ವಿನಾಯಕ ಫ್ರೆಂಡ್ಸ್ ಕಾರ್ಕಳ ವತಿಯಿಂದ ದೀಪಾವಳಿಯ ಪ್ರಯುಕ್ತ ಗೋ ಪೂಜೆ ಹಾಗೂ ವಿನಾಯಕ ದಾಮೋದರ ಸಾವರ್ಕರ್ ಕಥಾ ಕಾರ್ಯಕ್ರಮ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ವೈಸ್ ಚೀಫ್ ಮಾರ್ಷಲ್ ರಮೇಶ್ ಕಾರ್ಣಿಕ್, ಪುರಸಭಾ ಸದಸ್ಯರಾದ ಭಾರತಿ ಅಮೀನ್,ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ರಮಿತಾ ಶೈಲೇಂದ್ರ ರಾವ್,ವಿನಾಯಕ ಫ್ರೆಂಡ್ಸ್ ಉಪಾಧ್ಯಕ್ಷ ವಿಜಯ ನಾಯಕ್ ಉಪಸ್ಥಿತರಿದ್ದರು.
ಸಾವರ್ಕರ್ ಅವರ ಜೀವನ ಕಥೆಯನ್ನು ಎಬಿವಿಪಿ ಪ್ರಮುಖ್ ಮನೀಶ್ ಕುಲಾಲ್, ಕಾರ್ಯಕ್ರಮವನ್ನು ಸುಬ್ರಮಣ್ಯ ದೇವಾಡಿಗ ಇವರು ನಿರ್ವಹಿಸಿದರು.
ಸದ್ಭಾವನಾ ನಗರದಲ್ಲಿ ಬಡ ಕುಟುಂಬಕ್ಕೆ ರಮಿತಾ ಶೈಲೇಂದ್ರ ರಾವ್ ಅವರ ನೇತೃತ್ವದಲ್ಲಿ ರಮೇಶ್ ಕಾರ್ಣಿಕ್ ಹಾಗೂ ಭಾರತಿ ಅಮೀನ್ ಇವರು ಸೋಲಾರ್ ದೀಪದ ಮೂಲಕ ಮನೆಯನ್ನು ಬೆಳಗಿಸುವ ಮೂಲಕ ದೀಪಾವಳಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿನಾಯಕ ಫ್ರೆಂಡ್ಸ್ ನ ಸರ್ವ ಸದಸ್ಯರು ಇದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಜಾಹೀರಾತು
Post a comment