿನಲ್ಲಿ ಶೇಕಡಾ ನೂರಕ್ಕೆ ಒಂದು ಭಾಗ ಜೀವನಕ್ಕೆ ಸರಿದೂಗಿತು.ನಂತರದ ದಿನಗಳಲ್ಲಿ ಕಲಾವಿದ ತನ್ನ ಒಂದೊಂದು ದಿನದಲ್ಲಿ ಕೂಡಾ ತನ್ನ ವಯಕ್ತಿಕ ವೇದನೆಯನ್ನು ಯಾರಲ್ಲಿ ತೋರ್ಪಡಿಸದೆ ಕಾಲವನ್ನು ಕಳೆಯುತ್ತ ಬಂದಿದ್ದಾನೆ.

ಕಾರಣ ನಂಬಿಕೆ...! ಇಂದು ಸರಿಯಾಗಬಹುದು ಬದುಕು ನಾಳೆ ಸರಿಯಾಗಬಹುದು ಎಂದು.ಇದೀಗ ಬದುಕಿನ ಬದಲಾವಣೆ ಮಹಾಮಾರಿ ಕೊರೋನದ ಆರ್ಭಟ ಮಾಸುತ ಬರುವಾಗ ಏನೋ ಕಲಾವಿದನ ಬದುಕಲ್ಲಿ ಮತ್ತೆ ಚಿಗುರೊಡೆದು ನಿಂತಿದೆ.ಅಷ್ಟರಲ್ಲಿ ಸರಕಾರದ ಆದೇಶದಲ್ಲಿ ತಾರತಮ್ಯ ಮೂಡಿದೆ.ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ಇದೆ ಎಂದು ಆದೇಶ ವನ್ನು ಸರಕಾರ ಹೊರಡಿಸಿದೆ.ತುಂಬಾ ಸಂತೋಷದ ವಿಚಾರ.ಯಕ್ಷಗಾನ ನಮ್ಮ ತುಳುನಾಡ ಗಂಡುಕಲೆ ಅದನ್ನೇ ನಂಬಿಕೊಂಡು ಅದೆಷ್ಟೋ ಕಲಾವಿದರು ಬದುಕನ್ನು ಕಟ್ಟಿಕೊಂಡವರು ಇದ್ದಾರೆಆರ್ಥಿಕ ಸಂಕಷ್ಟದ ಕಲಾವಿದರು ಇದ್ದಾರೆ.ಈ ನಿರ್ಣಯ ಅವರ ಪಾಲಿಗೆ ಸಂತೋಷದ ಕ್ಷಣ.

ಆದರೆ ಕಲಾವಿದರಲ್ಲಿ ಕಲೆಯಲ್ಲಿ ತಾರತಮ್ಯ ಏಕೆ ಎಂಬುದೇ ಒಂದು.ಚಿಂತೆತುಳುನಾಡಿನಲ್ಲಿ ಯಕ್ಷಗಾನ ಕಲಾವಿದರು ಅಲ್ಲದೆ ನಾಟಕ ರಂಗದ ಕಲಾವಿದರು ಸಂಗೀತ ರಸಮಂಜರಿ ಕಲಾವಿದರು ನೃತ್ಯ ಕಲಾವಿದರು ಜಾದೂ ಕಲಾವಿದರು ದೈವಾರಾಧನೆ ಮಾಡುವ ಕಲಾವಿದರು ಇದ್ದಾರೆ.ಅವರು ಕೂಡ ಯಕ್ಷಗಾನ ಕಲಾವಿದರ ಹಾಗೆ ಶೇಕಡಾ ನೂರರಲ್ಲಿ ಎಪ್ಪತ್ತು ಮಂದಿ ಕಲಾವಿದರು ಕಲೆಯನ್ನೇ ನಂಬಿ ಬದುಕುತ್ತಿದ್ದಾರೆ.


ಹಾಗಿರುವಾಗ ಕಲೆಯಲ್ಲಿ ಕಲಾವಿದರಲ್ಲಿ ತಾರತಮ್ಯ ಬೇಡ.ನಾವೆಲ್ಲರೂ ಹೊಟ್ಟೆ ಪಾಡಿಗಾಗಿ ಕಲೆಯನ್ನೇ ನಬಿಕೊಂಡು ಆರಾಧಿಸಿಕೊಂಡು.ಬಂದವರು ನಿಮ್ಮ ಸರಕಾರದ ಆದೇಶದಲ್ಲಿ ಎಲ್ಲಾ ಕಲಾವಿದರ ಬಾಳಿನಲ್ಲಿ ಸಂತೋಷದ ನಗು ಮೂಡುವಂತಿರಲಿ  ಎಂದು ನಿಮ್ಮಲ್ಲಿ ಎಲ್ಲಾ ಕಲಾ ವರ್ಗದ ಕಲಾವಿದರ ಪರವಾಗಿ ವಿನಮ್ರವಾಗಿ ಬೇಡಿಕೊಳ್ಳುವ ತುಳು ರಂಗಭೂಮಿ ಕಲಾವಿದ ಸುನಿಲ್ ನೆಲ್ಲಿ ಗುಡ್ಡೆ.


https://www.timesofkarkala.in/2020/10/blog-post_8.html







Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget