December 2020

 


ಕಾರ್ಕಳ ತಾಲೂಕಿನ ಒಟ್ಟು 34 ಗ್ರಾಮ ಪಂಚಾಯತ್‌‌‌ನಲ್ಲಿ 30 ಪಂಚಾಯತ್‌‌ನಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ ಕೇವಲ 2 ಪಂಚಾಯತ್‌ಗಳಲ್ಲಿ ಗೆಲುವು ಸಾಧಿಸಿದೆ.

ಚಾರಾ ಗ್ರಾ.ಪಂ.ನಲ್ಲಿ 7 ಬಿಜೆಪಿ ಬೆಂಬಲಿತರು, 3 ಕಾಂಗ್ರೆಸ್‌‌‌ ಬೆಂಬಲಿತರು ಜಯ ಸಾಧಿಸಿದ್ದಾರೆ.


ನಾಡ್ಪಾಲು ಗ್ರಾ.ಪಂ ಬಿಜೆಪಿ ಬೆಂಬಲಿತರ ಕೈ ಸೇರಿದೆ.


ವರಂಗ ಗ್ರಾ.ಪಂ.ನಲ್ಲಿ 14 ಸ್ಥಾನ ಬಿಜೆಪಿ ಬೆಂಬಲಿತರಿಗೆ, 4 ಸ್ಥಾನಗಳು ಕಾಂಗ್ರೆಸ್‌ ಬೆಂಬಲಿತರ ಪಾಲಾಗಿದೆ.


ಶಿವಪುರ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರಿಗೆ ಆರು ಸ್ಥಾನ, ಕಾಂಗ್ರೆಸ್‌ ಬೆಂಬಲಿತರಿಗೆ ಐದು ಸ್ಥಾನ ದೊರತಿದೆ.


ಕಡ್ತಲ ಗ್ರಾ.ಪಂ.ನಲ್ಲಿ 9 ಸ್ಥಾನ ಬಿಜೆಪಿ ಬೆಂಬಲಿತರಿಗೆ, 2 ಸ್ಥಾನ ಕಾಂಗ್ರೆಸ್‌‌ ಬೆಂಬಲಿತರಿಗೆ ಹಾಗೂ ಮೂರು ಸ್ಥಾನ ಪಕ್ಷೇತರ ಗೆದ್ದುಕೊಂಡಿದೆ.


ಮುದ್ರಾಡಿ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರ ಪಾಲಾಗಿದ್ದು, 15 ಸ್ಥಾನ ಬಿಜೆಪಿ ಬೆಂಬಲಿತರು ಬಾಚಿಕೊಂಡಿದ್ದಾರೆ.


ಮರ್ಣೆ ಗ್ರಾ.ಪಂ.ನಲ್ಲಿ 14 ಬಿಜೆಪಿ ಬೆಂಬಲಿತರು, 10 ಕಾಂಗ್ರೆಸ್‌‌‌ ಬೆಂಬಲಿತರು ಜಯ ಗಳಿಸಿದ್ದಾರೆ.


ಶಿರ್ಲಾಲು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರಿಗೆ 5, ಕಾಂಗ್ರೆಸ್‌‌ ಬೆಂಬಲಿತರಿಗೆ 3 ಸ್ಥಾನ ದೊರೆತಿದೆ.


ಕೇರ್ವಾಶೆ ಗ್ರಾ.ಪಂ. ಬಿಜೆಪಿ ಬೆಂಬಲಿತರ ಪಾಲಾಗಿದ್ದು, 6 ಬಿಜೆಪಿ ಬೆಂಬಲಿತರು, 2 ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು ಲಭಿಸಿದೆ.


ಹಿರ್ಗಾ ಗ್ರಾ.ಪಂ. ಬಿಜೆಪಿ ಬೆಂಬಲಿತರ ಪಾಲಾಗಿದ್ದು, 13 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.


ಮಾಳ ಗ್ರಾ.ಪಂ.ನ ಅಧಿಕಾರ ಬಿಜೆಪಿ ಬೆಂಬಲಿತರಿಗೆ ದಕ್ಕಿದ್ದು, ಪಂಚಾಯತ್‌ನ 15 ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಬಾಚಿಕೊಂಡಿದ್ದಾರೆ.


ಮುಡಾರು ಗ್ರಾ.ಪಂ. ಬಿಜೆಪಿ ಬೆಂಬಲಿತರ ಪಾಲಾಗಿದ್ದು, 16 ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಪಡೆದುಕೊಂಡಿದ್ದಾರೆ.


ರೆಂಜಾಳ ಗ್ರಾ.ಪಂ.ನಲ್ಲಿ ಏಳು ಸ್ಥಾನ ಬಿಜೆಪಿ ಬೆಂಬಲಿತರಿಗೆ, ಒಂದು ಸ್ಥಾನ ಕಾಂಗ್ರೆಸ್‌ ಬೆಂಬಲಿತರ ಪಾಲಾಗಿದೆ.


ನಲ್ಲೂರು ಗ್ರಾ.ಪಂ.ನಲ್ಲಿ 11 ಬಿಜೆಪಿ ಬೆಂಬಲಿತರು, 2 ಕಾಂಗ್ರೆಸ್‌ ಬೆಂಬಲಿತರು ಜಯ ಗಳಿಸಿದ್ದಾರೆ.


ಮಿಯ್ಯಾರು ಗ್ರಾ.ಪಂ.ನಲ್ಲಿ 11 ಸ್ಥಾನ ಬಿಜೆಪಿ ಬೆಂಬಲಿತರಿಗೆ, ಎಂಟು ಸ್ಥಾನಗಳಲ್ಲಿ ಕಾಂಗ್ರೆಸ್‌ ಬೆಂಬಲಿತರು ಗೆಲುವು ಸಾಧಿಸಿದ್ದಾರೆ.


ಸಾಣೂರು ಗ್ರಾ.ಪಂ.ನಲ್ಲಿ 12 ಬಿಜೆಪಿ ಬೆಂಬಲಿತರು, ಆರು ಕಾಂಗ್ರೆಸ್‌ ಬೆಂಬಲಿತರು ಜಯ ಗಳಿಸಿದ್ದಾರೆ.


ಕಾಂತಾವರ ಗ್ರಾ.ಪಂ.ನ ಅಧಿಕಾರ ಬಿಜೆಪಿ ಬೆಂಬಲಿತರ ಪಾಲಾಗಿದ್ದು, ಆರು ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಪಡೆದುಕೊಂಡಿದ್ದಾರೆ.


ಎರ್ಲಪ್ಪಾಡಿ ಗ್ರಾ.ಪಂ.ನಲ್ಲಿ ಎಂಟು ಬಿಜೆಪಿ ಬೆಂಬಲಿತರು, ನಾಲ್ಕು ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.


ನೀರೆ ಗ್ರಾ.ಪಂ.ನಲ್ಲಿ ಬಿಜೆಪಿ ಪಾರಮ್ಯ ಸಾಧಿಸಿದೆ. 13 ಸ್ಥಾನಗಳು ಬಿಜೆಪಿ ಬೆಂಬಲಿತರ ತೆಕ್ಕೆಗೆ ಸೇರಿದ್ದು, ಕಾಂಗ್ರೆಸ್‌ ಬೆಂಬಲಿತ ಇಬ್ಬರಿಗೆ ಗೆಲುವು ಲಭಿಸಿದೆ.


ಕುಕ್ಕಂದೂರು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. 21 ಮಂದಿ ಬಿಜೆಪಿ ಬೆಂಬಲಿತರು ಹಾಗೂ 12 ಕಾಂಗ್ರೆಸ್‌ ಬೆಂಬಲಿತರು ಜಯಗಳಿಸಿದ್ದಾರೆ.


ಕಲ್ಯಾ ಗ್ರಾ.ಪಂ.ನಲ್ಲಿ 9 ಮಂದಿ ಬಿಜೆಪಿ ಬೆಂಬಲಿತರು ಹಾಗೂ ಓರ್ವ ಕಾಂಗ್ರೆಸ್‌ ಬೆಂಬಲಿತ ಗೆಲ್ಲುವ ಮುಖೇನ ಪಂಚಾಯತ್‌ ಅಧಿಕಾರ ಬಿಜೆಪಿ ಬೆಂಬಲಿತರ ಪಾಲಾಗಿದೆ.


ಬೈಲೂರು ಗ್ರಾ.ಪಂ.ನಲ್ಲಿ 11 ಮಂದಿ ಬಿಜೆಪಿ ಬೆಂಬಲಿತರು ಹಾಗೂ ಓರ್ವ ಕಾಂಗ್ರೆಸ್‌ ಬೆಂಬಲಿತ ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.


ಪಳ್ಳಿ ಗ್ರಾ.ಪಂ.ನಲ್ಲಿ 13 ಮಂದಿ ಬಿಜೆಪಿ ಬೆಂಬಲಿತರು ಹಾಗೂ ಎರಡು ಮಂದಿ ಕಾಂಗ್ರೆಸ್‌ ಬೆಂಬಲಿತರು ಗೆಲ್ಲುವ ಮುಖೇನ ಪಂಚಾಯತ್‌ ಅಧಿಕಾರ ಬೆಜೆಪಿ ಬೆಂಬಲಿತರ ಪಾಲಾಗಿದೆ.


ಬೋಳ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ 9 ಮಂದಿಗೆ ಹಾಗೂ ಕಾಂಗ್ರೆಸ್‌ ಬೆಂಬಲಿತ ಓರ್ವ ಗೆಲುವು ಸಾಧಿಸಿದ್ದಾರೆ.


ಮುಂಡ್ಕೂರು ಗ್ರಾ.ಪಂ.ನಲ್ಲಿ 13 ಮಂದಿ ಬಿಜೆಪಿ ಬೆಂಬಲಿತರು, ನಾಲ್ಕು ಕಾಂಗ್ರೆಸ್‌ ಬೆಂಬಲಿತರು ಗೆಲುವು ಸಾಧಿಸಿದ್ದಾರೆ.


ನಂದಳಿಕೆ ಗ್ರಾ.ಪಂ.ನ ಅಧಿಕಾರ ಬಿಜೆಪಿ ಬೆಂಬಲಿತರ ಪಾಲಾಗಿದ್ದು, 12 ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಪಡೆದುಕೊಂಡಿದ್ದಾರೆ.


ನಿಟ್ಟೆ ಗ್ರಾ.ಪಂ.ನ ಅಧಿಕಾರ ಬಿಜೆಪಿ ಬೆಂಬಲಿತರ ತೆಕ್ಕೆಗೆ ಸೇರಿದ್ದು, ಬಿಜೆಪಿ ಬೆಂಬಲಿತರು 31 ಸ್ಥಾನಗಳನ್ನು ಬಾಚಿಕೊಂಡಿದ್ದಾರೆ.


ಬೆಳ್ಮಣ್‌‌ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ 10 ಅಭ್ಯರ್ಥಿಗಳು, ಕಾಂಗ್ರೆಸ್‌ ಬೆಂಬಲಿತ ಮೂವರು ಹಾಗೂ ಐದು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.


ಇರ್ವತ್ತೂರು ಗ್ರಾ.ಪಂ.ನ ಅಧಿಕಾರ ಬಿಜೆಪಿ ಬೆಂಬಲಿತರ ತೆಕ್ಕೆಗೆ ಸೇರಿದ್ದು, ಏಳು ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಬಾಚಿದ್ದಾರೆ.


ದುರ್ಗ ಗ್ರಾ.ಪಂ.ನಲ್ಲಿ ಕೂಡಾ ಬಿಜೆಪಿ ಬೆಂಬಲಿತರು ಅಧಿಕಾರವನ್ನು ಪಡೆದುಕೊಂಡಿದ್ದು, 9 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.


ಕಾಂಗ್ರೆಸ್‌ ಬೆಂಬಲಿತ ಇನ್ನಾ ಗ್ರಾ.ಪಂ.ನಲ್ಲಿ ಕಾಂಗ್ರೆಸ್‌‌ ಬೆಂಬಲಿತ ಆರು ಮಂದಿಗೆ ಹಾಗೂ ಬಿಜೆಪಿ ಬೆಂಬಲಿತ ಮೂವರು ಜಯಗಳಿಸಿದ್ದಾರೆ.


ಈದು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ಐವರು, ಕಾಂಗ್ರೆಸ್‌ ಬೆಂಬಲಿತ 13 ಅಭ್ಯರ್ಥಿಗಳು ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.


ಪಕ್ಷೇತರ ಬೆಂಬಲಿತ ಬೆಳಂಜೆ ಗ್ರಾ.ಪಂ.ನಲ್ಲಿ ಮೂರು ಮಂದಿ ಬಿಜೆಪಿ ಬೆಂಬಲಿತರು ಹಾಗೂ ಎಂಟು ಮಂದಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.


ಬೆಳಂಜೆ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ಮೂವರು ಹಾಗೂ ಎಂಟು ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.


ಹೆಬ್ರಿ ಗ್ರಾ.ಪಂ.ನಲ್ಲಿ ಎಂಟು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆಲುವು ದಾಖಲಿಸಿದ್ದರೆ, ಎಂಟು ಸ್ಥಾನಗಳಲ್ಲಿ ಕಾಂಗ್ರೆಸ್‌‌‌‌ ಬೆಂಬಲಿತರು ಜಯ ಗಳಿಸಿ ಸಮಬಲ ಕಾಯ್ದುಕೊಂಡಿದ್ದಾರೆ.


ಜಾಹೀರಾತು 

   
 ಗ್ರಾಮ ಪಂಚಾಯಿತಿ ಚುನಾವಣೆಯ ವಿಜಯೋತ್ಸವದಲ್ಲಿ ಪಾಕಿಸ್ತಾನ ಪರ ಘೋಷಣೆ ಕೇಳಿ ಬಂದ ಪ್ರಕರಣಕ್ಕೆ ಸಂಬಂಧಿಸಿ ವಿಡಿಯೋ ಹಾಗೂ ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ಮೂರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಪಿಲಿಚಂಡಿ ಕಲ್ಲು ಕುವೆಟ್ಟು ನಿವಾಸಿಗಳಾದ ಮೊಹಮ್ಮದ್ ಹರ್ಷದ್( 22 ), ದಾವೂದ್ ( 36) ಹಾಗೂ ಇಸಾಕ್ (28) ಬಂಧಿತ ಆರೋಪಿಗಳು.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವೀಡಿಯೋವನ್ನು ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಆ ವಿಡಿಯೋ ಹೊರತುಪಡಿಸಿ ಈ ಘಟಣೆಗೆ ಸಂಬಂಧಿಸಿದ ಮೊಬೈಲ್ ಮೂಲಕ ಚಿತ್ರೀಕರಿಸಲಾದ ಇತರ ಎರಡು ವೀಡಿಯೊಗಳು ಲಭ್ಯವಾಗಿದ್ದು ಅವುಗಳನ್ನೂ ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಲಾಗಿದೆ.

ಗ್ರಾಮ ಪಂಚಾಯತ್‌ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯ ವೇಳೆ ಮತ ಎಣಿಕಾ ಕೇಂದ್ರದ ಹೊರಗೆ ಎಸ್‌ಡಿಪಿಐ ಹಾಗೂ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವದಲ್ಲಿ ತೊಡಗಿದ್ದಾಗ ಪಾಕಿಸ್ಥಾನ ಪರ ಫೋಷಣೆ ಕೇಳಿಬಂದಿದೆ. ಎಸ್‌ಡಿಪಿಐ ಹಾಗೂ ಬಿಜೆಪಿ ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ಜಮಾಯಿಸಿ ವಿಜಯೋತ್ಸವದ ನಡೆಸುತ್ತಿದ್ದ ವೇಳೆ ಪಾಕಿಸ್ಥಾನ ಜಿಂದಾಬಾದ್ ಎಂಬ ಜೈಕಾರದ ಘೋಷಣೆ ಕೂಗಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆಯು ಉಜಿರೆಯ ಎಸ್‌ಡಿಎಂ ಪಿಯು ಕಾಲೇಜು ಮತ ಎಣಿಕಾ ಕೇಂದ್ರದ ಮುಂದೆ ನಡೆದಿದೆ ಎನ್ನಲಾಗಿದೆ.


ಜಾಹೀರಾತು 

   ಹೆಬ್ರಿ ತಾಲ್ಲೂಕು : ಗ್ರಾಮ ಪಂಚಾಯಿತಿ ಮತ ಎಣಿಕೆ.

ಮುದ್ರಾಡಿ ಗ್ರಾಮ ಪಂಚಾಯಿತಿ ಬಿಜೆಪಿ ಭರ್ಜರಿ ಗೆಲುವು : ಕುಚ್ಚೂರಿನಲ್ಲಿ ಪಕ್ಷೇತರರಿಗೆ ಗದ್ದುಗೆ - ಮಡಾಮಕ್ಕಿಯಲ್ಲಿ ಕಾಂಗ್ರೆಸ್‌.ಹೆಬ್ರಿ : ಹೆಬ್ರಿ ತಾಲ್ಲೂಕಿನ ೯ ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಸಂಜೆ ೬ ಗಂಟೆಯ ಸುಮಾರಿಗೆ ೪ ಪಂಚಾಯಿತಿಯ ಫಲಿತಾಂಶ ಪ್ರಕಟಗೊಂಡಿದೆ. 

ಮುದ್ರಾಡಿ ೧೫ರಲ್ಲಿ ೧೫ ಸೀಟು ಬಿಜೆಪಿ ಮಡಿಲಿಗೆ : 

ಪ್ರತಿಷ್ಠೆಯ ಕಣವಾಗಿದ್ದ ಮುದ್ರಾಡಿ ಗ್ರಾಮ ಪಂಚಾಯಿತಿಯ ೧೫ ಸೀಟುಗಳಲ್ಲಿ ೧೫ ರಲ್ಲೂ ಬಿಜೆಪಿ ಬೆಂಬಲಿತರು ಜಯಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಕಳೆದ ೩೫ ವರ್ಷಗಳಿಂದ ಕಾಂಗ್ರೆಸ್‌ ಬೆಂಬಲಿತರು ಅಧಿಕಾರ ನಡೆಸುತ್ತಿದ್ದರು. ಪ್ರಸ್ತುತ ಸಾಲಿನ ಅಧ್ಯಕ್ಷೆ ಶಶಿಕಲಾ ಪೂಜಾರಿ ಸಹಿತ ಎಲ್ಲರೂ ಪರಾಭವಗೊಂಡಿದ್ದಾರೆ. ಗಣಪತಿ ಮುದ್ರಾಡಿ ೨೨೬, ವಸಂತಿ ಪೂಜಾರಿ ೪೧೦, ಶುಭದರ ಶೆಟ್ಟಿ ೪೫೭, ಜಗದೀಶ ಪೂಜಾರಿ ೨೭೪, ವನಿತಾ ರಾವ್‌ ೨೩೯, ನಾಗಶ್ರೀ ೪೪೪, ಸಂತೋಷ ಶೆಟ್ಟಿ ಉಪ್ಪಳ ೪೭೯, ಮಂಜುನಾಥ ಹೆಗ್ಡೆ ಡಿಪಿಎಂ ೫೨೫, ರತ್ನಾ ಪೂಜಾರಿ ೪೪೮, ಜಯಂತಿ ಗೌಡ ೪೩೦, ಸನತ್‌ ಕುಮಾರ್‌ ೬೩೪, ಶಾಂತಾ ೫೫೫, ರಮ್ಯಕಾಂತಿ ೫೪೩, ಪಲ್ಲವಿ ೩೦೩, ಸತೀಶ್‌ ಗೌಡ ೩೦೩ ಬಿಜೆಪಿ ಬೆಂಬಲಿತರಾಗಿ ಜಯ ಗಳಿಸಿದ್ದಾರೆ. 


ನಾಡ್ಪಾಲು ಗ್ರಾಮ ಪಂಚಾಯಿತಿ : ನಾಡ್ಪಾಲು ಗ್ರಾಮ ಪಂಚಾಯಿತಿಯಲ್ಲೂ ಕಳೆದ ಅವಧಿಯಲ್ಲಿ ಬಿಜೆಪಿ ಬೆಂಬಲಿತರ ಅಧಿಕಾರವಿದ್ದು ಈ ಬಾರಿಯೂ ಗದ್ದುಗೆ ಉಳಿಸಿಕೊಂಡಿದ್ದಾರೆ.  ೭ ರಲ್ಲಿ ೭ ಸ್ಥಾನವನ್ನು ಮತ್ತೇ ಬಿಜೆಪಿ ಉಳಿಸಿಕೊಂಡಿದೆ. ನವೀನ್‌ ಪೂಜಾರಿ ೨೬೩, ದಿನೇಶ ಹೆಗ್ಡೆ ೩೩೭, ಆಶಾ ಕುಮಾರಿ ೩೦೭, ರಾಘವೇಂದ್ರ ಹೆಗ್ಡೆ ೩೩೨, ಶ್ರೀಲತಾ ಪೂಜಾರಿ ೩೦೩ ಜಯಗಳಿಸಿದ್ದರೇ ಸುಮಾಂಗಲ ಮತ್ತು ಸವಿತಾ ಅವಿರೋಧವಾಗಿ ಆಯ್ಕೆಯಾಗಿದ್ದರು. 


ಕುಚ್ಚೂರು ಪಂಚಾಯಿತಿಯಲ್ಲಿ ಪಕ್ಷೇತರರಿಗೆ ಗದ್ದುಗೆ : ಕುಚ್ಚೂರು ಗ್ರಾಮ ಪಂಚಾಯಿತಿಯಲ್ಲಿ ಈ ಸಲ ಪಕ್ಷೇತರರು ಅಧಿಕಾರದ ಗದ್ದುಗೆ  ಹಿಡಿದಿದ್ದಾರೆ. ೧೧ ಸದಸ್ಯ ಬಲದ ಪಂಚಾಯಿತಿಯಲ್ಲಿ ಬಾದ್ಲು ಮಹೇಶ ಶೆಟ್ಟಿ ನೇತ್ರತ್ವದಲ್ಲಿ ೮ ಮಂದಿ ಪಕ್ಷೇತರರು ಜಯಗಳಿಸಿ ಗದ್ದುಗೆ ಏರಿದ್ದಾರೆ. ಅಧಿಕಾರದಲ್ಲಿದ್ದ ಬಿಜೆಪಿ ಕೇವಲ ೩ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಪಕ್ಷೇತರರಾದ ರೇವತಿ ಶೆಟ್ಟಿ, ೪೦೬, ಸತೀಶ ನಾಯ್ಕ್‌ ೩೯೯, ಸುಕನ್ಯಾ ೪೨೯, ಬಾದ್ಲು ಮಹೇಶ ಶೆಟ್ಟಿ ೫೧೫, ರಾಘವೇಂದ್ರ ಪೂಜಾರಿ, ಶಶಿಕಲಾ ೩೨೦, ಸುಜಾತ ಶೆಟ್ಟಿ ೩೭೦, ಕುಚ್ಚೂರು ಮಹೇಶ ಶೆಟ್ಟಿ ೫೦೧ ಮತ ಗಳಿಸಿ ಜಯಗಳಿಸಿದ್ದಾರೆ. ಬಿಜೆಪಿ ಬೆಂಬಲಿತರಾದ ಸತೀಶ ಪೂಜಾರಿ ೪೭೨, ಶಕುಂತಳಾ ೩೯೧ ಮತ್ತು ಮಾಲಿನಿ೪೨೨ ಜಯಗಳಿಸಿದ್ದಾರೆ. 


ಮಡಾಮಕ್ಕಿಯಲ್ಲಿ ಕಾಂಗ್ರೆಸ್‌ ಗೆ ಗದ್ದುಗೆ :

ಹೆಬ್ರಿ ತಾಲ್ಲೂಕಿನ ಮಡಾಮಕ್ಕಿ ಗ್ರಾಮ ಪಂಚಾಯಿತಿಯ ೧೧ ಸೀಟಿನಲ್ಲಿ ೬ ಕಡೆ ಕಾಂಗ್ರೆಸ್‌ ಜಯಗಲಿಸಿದೆ. ೫ಕಡೆ ಬಿಜೆಪಿ ಜಯಗಳಿಸಿದೆ. ಕಾಂಗ್ರೆಸ್‌ ಬೆಂಬಲಿತರಾದ ದಯಾನಂದ ಪೂಜಾರಿ ೩೨೫, ಪ್ರತಾಪ ಶೆಟ್ಟಿ ೨೫೯, ಸುರೇಶ ಶೆಟ್ಟಿ ೩೫೪, ಉದಯ ಕುಮಾರ್‌ ಶೆಟ್ಟಿ ೫೫೭, ಸುಶೀಲಾ ೪೪೫, ಬೇಬಿ ಹೆಗ್ಡೆ ೪೫೪ ಮತ ಪಡೆದು ವಿಜಯಿಯಾಗಿದ್ದಾರೆ. ಬಿಜೆಪಿಯ ರತಿ ಕುಲಾಲ್‌ ೨೩೫, ಜಯಲಕ್ಷ್ಮೀ ೨೫೫, ಸದಾನಂದ ಪೂಜಾರಿ ೩೫೬ ಮತ್ತು ಜ್ಯೋತಿ ಸೀತಾರಾಮ್‌ ೩೧೭ ಮತ ಪಡೆದು ಜಯಮಾಲೆ ಧರಿಸಿಕೊಂಡಿದ್ದಾರೆ. 


ಶಿವಪುರ ಅಧಿಕಾರ ಉಳಿಸಿಕೊಂಡ ಬಿಜೆಪಿ ಬೆಂಬಲಿಗರು.

ಅಧಿಕಾರದಲ್ಲಿ ಬಿಜೆಪಿ ಬೆಂಬಲಿತ ಶಿವಪುರ ಗ್ರಾಮ ಪಂಚಾಯಿತಿಯಲ್ಲಿ ಸುರೇಶ ಶೆಟ್ಟಿ ಹುಣ್ಸೆದಡಿ ನೇತ್ರತ್ವದಲ್ಲಿ ಚುನಾವಣೆ ನಡೆದಿದ್ದು ೧೩ರಲ್ಲಿ ೮ ಮಂದಿ ಬಿಜೆಪಿಯ ಬೆಂಬಲಿತರು ಜಯಗಳಿಸಿ ಅಧಿಕಾರ ಉಳಿಸಿಕೊಂಡಿದ್ದಾರೆ. ಪಕ್ಷೇತರರು ೫ ಸ್ಥಾನಕ್ಕೆ ತೃಪ್ತಿ ಪಡೆದಿದ್ದಾರೆ. 

ಸುಕನ್ಯಾ ಆಚಾರ್ಯ ೪೨೦, ಸುಗಂಧಿನಾಯ್ಕ್‌ ೪೨೦, ಶೇಖರ ಶೆಟ್ಟಿ ೩೧೮, ಜ್ಯೋತಿ ೩೦೬, ಶೋಭಾ ೩೧೧, ಶಂಕರ ಬಡ್ಕಿಲ್ಲಾಯ ೩೬೫, ಮಯೂರ್‌ ಹೆಗ್ಡೆ ೩೦೬, ಶ್ವೇತಾ ಪೂಜಾರಿ ೨೮೮ ಮತ ಪಡೆದು ಬಿಜೆಪಿ ಬೆಂಬಲಿತರಾಗಿ ಜಯಗಳಿಸಿದ್ದಾರೆ. ಸಂತೋಷ ಶೆಟ್ಟಿ ನಾಯರಕೋಡು ೩೨೬, ವನಿತಾ ೩೮೫, ರಂಜಿತಾ ಪ್ರಭು ೪೧೦, ಜಗನ್ನಾಥ ಕುಲಾಲ್‌ ೪೬೮, ಮತ್ತು ಸುಮಿತ್ರಾ ನಾಯ್ಕ್‌ ೩೦೭ ಮತ ಪಡೆದು ಪಕ್ಷೇತರರಾಗಿ ಜಯ ಗಳಿಸಿದ್ದಾರೆ.

ಜನಾರ್ಧನ್  ಇವರು ಹೆಬ್ರಿ ತಾಲೂಕುನಲ್ಲಿ ಅತೀ ಹೆಚ್ಚು ಮತ ಪಡೆದವರು, ಗಿಲ್ಲಾಳಿ ಕ್ಷೇತ್ರದ ಮೂಲಕ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದವರು  698 ಮತಗಳನ್ನ ಪಡೆದರು.


ಜಾಹೀರಾತು 

   

ಬಂಟ್ವಾಳ  ತಾಲೂಕಿನ ಗೋಳ್ತಮಜಲು ಗ್ರಾ.ಪಂ.ವ್ಯಾಪ್ತಿಯ ವಿಜಯೋತ್ಸವದ ವೇಳೆ ವಾಹನ ಪಲ್ಟಿಯಾಗಿ ಓರ್ವ ಮೃತಪಟ್ಟ ಘಟನೆ ಬುಧವಾರ ನೆಟ್ಲದಲ್ಲಿ ನಡೆದಿದೆ.


ನೆಟ್ಲ ನಿವಾಸಿ ನರೇಶ್(30) ಮೃತ ವ್ಯಕ್ತಿ.

ಘಟನೆಯಲ್ಲಿ ವಿಜೇತ ಅಭ್ಯರ್ಥಿ ದೀಪಕ್, ಜಗನ್ನಾಥ, ಗುರುವಪ್ಪ, ಸುಚಿತ್ರಾ, ನಳಿನಿ, ಯೋಗೀಶ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ

ಗೋಳ್ತಮಜಲು ಗ್ರಾ.ಪಂ.ವ್ಯಾಪ್ತಿಯ ನೆಟ್ಲ ಭಾಗದ ವಿಜಯೋತ್ಸವದ ವೇಳೆ ಘಟನೆ ನಡೆದಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು 

   
MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget