ಕಾರ್ಕಳ:ಕಂದಾಯ ನಿರೀಕ್ಷಕರಾಗಿ ಸೇವಾಭಡ್ತಿ ಹೊಂದಿದ ಕಸಬಾ ಗ್ರಾಮದ ಗ್ರಾಮಕಾರಣಿಕರಾದ ಶಿವಪ್ರಸಾದ್ ವಿ ರಾವ್ ಇವರನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ(ರಿ) ಬಸ್ಸ್ ಸ್ಯಾಂಡ್ ಕಾರ್ಕಳ ಮತ್ತು ರೋಟರಿ ಆನ್ಸ್ ಕ್ಲಬ್ ನ ಜಂಟಿ ಆಶ್ರಯದಲ್ಲಿ ಅಭಿನಂದಿಸಲಾಯಿತು.
ಬಸ್ಸ್ನಿಲ್ದಾಣದ ಬಳಿ ಇರುವ ಕಂದಾಯ ಭವನದಲ್ಲಿ ನಡೆದ ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಪುರಸಭಾ ಅಧ್ಯಕ್ಷರಾದ ಸುಮಾಕೇಶವ್ ವಹಿಸಿದ್ದರು.ಮುಖ್ಯ ಅಥಿತಿಗಳಾಗಿ ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಉಪಾದ್ಯಕ್ಷೆ ಪಲ್ಲವಿ, ರೋಟರಿ ಆ್ಯನ್ಸ್ ಕ್ಲಬ್ ಅದ್ಯಕ್ಷೆ ರಮಿತಾ ಶೈಲೇಂದ್ರ, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ದೇವಾಡಿಗ, ಗ್ರಾಮಕಾರಣಿಕ ರಿಯಾಜ್ ಅಹಮ್ಮದ್, ಪುರಸಭಾ ಸದಸ್ಯ ಅಶ್ಫಕ್ ಅಹಮ್ಮದ್ ವೇದಿಕೆಯಲ್ಲಿ ಉಪಸ್ತಿತರಿದ್ದರು.
ಪುರಸಭಾ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು. ಸಮಿತಿಯ ಸ್ಥಾಪಕ ಪುರಸಭಾ ಸದಸ್ಯ ಶುಭದರಾವ್ ನಿರೂಪಿಸಿ ಅಥಿತಿಗಳನ್ನು ಸ್ವಾಗತಿಸಿದರು ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ದನ್ಯವಾರವಿತ್ತರು.
ಜಾಹೀರಾತು
Post a comment