ಶಾಂತಿನಿಕೇತನ ಯುವ ವೃಂದ ಕುಡಿಬೈಲು ಕುಚ್ಚೂರು ಮತ್ತು ನೆಹರು ಯುವ ಕೇಂದ್ರ ಉಡುಪಿ ಇವರ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಸಂವಿಧಾನ ದಿನಾಚರಣೆ ಯನ್ನು ಆಚರಿಸಲಾಯಿತು...ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನರೇಂದ್ರ ರವರು ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಪಾತ್ರ ಮತ್ತು ನಮ್ಮ ಸಂವಿಧಾನದ ಶ್ರೇಷ್ಠತೆಯ ಬಗ್ಗೆ ಮಾತನಾಡಿದರು
ಜಗತ್ತಿನ ಶ್ರೇಷ್ಠ ಸಂವಿಧಾನಗಳಲ್ಲಿ ಭಾರತವು ಒಂದು, ಎಲ್ಲಾ ಜಾತಿ, ಧರ್ಮಗಳಿಗೆ ಸಮಾನತೆ ಮತ್ತು ಅವಕಾಶವನ್ನು ನೀಡಿದೆ, ಆದುದರಿಂದ ನಾವೆಲ್ಲ ಅಂಬೇಡ್ಕರ್ ಅವರ ಆಶಯದಂತೆ ಬದುಕಿ, ಸಂವಿಧಾನವನ್ನು ಗೌರವಿಸಬೇಕೇಂದರು. ಅವರ ಆಶಯ ಕಾರ್ಯರೂಪಕ್ಕೆ ಬಂದಾಗ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.
ಸಂಘಟನ ಕಾರ್ಯದರ್ಶಿಯಾದ ಗಣೇಶ್ ಶೆಟ್ಟಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಸಂಘದ ಅಧ್ಯಕ್ಷರಾದ ರಾಜೇಶ್ ಅಧ್ಯಕ್ಷೀಯ ನುಡಿಗಳನ್ನಾಡಿದರು.ಇದೇ ಸಂದರ್ಭದಲ್ಲಿ ಶಾಂತಿನಿಕೇತನ ನಲಿಕಲಿ ವಿದ್ಯಾರ್ಥಿಗಳಿಗೆ ಸಂವಿಧಾನದ ಕುರಿತು ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿದ್ದು ಸೌಜನ್ಯ ಪ್ರಥಮ ಬಹುಮಾನ, ನಿತಿನ್ ದ್ವಿತೀಯ ಬಹುಮಾನ ಪಡೆದರು..ರಾಜೇಶ್ರೀ ನಿರೂಪಿಸಿ ಸೌಜನ್ಯ ಸ್ವಾಗತಿಸಿ ನಿತಿನ್ ವಂದಿಸಿದರು..
ಕಾರ್ಯಕ್ರಮದಲ್ಲಿ ಸಂತೆಕಟ್ಟೆ ಘಟಕದ ರಶಿನ್ ಶೆಟ್ಟಿ, ಶಾಂತಿನಿಕೇತನ ಸೌಹಾರ್ದ ನಿರ್ದೇಶಕರಾದ ವಿನೋದ , ಕೆ ಗಣೇಶ್ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಜಾಹೀರಾತು
Post a comment