ಕಾರ್ಕಳ:ಇಂದು ಕಾರ್ಕಳ ತಾಲೂಕಿನಾದ್ಯಂತ ಮತದಾನ ನಡೆದಿದ್ದು ಸಾಣೂರಿನ ವ್ಯಕ್ತಿಯೋರ್ವರು ವೀಲ್ ಚೆರ್ ತಳ್ಳಿಕೊಂಡೇ ಬಂದು ಮತ ಚಲಾಯಿಸಿದ ಅಪರೂಪದ ಘಟನೆ ನಡೆಯಿತು.
ಸಾಣೂರಿನ ಸುರೇಶ್ ಸೇರ್ವೆಗಾರ್ ಮತ ಚಲಾಯಿಸಿದ ವ್ಯಕ್ತಿ. ಇವರು ಸಾಣೂರು ನಿವಾಸಿಯಾಗಿದ್ದು ಸಾಣೂರು ದೇ೦ದಬೆಟ್ಟು ಮತ ಗಟ್ಟೆಗೆ ಸುಮಾರು ಮೂರು ಕಿ.ಮಿ. ತನ್ನ ವೀಲ್ ಚೆರ್ ತಳ್ಳಿಕೊಂಡೇ ಬಂದಿದ್ದಾರೆ.
ಬಳಿಕ ಸ್ಥಳೀಯರ ನೆರವಿನಿಂದ ಮತದಾನ ಮಾಡಿದ್ದಾರೆ.ಮತದಾನವೆಂದರೆ ನಿರ್ಲಕ್ಷ್ಯ ತೋರುವ ಯುವ ಜನತೆಯ ನಡುವೆ ಸುರೇಶ್ ಶೇರ್ವೆಗಾರ್ ರವರು ಆದರ್ಶರಾಗಿ ತೋರುತ್ತಾರೆ ಎಂದರೆ ತಪ್ಪಾಗಲಾರದು.
ಜಾಹೀರಾತು
Post a comment