ಕಾರ್ಕಳ, ನ.1:ಕರುಣಾಳು ಬಾ ಬೆಳಕು ಕಾರ್ಯಕ್ರಮದಡಿಯಲ್ಲಿ ದಿ| ಸಂತೋಷ್ ಮಲ್ಯ ಅವರ ಸ್ಮರಣಾರ್ಥ ಅವರ ಗೆಳೆಯರ ಬಳಗ ಹಾಗೂ ಯುವವಾಹಿನಿ ಕಾರ್ಕಳ ಘಟಕ ಮತ್ತು ರೋಟರಿ ಆನ್ಸ್ ಕ್ಲಬ್ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 31.10.2020ನೇ ಶನಿವಾರ 6ನೇ ಸೋಲಾರ್ ಘಟಕವನ್ನು ಅತ್ತೂರು ಪರಿಸರದ ಶ್ರೀಮತಿ ಅಮಿತಾ ಅವರ ಮನೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಸೋಲಾರ್ ಘಟಕವನ್ನು ಅಳವಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರೋಟರಿ ಆನ್ಸ್ ಕ್ಲಬ್ ಕಾರ್ಕಳದ ಅಧ್ಯಕ್ಷರಾದ ಶ್ರೀಮತಿ ರಮಿತಾ ಶೈಲೇಂದ್ರ ರಾವ್, ಕಾರ್ಯದರ್ಶಿ ಸುಮಾ ನಾಯಕ್ ಹಾಗೂ ಕಾರ್ಕಳ ಯುವವಾಹಿನಿ ಘಟಕದ ಅಧ್ಯಕ್ಷರಾದ ಗಣೇಶ್ ಸಾಲಿಯಾನ್, ಕಾರ್ಯದರ್ಶಿ ತಾರಾನಾಥ ಕೋಟ್ಯಾನ್, ನಿರ್ದೇಶಕರಾದ ಅಶೋಕ್ ಸುವರ್ಣ, ರಾಕೇಶ್ ಅಮೀನ್, ಸುರೇಂದ್ರ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
Post a comment