ಮತ್ತೊಂದು ವಿನೂತನ ಕಾರ್ಯಕ್ಕೆ ಸಜ್ಜಾಗಿದೆ ಕಾರ್ಕಳ!ಇಲ್ಲಿದೆ ಸಂಪೂರ್ಣ ಮಾಹಿತಿ -Times of karkala

ಉಡುಪಿ ಜಿಲ್ಲೆಯ ಅತೀ ಸುಂದರವಾದ ನದಿ ಸ್ವರ್ಣಾ. ಅದು ಅತೀ ಹೆಚ್ಚು ಕೃಷಿ ಭೂಮಿಗೆ ನೀರು ಉಣಿಸುವ ಮತ್ತು ಶುದ್ದ ಕುಡಿಯುವ ನೀರನ್ನು ಒದಗಿಸುವ ನದಿ. ಅದರ ಉಗಮ ಆಗಿರುವುದು ಕಾರ್ಕಳದಲ್ಲಿ. ಈ ನದಿಯ ಪಾವಿತ್ರ್ಯತೆಯನ್ನು ಕಾಪಾಡುವ "ಸ್ವರ್ಣಾರಾಧನಾ" ಎಂಬ ಹೆಸರಿನ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಈಗಾಗಲೇ  ಕೈಗೆತ್ತಿಕೊಳ್ಳಲಾಗಿದ್ದು ಹಲವು ಹಂತಗಳಲ್ಲಿ ನಡೆಯಲಿದೆ. 

 ಮೊದಲ ಹಂತದಲ್ಲಿ   ಸ್ವರ್ಣಾ ನದಿಯು ಹರಿಯುವ ಪಾತ್ರದ ಐದು ಗ್ರಾಮಗಳನ್ನು ಸ್ಥಳೀಯ ಸಂಘಟನೆಗಳ ಮೂಲಕ ದತ್ತು ಸ್ವೀಕಾರ ಮಾಡಲಾಗಿದ್ದು ಮೊದಲ ಹಂತದಲ್ಲಿ ನದೀ ತೀರದ ಸ್ವಚ್ಚತೆ ಹಾಗೂ ಪ್ಲಾಸ್ಟಿಕ್ ಹೆಕ್ಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 



ಹೆರ್ಮುಂಡೆ, ಮುಂಡ್ಲಿ , ಮಾಳ, ತೆಳ್ಳಾರು, ಮೂಡಾರು ಈ ಐದು ಗ್ರಾಮಗಳಲ್ಲಿ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಸ್ವರ್ಣಾ ನದಿಯ ಪಾತ್ರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಮೊದಲ ಹೆಜ್ಜೆಯನ್ನು  ಇರಿಸಲಾಗಿದೆ. ಹಾಗೆಯೇ ಕಾರ್ಕಳ ಪುರಸಭೆಯ ವ್ಯಾಪ್ತಿಯಲ್ಲಿ ಸ್ವಚ್ಚತಾ ಬ್ರಿಗೇಡ್, ಕಾರ್ಕಳ ರೋಟರಾಕ್ಟ್,  ರೋಟರಿ ಆನ್ಸ್ ಕಾರ್ಕಳ ಮೊದಲಾದ ಸಂಸ್ಥೆಗಳ  ಸಹಯೋಗದಲ್ಲಿ ನದೀ ಪಾತ್ರದ ಸ್ವಚ್ಛತೆಯ ಕಾರ್ಯವನ್ನು ಸಂಕಲ್ಪಿಸಲಾಗಿದೆ. ಈ ಗ್ರಾಮಗಳ ವ್ಯಾಪ್ತಿಯಲ್ಲಿ ನದಿ ಪಾತ್ರದ ಸ್ವಚ್ಛತೆಯನ್ನು ಯಶಸ್ವಿಯಾಗಿ ಮಾಡಿದ ಓರ್ವ ವ್ಯಕ್ತಿಗೆ ಪರಿಸರ ಪ್ರೇಮಿ ಪ್ರಶಸ್ತಿ, ಒಂದು ಕುಟುಂಬಕ್ಕೆ ಪರಿಸರ ಪ್ರೇಮಿ ಕುಟುಂಬ, ಒಂದು ಸಂಘಟನೆಗೆ ಪರಿಸರ ಪ್ರೇಮಿ ಸಂಘಟನೆ ಮೊದಲಾದ ಪ್ರಶಸ್ತಿಗಳನ್ನು ಕೂಡ ಘೋಷಣೆ ಮಾಡಲಾಗಿದೆ. 

ಉಡುಪಿಯ ಜಲತಜ್ಞರಾದ ಡಾಕ್ಟರ್ ನಾರಾಯಣ ಶೆಣೈ ಅವರ ನೇತೃತ್ವದಲ್ಲಿ ಆರಂಭ ಆಗಿರುವ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಕಾರ್ಕಳದ ಯುವವಾಹಿನಿ, ರೋವರ್ಸ್ ಮತ್ತು ರೇಂಜರ್ಸ್, ಸ್ಕೌಟ್ಸ್ ಮತ್ತು ಗೈಡ್ಸ್, ರಾಷ್ಟ್ರೀಯ ಸ್ವಯಂಸೇವಕ ಸಂಘ ಮುದರು ಸಂಘಟನೆ,  ಯುವಸ್ಪಂದನ ಗೆಳೆಯರ ಬಳಗ ಮುಂಡ್ಲಿ, ಹಸಿರೇ ಉಸಿರು ಸಂಘಟನೆ ತೆಳ್ಳಾರು ಮೊದಲಾದ ಸಂಘಟನೆಗಳು ಕೈ ಜೋಡಿಸಿವೆ. ನವೆಂಬರ್ 29ರ ಆದಿತ್ಯವಾರ  ಸೂರ್ಯೋದಯಕ್ಕಿಂತ ಮೊದಲೇ ಆರಂಭವಾಗುವ ಈ  ಯೋಜನೆಯನ್ನು ಸಾಕಾರ ಮಾಡಲು ಗ್ರಾಮಸ್ಥರೇ ವಿವಿಧ ಸಂಘಟನೆಗಳ ಮೂಲಕ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ.

ಜಾಹೀರಾತು 

 



 







Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget