ಜಾತಿ ಪದ್ಧತಿಯ ವಿರುದ್ಧ ಭಕ್ತಿ ಮಾರ್ಗದ ಮೂಲಕ ಧ್ವನಿ ಎತ್ತಿದ ಹಾಗೂ ಸಮಾನ ಸಮಾಜಕ್ಕಾಗಿ ಸಂಗೀತ-ಸಾಹಿತ್ಯ ಕೃತಿಗಳ ಮೂಲಕ ಜನರನ್ನು ತಲುಪಿದ ದಾಸಶ್ರೇಷ್ಠ ಕನಕದಾಸರು ಕನ್ನಡ ಸಂಗೀತ-ಸಾಹಿತ್ಯ ವಲಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ಬಿನ ರಂಗಮಂದಿರದಲ್ಲಿ ಜರಗಿದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅಬ್ಬನಡ್ಕ ಲಿಯೋ ಕ್ಲಬ್ ನ ಅಧ್ಯಕ್ಷ ಪ್ರಶಾಂತ್ ಪೂಜಾರಿ ಹೇಳಿದರು.
ಕಾರ್ಯಕ್ರಮದಲ್ಲಿ ನಂದಳಿಕೆಯ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ಬಿನ ಅಧ್ಯಕ್ಷರಾದ ಬೋಳ ಉದಯ ಅಂಚನ್ ರವರು ಅಧ್ಯಕ್ಷತೆ ವಹಿಸಿ ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಪೂರ್ವಧ್ಯಕ್ಷರ ಆನಂದ ಪೂಜಾರಿ, ಸುರೇಶ್ ಪೂಜಾರಿ, ಸತೀಶ್ ಪೂಜಾರಿ, ಮಾಜಿ ಉಪಾಧ್ಯಕ್ಷ ಬಾಲಕೃಷ್ಣ ಮಡಿವಾಳ, ಜೊತೆ ಕಾರ್ಯದರ್ಶಿ ಹರಿಣಾಕ್ಷಿ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಪುಷ್ಪಾ ಕುಲಾಲ್, ಸದಸ್ಯರಾದ ಸಂಧ್ಯಾ ಶೆಟ್ಟಿ, ಲಲಿತಾ ಆಚಾರ್ಯ, ಲೀಲಾ ಪೂಜಾರಿ, ಪದ್ಮಶ್ರೀ ಪೂಜಾರಿ, ಅಶ್ವಿನಿ ಪೂಜಾರಿ ಮೊದಲಾದವರಿದ್ದರು
Post a comment