ಕರುಣಾಳು ಬಾ ಬೆಳಕೆ ಎಂಬ ಧ್ಯೇಯದೊಂದಿಗೆ ಆ್ಯನ್ಸ್ ಕ್ಲಬ್ ಕಾರ್ಕಳ ಹಾಗೂ ಯುವವಾಹಿನಿ ಘಟಕ ಕಾರ್ಕಳ ಹಾಗೂ ರೋಟರ್ಯಾಕ್ಟ್ ಕ್ಲಬ್ ಕಾರ್ಕಳ ಇವರ ಆಶ್ರಯದಲ್ಲಿ ಪ್ರಾರಂಭವಾದ ಒಂದು ಕಾರ್ಯಕ್ರಮವು ಕಾರ್ಕಳದ ಸುತ್ತಮುತ್ತಲಿನ ಬೆಳಕನ್ನು ಕಾಣದಿರುವ ಮನೆಗೆ ಬೆಳಕು ಮೂಡಿಸುವಂತಹ ಪ್ರಯತ್ನವನ್ನು ಮಾಡಿರುತ್ತದೆ ನಿಜವಾಗಲೂ ಶ್ಲಾಘನೀಯ ಕಾರ್ಯ ವಾಗಿದೆ ಎಂದು ಪುರಸಭೆ ಅಧ್ಯಕ್ಷೆ ಸುಮಕೇಶವ್ ಅವರು ಹೇಳಿದರು.
ಕರುಣಾಳು ಬಾ ಬೆಳಕೆ ಕಾರ್ಯಕ್ರಮ ದ ಅಂಗವಾಗಿ ದಿನಾಂಕ 12-6-2020 ರಂದು ಒಂದೇ ದಿನ 6 ಮನೆಗಳಿಗೆ ಸೋಲಾರ್ ಲೈಟ್ ನ್ನು ವಿವಿಧ ದಾನಿಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಳವಡಿಸಲಾಯಿತು. ಈ ವರೆಗೆ ಸುಮಾರು 1,10,000 ರೂಪಾಯಿ ವೆಚ್ಚದಲ್ಲಿ 16 ಮನೆಗಳಿಗೆ ಲೈಟ್ ಅಳವಡಿಸಲಾಗಿದೆ.
ಕಾರ್ಯಕ್ರಮದಲ್ಲಿ ದಾನಿಗಳಾದ ಸುಪ್ರೀತ್ ಶೆಟ್ಟಿ ದಂಪತಿ, ಸಾವಿತ್ರಿ ಮನೋಹರ್, ಶಾರದಾ ಮಹಿಳಾ ಮಂಡಳಿ ಸದಸ್ಯರು, ಪ್ರಜ್ವಲ್ ಉಪಸ್ಥಿತರಿದ್ದರು. ರೋಟರಿ ಆನ್ಸ್ ಕ್ಲಬ್ ನ ಅಧಕ್ಷೇ ರಮೀತ ಶೈಲೆಂದ್ರ ರಾವ್, ಯುವ ವಾಹಿನಿ ಯ ಗಣೇಶ್ ಸಾಲಿಯಾನ್ ಹಾಗೂ ಯುವವಾಹಿನಿ ಕಾರ್ಕಳ ಸದಸ್ಯರು , ರೋಟರಾಕ್ಟ್ ಕ್ಲಬ್ ನ ಅಧ್ಯಕ್ಷ ರಾಹುಲ್ ಮತ್ತು ಸದಸ್ಯರು ಭಾಗವಹಿಸಿದ್ದರು
ಜಾಹೀರಾತು
Post a comment