ಕಾರ್ಕಳ:'ಮನೆ ಮನೆಗೆ ಪೈಪ್ ಕಾಂಪೋಸ್ಟ್' ಕಾರ್ಯಾಗಾರಕ್ಕೆ 100 ರ ಸಂಭ್ರಮ.-Times of karkala

ಕಾರ್ಕಳದಲ್ಲಿ ಮನೆ ಮನೆಗೆ ಪೈಪ್ ಕಾಂಪೋಸ್ಟ್ ಕಾರ್ಯಾಗಾರಕ್ಕೆ 100 ರ ಸಂಭ್ರಮ.
ಪುರಸಭೆ ಮತ್ತು ರೋಟರಿ ಆನ್ಸ್ ಕ್ಲಬ್ , ರೋಟಕ್ಟರ್ ಕ್ಲಬ್ ಕಾರ್ಕಳ ಇವರ ಜಂಟಿ ಆಶ್ರಯ ದಲ್ಲಿ ಕಾರ್ಕಳದ ಅಗತ್ಯ ಇರುವ ಮನೆಗಳಿಗೆ ಪುರಸಭೆಯ ಸಹಕಾರದಿಂದ ನಡೆಯುತ್ತಿರುವ ಕಾರ್ಯಕ್ರಮ ಇದಾಗಿದೆ. 

ರೋ. ರಮಿತಾ ಶೈಲೇಂದ್ರ ರವರ ನೇತೃತ್ವದಲ್ಲಿ  ಪುರಸಭೆಯ ಪ್ರತಿ ವಾರ್ಡಿನ ಸದಸ್ಯರ ಸಹಕಾರ ದೊಂದಿಗೆ ಅವರವರ  ವಾರ್ಡ್ ಗಳಿಗೆ ಭೇಟಿ ನೀಡಿ ಪೈಪ್ ಕಾಂಪೋಸ್ಟ್ ಅಳವಡಿಸಿ ಅವುಗಳ ಬಗ್ಗೆ ಮಾಹಿತಿ ನೀಡುತ್ತಾ ಜನರಲ್ಲಿ ಹಸಿ ಕಸದ ವಿಲೇವಾರಿ ಮಾಡುವ ಮಾಹಿತಿ ನೀಡುತ್ತಾ ಬಂದಿರುತ್ತಾರೆ. 

ಸಾರ್ವಜನಿಕರಿಕರಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೈಪ್ ಕಾಂಪೋಸ್ಟ್  ಅಳವಡಿಸುವ ಬಗ್ಗೆ   ಮಾಹಿತಿಯನ್ನು ಈಗಾಗಲೇ ನೀಡಿರುತ್ತಾರೆ. ಈ ಕಾರ್ಯಕ್ರಮವು ಸ್ವಚ್ಛ ಬ್ರಿಗ್ರೇಡ್ ಕಾರ್ಕಳ ಸಂಸ್ಥೆಯಿಂದ ಪ್ರೇರಿತಗೊಂಡು ಪ್ರಾರಂಭ ಮಾಡಿದರೆಂದು ರಮಿತಾ ತಿಳಿಸಿದರು.  

ಇನ್ನು ಪುರಸಭೆಯ ಸಹಕಾರದೊಂದಿಗೆ  ಉಳಿದ ವಾರ್ಡ್ ಮನೆಗಳಿಗೆ ಮಾಡುವಂತಹ ಆಲೋಚನೆಯನ್ನು ಇಟ್ಟುಕೊಂಡಿದ್ದಾರೆ. ದಿನಾಂಕ 25-12-2020 ಶುಕ್ರವಾರ ದಂದು ರೋ. MPHF  ತುಕಾರಾಮ ನಾಯಕ್ ಅವರ ಮನೆಯಲ್ಲಿ ಪುರಸಭಾ ಅಧ್ಯಕ್ಷೆ ಸುಮಾ ಕೇಶವ ಇನ್ನೋರ್ವ ಪುರಸಭಾ ಸದಸ್ಯ ಪ್ರದೀಪ್ ಇವರ ನೇತೃತ್ವದಲ್ಲಿ ಮನೆಮನೆಗೆ ಕಾಂಪೋಸ್ಟ್ -100 ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸ್ವಚ್ಚ ಬ್ರಿಗೇಡ್ ಸದಸ್ಯರು, ರೋಟರಕ್ಟ್ ಕ್ಲಬ್ ಸದಸ್ಯರು ಹಾಗೂ ರೊ. ತುಕಾರಾಮ ನಾಯಕ್ ದಂಪತಿಗಳು ಪಾಲ್ಗೊಂಡಿದ್ದರು.


ಜಾಹೀರಾತು 

  



 










 

Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget