ದೇವರಿಗೆ ಕೊಟ್ಟ ಮಾತು ಉಳಿಸಲು ಉದ್ಯೋಗ ಸಿಕ್ಕ ಕೂಡಲೇ ಆತ್ಮಹತ್ಯೆ ಮಾಡಿಕೊಂಡಾತ -Times Of Karkala

ನಾಗರಕೋಯಿಲ್,ನ.1:ಉದ್ಯೋಗವಿಲ್ಲವೆಂದು ಪರಿತಪಿಸುತ್ತಿದ್ದ ವ್ಯಕ್ತಿ ಒಂದೊಳ್ಳೆ ಉದ್ಯೋಗ ಸಿಕ್ಕ ತಕ್ಷಣ ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಘಟನೆ ತಮಿಳುನಾಡಿನಲ್ಲಿ ಕಂಡುಬಂದಿದೆ. 

ದೇವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಈ ನಿರ್ಧಾರ ಕೈಗೊಂಡಿರುವುದಾಗಿ   ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾನೆ.  

ತಮಿಳುನಾಡಿನ ನಾಗರಕೋಯಿಲ್ ನಿವಾಸಿ ನವೀನ್(32) ಮೃತ ವ್ಯಕ್ತಿ. ಜೀವನದಲ್ಲಿ ತುಂಬಾ ದಿನಗಳಿಂದ ಉದ್ಯೋಗ ದೊರಕಲಿಲ್ಲ ಎಂದು ಕೊರಗುತ್ತಿದ್ದ. ಹಾಗೆಯೆ "ನನಗೊಂದು ಒಳ್ಳೆಯ ಉದ್ಯೋಗ ದೊರಕಿದರೆ ನಾನು ಬಂದು ನಿನ್ನೊಂದಿಗೆ ಇರುತ್ತೇನೆ " ಎಂದು ದೇವರಿಗೆ ಹರಕೆ ಕಟ್ಟಿಕೊಂಡಿದ್ದ. 

ಅದಾದ ಕೆಲ ದಿನಗಳಲ್ಲಿ ನವೀನ್ ಗೆ ಬ್ಯಾಂಕ್ ಆಫ್ ಇಂಡಿಯಾದ ಮುಂಬೈ ಬ್ರಾಂಚ್ ನಲ್ಲಿ ಒಳ್ಳೆ ಕೆಲಸ ಸಿಕ್ಕಿತ್ತು. ಆದರೆ ನವೀನ್ ಅಲ್ಲಿ ಕೆಲಸ ಮಾಡಿದ್ದೂ ಹದಿನೈದು ದಿನಗಳು ಮಾತ್ರ. ಶುಕ್ರವಾರ ತಿರುವನಂತಪುರಂಗೆ ವಿಮಾನದ ಮೂಲಕ ತೆರಳಿದ ನವೀನ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ನಾನು ದೇವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕಿತ್ತು. ನನಗೆ ಉದ್ಯೋಗ ಕೊಡು ಎಂಬ ಬೇಡಿಕೆಯನ್ನು ದೇವರು ಪೂರೈಸಿದ. ಹಾಗೆಯೆ ಅವನೊಂದಿಗೆ ಇರಲು ನಾನು ತೆರಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟಿದ್ದಾನೆ. ನಾಗರಕೋಯಿಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ವಶಕ್ಕೆ ಪಡೆದಿದ್ದಾರೆ.

ನವೀನ್ ಸಾವಿಗೆ ಬೇರೆ ಏನಾದರೂ ಕಾರಣ ಇರಬಹುದೇ ಎಂದು ಪೊಲೀಸರು ತನಿಖೆ ಶುರು ಮಾಡಿದ್ದಾರೆ. 


 



https://www.timesofkarkala.in/2020/10/blog-post_8.html





                                                            


Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget