ಯಕ್ಷದ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ರಿ.ಮಂಗಳೂರು ಇದರ ಕಾರ್ಕಳ ಘಟಕದ ಐದನೇ ವರ್ಷದ ಪಂಚಮ ಪಟ್ಲ ಸಂಭ್ರಮ,ಕಲಾ ಗುರುಗಳ ಸನ್ಮಾನ,ಯಕ್ಷಗಾನ ಬಯಲಾಟ-Times of karkala

ಯಕ್ಷದ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ರಿ ಮಂಗಳೂರು ಇದರ ಕಾರ್ಕಳ ಘಟಕದ ಐದನೇ ವಾರ್ಷಿಕ ಪಟ್ಲ ಸಂಭ್ರಮ. ಕಲಾ ಗುರುಗಳ ಸನ್ಮಾನ, ಬಯಲಾಟ,  ಇದೇ ನವೆಂಬರ್ 29 ಆದಿತ್ಯವಾರ  ಕಾರ್ಕಳದ ಮಾರಿಗುಡಿ ವಠಾರದಲ್ಲಿ ಸಂಜೆ  5 ಗಂಟೆಗೆ ಜರಗಲಿದೆ. 

ಯಕ್ಷಗಾನದ ಅಶಕ್ತ ಕಲಾವಿದರ  ಶ್ರೇಯೋಬಿವೃದ್ದಿಗಾಗಿ  ಭಾಗವತ   ಮಾನ್ಯ ಪಟ್ಲ ಸತೀಷ ಶೆಟ್ಟಿ ಯವರು ಸಮಾನ ಮನಸ್ಕರ ಜತೆಗೂಡಿ ಕಟ್ಟಿ ಕೊಂಡ ಪಟ್ಲ ಪೌಂಡೇಶನ್ ಟ್ರಸ್ಟ್  ದೇಶದ ಹಲವಾರು ಕಡೆ ಸಂಸ್ಥೆಯ ಕಾರ್ಯ ಚಟುವಟಿಕೆಗಾಗಿ ಘಟಕಗಳನ್ನು ಸ್ಥಾಪಿಸಿ ಯಕ್ಷಗಾನಾಸಕ್ತರನ್ನು ಒಂದುಗೂಡಿಸಿ  ನೂರಾರು ಕಲಾವಿದರಿಗೆ  ಈಗಾಗಲೇ ಸಹಾಯ ಮಾಡಿದ್ದಾರೆ. ಮುಂದೆಯೂ ಕಲೆಯನ್ನೇ ನಂಬಿ ಬದುಕಿದ ಕಲಾವಿದರ ಬದುಕು  ಹಸನಾಗಬೇಕು ಎಂಬ ನೆಲೆಯಿಂದ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ. 

ನವೆಂಬರ್ 29 ರಂದು ಸಂಜೆ ಕಾರ್ಕಳದಲ್ಲಿ ಕಾರ್ಕಳ ಘಟಕದ ಐದನೇ ಸಂಭ್ರಮವು ಕಾರ್ಕಳ ವಿದಾನ ಸಭಾ ಕ್ಷೇತ್ರದ ಶಾಸಕರಾದ ವಿ ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ಡಾ. ಮಂಜುನಾಥ ಕಿಣಿಯವರು  ಉದ್ಘಾಟಿಸಲಿದ್ದಾರೆ. ಗೌರವ ಉಪಸ್ಥಿತಿಯಲ್ಲಿ ಮುನಿಯಾಲು ಉದಯಕುಮಾರ್ ಶೆಟ್ಟಿ  ,  ಫೌಂಡೇಶನ್ನ ಸ್ಥಾಪಕಾದ್ಯಕ್ಷ ಪಟ್ಲ ಸತೀಷ ಶೆಟ್ಟಿ , ಪ್ರದಾನ ಕಾರ್ಯದರ್ಶಿ ಅಡ್ಯಾರ್ ಪುರುಷೋತ್ತಮ ಭಂಡಾರಿ ,  ಕೋಶಾದಿಕಾರಿ  ಸಿ ಎ ಸುದೇಶ್ ಕುಮಾರ್ ರೈ ,   ಉಪಸ್ಥಿತರಿದ್ದಾರೆ. ಈ ಸಂದರ್ಭದಲ್ಲಿ ಯಕ್ಷಗಾನದ ಗುರುಗಳಾದ ಕೆರೆವಾಸೆ ಆನಂದ ಗಡಿಗಾರ್ ಮತ್ತು ಕಾರ್ಕಳ ಸತೀಷ ಮಡಿವಾಳ ಇವರನ್ನು ಗಣ್ಯರ ಸಮಕ್ಷಮ ಸನ್ಮಾನಿಸಲಾಗುವುದು. ಕಾರ್ಯಕ್ರಮದಂಗವಾಗಿ ಪಾವಂಜೆಯ  ಸುಭ್ರಹ್ಮಣ್ಯ ಮೇಳದವರಿಂದ  "ಶ್ರೀ ಹರಿದರ್ಶನ" ಪೌರಾಣಿಕ ಬಯಲಾಟ ರಾತ್ರಿ 10.30 ರತನಕ ಜರಗಲಿದೆ. ಎಂದು ಘಟಕದ ಕಾರ್ಯದರ್ಶಿ ಮಹಾವೀರ ಪಾಂಡಿ ಕಾಂತಾವರ  ಸಂಚಾಲಕರಾದ ಪ್ರೊ. ಪದ್ಮನಾಭ ಗೌಡ, ಅದ್ಯಕ್ಷರಾದ ವಿಜಯ ಶೆಟ್ಟಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಜಾಹೀರಾತು 

  Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget