ಕಾರ್ಕಳ:ಶಿಕ್ಷಕರೊಂದಿಗೆ ನಾವು ಕಾರ್ಯಕ್ರಮಕ್ಕೆ ಚಾಲನೆ-Times of karkala

ಕಾರ್ಕಳದ ಪುರಸಭೆ ಮತ್ತು ರೋಟರಿ ಆನ್ಸ್ ಕ್ಲಬ್ಬಿನ ಜಂಟಿ ಆಶ್ರಯದಲ್ಲಿ ಶಿಕ್ಷಕರೊಂದಿಗೆ ನಾವು ಕೋವಿಡ್-19 ಮಾಹಿತಿ ಕಾರ್ಯಕ್ರಮಕೆ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮವು ಕಾರ್ಕಳದ ಐದು ಕಾಲೇಜುಗಳಲ್ಲಿ ನಡೆಯಲಿದ್ದು ಪುರಸಭೆಯ ಮುಖ್ಯಾಧಿಕಾರಿ  ರೇಖಾ ಜೆ.ಶೆಟ್ಟಿ ಅವರಿಂದ ಪ್ರಾರಂಭಗೊಂಡಿತು.  ಕಾರ್ಯಕ್ರಮದಲ್ಲಿ ಕಾಲೇಜು ಮುಂದಿನ ದಿನಗಳಲ್ಲಿ ವಹಿಸಿಕೊಳ್ಳಬೇಕಾದ ಜಾಗೃತಿ ಕ್ರಮದ ಬಗ್ಗೆ ಮಾತನಾಡಿದ ಅವರು ಮಾರ್ಚ್ ನಿಂದ ಇಲ್ಲಿಯವರೆಗೆ ನಡೆಸಿದ ಪುರಸಭೆಯ ಕಾರ್ಯವನ್ನು ಹಾಗೂ ಮುಂದಿನ ದಿನಗಳಲ್ಲಿ  ಶಿಕ್ಷಕರ ಪಾತ್ರವನ್ನು ಹೇಳಿದರು.

ರೋಟರಿ ಆನ್ಸ್ ಕ್ಲಬಿನ ಅಧ್ಯಕ್ಷೆ ರೋ. ರಮಿತಾ ಶೈಲೇಂದ್ರ ರಾವ್ ಅವರು ಮಕ್ಕಳನ್ನು ಪರಿಸರ ಪ್ರೇಮಿಗಳಾಗಿ ಆದಷ್ಟು ಪರಿಸರ ವಸ್ತುಗಳನ್ನು ಬೆಳಸುವಲ್ಲಿ ಮಕ್ಕಳ ಪಾತ್ರ ಮುಖ್ಯವಾಗಿದೆ ಎಂದು ಮನವಿ ಮಾಡಿದರು. ಕಾಲೇಜು ಪ್ರಾಂಶುಪಾಲರಾದ ಡಾ.ಮಂಜುನಾಥ್ ಕೋಟ್ಯಾನ್ ತಾವು ಕೋವಿಡ್-19 ಈಗಾಗಲೇ ವಹಿಸಿಕೊಂಡಿರುವ ಕ್ರಮಗಳನ್ನು ತಿಳಿಸಿದರು. ಹಳೆವಿದ್ಯಾರ್ಥಿ  ವರ್ಷ ನಾಯಕ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಜಾಹೀರಾತು

 



 








Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget