ದಿನಾಂಕ 20-12-2020ನೇ ಭಾನುವಾರದಂದು ಸ್ವಚ್ಛ ಕಾರ್ಕಳ ಬ್ರಿಗೇಡ್ ನೇತೃತ್ವದಲ್ಲಿ 50ನೇ ಸ್ವಚ್ಛತಾ ಅಭಿಯಾನವು ಕುದುರೆಮುಖ ಚೆಕ್ ಪೋಸ್ಟ್, ಮುಳ್ಳೂರು-ಮಾಳದ ಬಳಿ ನೂರಾರು ಯುವಕ-ಯುವತಿಯರು ಸೇರಿಕೊಂಡು ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ನಡೆಸಲಾಯಿತು.
ಮಾನ್ಯ ಶಾಸಕರಾದ ವಿ. ಸುನಿಲ್ ಕುಮಾರ್, ಪುರಸಭಾ ಅಧ್ಯಕ್ಷರಾದ ಶ್ರೀಮತಿ ಸುಮಾ ಕೇಶವ್ ಹಾಗೂ ನ್ಯಾಯಾಂಗ ವಿಭಾಗದಲ್ಲಿ ರಾಜ್ಯಪ್ರಶಸ್ತಿ ಪುರಸ್ಕೃತ ಎಂ.ಕೆ. ವಿಜಯ ಕುಮಾರ್ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು.
ಅಭಿಯಾನದಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಪ್ರಮುಖರಾದ ಫೆಲಿಕ್ಸ್ ವಾಜ್,ನಿಟ್ಟೆ ಗ್ರಾಮ ಘನತ್ಯಾಜ್ಯ ನಿರ್ವಹಣಾ ಘಟಕದ ನಿರ್ವಹಣಾ ಅಧಿಕಾರಿ ನೀಲಾದರ್, ಶಿರ್ಲಾಲು ಘಣತ್ಯಾಜ ನಿರ್ವಹಣ ಘಟಕ ನಿರ್ವಹಣಾಧಿಕಾರಿ ಸುನಿತಾ, ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಶ್ರೀ ರಾಮನಾಥ ಬಾಳಿಗ ಮತ್ತು ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಸದಸ್ಯರು ಉಪಸ್ಥಿತರಿದ್ದು ಯಶಸ್ವಿಗೊಳಿಸಿದರು. ಕಾರ್ಯಕ್ರಮವನ್ನು ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಸುಬ್ರಮಣ್ಯ ದೇವಾಡಿಗ ಇವರು ನಿರ್ವಹಿಸಿದರು.

ಸ್ವಚ್ಛ ಬ್ರಿಗೇಡ್ ನ ಯಶಸ್ವೀ ಕಾರ್ಯಕ್ಕೆ ಸಂಸದೆ ಶೋಬಾ ಕರಂದ್ಲಾಜೆಯವರು ಕೂಡಾ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಾಹೀರಾತು
Post a comment