ನೀವು ಹೊಸ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿಸುವ ಯೋಚನೆಯಲ್ಲಿದ್ದೀರಾ?ಹಾಗಾದರೆ ಶೀಘ್ರವೇ ಖರೀದಿಸುವುದು ಒಳಿತು. ಶೀಘ್ರದಲ್ಲಿಯೇ ಇವುಗಳ ಬೆಲೆ 20% ಏರಿಕೆಯಾಗಲಿದೆ.ಜಗತ್ತಿನಲ್ಲಿ ಟಿವಿ ಪ್ಯಾನೆಲ್ ಗಳ ಕೊರತೆಯುಂಟಾಗಿದ್ದು ಇದರಿಂದಾಗಿ ಶೇ.30 ರಿಂದ 100 ರವರೆಗೆ ಹೆಚ್ಚುವ ಸಾಧ್ಯತೆಗಳಿವೆ.
ಅಂತರ್ಗತ ವಸ್ತುಗಳ ವೆಚ್ಚ(ಇನ್ಪುಟ್ ಮೆಟಿರಿಯಲ್ ಕಾಸ್ಟ್)ದಲ್ಲಿ ಏರಿಕೆಯಾಗಿದ್ದು ಇದರಿಂದಾಗಿ ಏಕಾಏಕಿ ಒಂದೇ ಬಾರಿಗೆ ಬೆಲೆಯಲ್ಲಿ ಏರಿಕೆಯಾಗಲಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ತಾಮ್ರ,ಸತು,ಅಲ್ಯೂಮಿನಿಯಂ, ಉಕ್ಕು ಪ್ಲಾಸ್ಟಿಕ್ ಮತ್ತಿತರ ವಸ್ತುಗಳೂ ದುಬಾರಿಯಾಗಲಿದೆ.ಹಡಗಿನ ಮೂಲಕ ಸರಕು ಸಾಗಾಣಿಕಾ ವೆಚ್ಚಶೇ 4೦-50 ರಷ್ಟು ದುಬಾರಿಯಾಗಲಿದೆ ಎಂದು ಉಲ್ಲೇಖಿಸಿ ಆಂಗ್ಲಪತ್ರಿಕೆಯೊಂದು ವರದಿಮಾಡಿದೆ..
ಕಂಪೆನಿಗಳಿಗೂ ಈ ಹೇರಿಕೆ ಹೊರೆಯಾಗಲಿದ್ದು ಮುಂದಿನ ತ್ರೈಮಾಸಿಕದಲ್ಲಿ ಹಣದುಬ್ಬರ ಏರಿಕೆಗೆ ಕಾರಣವಾಗಲಿದೆ ಎಂದು ಮೂಲಗಳು ತಿಳಿಸಿವೆ.ಸೆಪ್ಟೆಂಬರ್ ನಲ್ಲಿಯೇ ಬೆಲೆ ಏರಿಕೆಗೆ ನಿರ್ಧರಿಸಲಾಗಿತ್ತಾದರೂ ಹಬ್ಬಗಳ ಸೀಸನ್ ನಿಂದಾಗಿ ತಡೆಹಿಡಿಯಲಾಗಿತ್ತು ಎಂದು ಕಂಪೆನಿಯ ಮೂಲಗಳು ತಿಳಿಸಿದೆ.
ಬೇಲೇರಿಕೆ ಪ್ರಮಾಣ:
15 20% ತಾಮ್ರ ಸತು ಅಲ್ಯೂಮಿನಿಯಂ
30 40% ಪ್ಲಾಸ್ಟಿಕ್ ಉಪ ಉತ್ಮನ್ನಗಳು
40 50% ಹಡಗುಗಳ ಮೂಲಕ ಸರಕು ಸಾಗಾಣಿಕೆ ವೆಚ್ಚ
ಹೆಚ್ಚಳ ಎಷ್ಟಾಗಬಹುದು?
ಪ್ರಮಾಣ ವಸ್ತುಗಳು
8 10% ವಾಷಿಂಗ್ ಮೆಷಿನ್ ಗಳು
12 15% ಫ್ರಿಜ್
7 20% ಟಿವಿ
ಜಾಹೀರಾತು
Post a comment