ಕಾರ್ಕಳ: ನಲ್ಲೂರು ನೆಂಗಿನೇಲು ಎ೦ಬಲ್ಲಿ ಜಾಗಕ್ಕೆ ಸಂಬ೦ಧಿಸಿದ೦ತೆ ಮನೆ ಮಂದಿಗೆ ತಂಡವೊ೦ದು ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿರುವ ಘಟನೆ ನಡೆದಿದೆ. ಜಯಶ್ರೀ ಶೆಟ್ಟಿ ಈಕುರಿತು ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಡಿ.14ರ ಬೆಳಿಗ್ಗೆ 10ಗಂಟೆಗೆ ಆರೋಪಿಗಳಾದ ಭಾಸ್ಕರ್ ಶೆಟ್ಟಿ, ಉದಯಶೆಟ್ಟಿ, ಪುಷ್ಪರಾಜ್,ಸುನೀತ್
ರಾಜ್ ಎಂಬವರು ತಮ್ಮ ಜಾಗಕ್ಕೆ ಅತಿಕ್ರಮಿಸಿ ಜಿಸಿಬಿಯಿಂದ ರಸ್ತೆ ನಿರ್ಮಾಣ ಮಾಡುತ್ತಿದ್ದರು. ಅದನ್ನು
ಪ್ರಶ್ನಿಸಿದಕ್ಕೆ ಆರೋಪಿತರು ದೂಡಿ ಹಾಕಿ ಬೆದರಿಕೆಯೊಡ್ಡಿದ್ದಾರೆ.
ಅದೇ ಸಂದರ್ಭದಲ್ಲಿ ಜಯಶ್ರೀ ಅವರ ತಾಯಿ ಲೀಲಾವತಿ ಶೆಟ್ಟಿ ಅವರು ಘಟನಾ ಸ್ಥಳಕ್ಕೆ ಬಂದಿದ್ದು, ಅವರನ್ನು ನೆಲಕ್ಕೆ ದೂಡಿಹಾಕಿ ಗಾಯಗೊಳಿಸಿದ್ದಾರೆ ಎಂದು ಜಯಶ್ರೀ ಶೆಟ್ಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಜಾಹೀರಾತು
Post a comment