ಸುಳ್ಯ: ಮತಾಂತರಗೊಂಡು ವಂಚನೆಗೊಳಗಾದ ಯುವತಿ-ಶರಣ್ ಪಂಪ್ವೆಲ್ ಸಮ್ಮುಖ ಠಾಣೆಗೆ ದೂರು-Times of karkala

 ಫೇಸ್ ಬುಕ್ ಮೂಲಕ ಪರಿಚಯವಾಗಿ ಮತಾಂತರಗೊಂಡ ಬಳಿಕ ಅತ್ತ ತವರು ಮನೆ ಇತ್ತ ಗಂಡನ ಮನೆಯೂ ಇಲ್ಲದೆ ಮೋಸಕ್ಕೊಳಗಾಗಿ ಆತ್ಮಹತ್ಯೆಯ ಹಾದಿ ತುಳಿದಿದ್ದ ಮಹಿಳೆ ಇದೀಗ ಬಜರಂಗ ದಳದ ಮುಖಂಡರ ಮನವರಿಕೆಯಿಂದಾಗಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದು, ಸಂಘಟನೆ ಮುಖಂಡರ ಸಮ್ಮುಖದಲ್ಲಿ ಸುಳ್ಯ ಠಾಣೆಗೆ ದೂರು ನೀಡಿದ್ದಾರೆ.

ಮೂಲತಃ ಕೇರಳದ ಕಣ್ಣೂರು ನಿವಾಸಿಯಾಗಿರುವ ಶಾಂತಿ ಎಂಬ ಯುವತಿಗೆ ಸುಳ್ಯದ ಖಲೀಲ್ ಎಂಬ ವ್ಯಕ್ತಿ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದ. ಬಳಿಕ ಸ್ನೇಹಕ್ಕೆ ಸ್ನೇಹ ಬೆಳೆದು ಪ್ರೇತಿ ಪ್ರೇಮವೆಂಡು ಅಂತಿಮವಾಗಿ ಶಾಂತಿಯನ್ನು ಮದುವೆಯಾದ ಖಲೀಲ್, ಆಕೆಯನ್ನು ತನ್ನ ಧರ್ಮಕ್ಕೆ ಮತಾಂತರ ಕೂಡ ಮಾಡಿದ್ದ. ಹಾಗೂ ಆಕೆಯನ್ನು ಆಸಿಯಾ ಎಂಬುವುದಾಗಿ ಹೆಸರು ಬದಲಾಯಿಸಿದ್ದ.


ಆದರೆ, ಇದೀಗ ಖಲೀಲ್ ತನ್ನನ್ನು ತೊರೆದು ಹೋಗಿದ್ದಾನೆ ಇದಕ್ಕೆ ಆತನ ಸಹೋದರ ಕಾರಣ ಎಂದು ಆರೋಪಿಸಿ ಆತನ ವಿರುದ್ದ ಸುಳ್ಯ ಠಾಣೆಗೆ ದೂರು ನೀಡಿದ್ದಾರೆ. ವಿಶ್ವಹಿಂದು ಪರಿಷತ್ ಮುಖಂಡ ಶರಣ್ ಪಂಪ್ ವೇಲ್ ಜತೆ ಆಗಮಿಸಿದ ಆಕೆ ಸುಳ್ಯ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಸುದಿರ್ಘ ಚರ್ಚಿಸಿದ ಬಳಿಕ ದೂರು ನೀಡಿದರು. ಸ್ಥಳೀಯ ವಿಶ್ವಹಿಂದು ಪರಿಷತ್ ಬಜರಂಗದಳದ ಕೆಲವು ಮುಖಂಡರು, ದುರ್ಗವಾಹಿನಿಯವರು ಜತೆಗಿದ್ದರು.

ಜಾಹೀರಾತು 

  
Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget