ಹೆಬ್ರಿ:ವಿಪರೀತ ಕುಡಿತ,ಹಾಡಿಯಲ್ಲಿ ಮಲಗಿದಲ್ಲಿಯೇ ಮೃತಪಟ್ಟ ವ್ಯಕ್ತಿ-Times of karkala

ಹೆಬ್ರಿ:ವಿಪರೀತ ಕುಡಿತದ ಚಟ ಹೊಂದಿದ್ದ ವ್ಯಕ್ತಿಯೋರ್ವರು ಹೆಬ್ರಿಯ ಸುಭಾಸ್ ಬಾರ್ ನ ಬದಿಯಲ್ಲಿರುವ ಚರ್ಚ್ ನ ಹಿಂದುಗಡೆಯಲ್ಲಿ ಹಾಡಿಯಲ್ಲಿ ಮಲಗಿದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.ಜನಾರ್ಧನ ಆಚಾರಿ(55) ಮೃತಪಟ್ಟವರು.


ಈ ಕುರಿತು ಅವರ ಪುತ್ರ ವಿಘ್ನೇಶ್ ಹೆಬ್ರಿ ಪೊಲೀಸ್‌ ಠಾಣೆ ಯಲ್ಲಿ ದೂರು ನೀಡಿದ್ದಾರೆ.

ಪೊಲೀಸ್ ವರದಿ:

ಹೆಬ್ರಿ: ಫಿರ್ಯಾದಿದಾರರಾದ ವಿಘ್ನೇಶ್ ಇವರ ತಂದೆ ಜನಾರ್ಧನ ಆಚಾರಿ(55ವರ್ಷ)ಯವರು ಮರದ ಕೆಲಸ ಮಾಡಿಕೊಂಡಿದ್ದು. ನಿನ್ನೆ ದಿನ ದಿನಾಂಕ; 09/11/2020 ರಂದು ರಾತ್ರಿ 10-00 ಗಂಟೆಯಿಂದ ಈ ದಿನ ದಿನಾಂಕ: 10/11/2020 ರಂದು ಬೆಳಿಗ್ಗೆ 08-00 ಗಂಟೆಯ ಮದ್ಯಾವಧಿಯಲ್ಲಿ ವಿಪರೀತ ಮದ್ಯಪಾನ ಮಾಡಿ ಹೆಬ್ರಿಯ ಸುಭಾಸ್ ಬಾರ್ ನ ಬದಿಯಲ್ಲಿರುವ ಚರ್ಚ್ ನ ಹಿಂದುಗಡೆಯಲ್ಲಿ ಹಾಡಿಯಲ್ಲಿ ಮಲಗಿದವರು ಅಲ್ಲಿಯೇ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 23/2020 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 
https://www.timesofkarkala.in/2020/10/blog-post_8.htmlPost a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget