ಬಿಜೆಪಿ ಈದು - ನೂರಾಳ್ ಬೆಟ್ಟು ವತಿಯಿಂದ ಗ್ರಾಮ ಸ್ವರಾಜ್ಯ ಸಮಾವೇಶ -2020 ಹೊಸ್ಮಾರಿನಲ್ಲಿ ಇಂದು ಯಶಸ್ವಿಯಾಗಿ ಜರಗಿತು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಮಣಿರಾಜ್ ಶೆಟ್ಟಿ, ಈದು ಶಕ್ತಿಕೇಂದ್ರ ಅಧ್ಯಕ್ಷರಾದ ಮಾಪಾಲು ಜಯವರ್ಮ ಜೈನ್, ಮಿಯ್ಯಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಕರುಣಾಕರ ಕೋಟ್ಯಾನ್, ಜಿ.ಪಂ ಸದಸ್ಯರಾದ ದಿವ್ಯಶ್ರೀ ಗಿರೀಶ್ ಅಮೀನ್, ತಾ.ಪಂ. ಸದಸ್ಯರಾದ ಮಂಜುಳಾ, ಮಿಯ್ಯಾರು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ, ಮಿಯ್ಯಾರು ಮಹಾಶಕ್ತಿ ಕೇಂದ್ರದ ಯುವಮೋರ್ಚಾ ಅಧ್ಯಕ್ಷರಾದ ರಾಕೇಶ್ ಅಮೀನ್, ಬಿಜೆಪಿ ಮಿಯ್ಯಾರು ಮಹಾಶಕ್ತಿ ಕೇಂದ್ರದ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಮಾನಸ, ಈದು ಶಕ್ತಿಕೇಂದ್ರದ ಪ್ರಭಾರಿ ಪುರುಷೋತ್ತಮ ಎಚ್, ಎಪಿಎಂಸಿ ಸದಸ್ಯರಾದ ನಾರಾಯಣ ಸುವರ್ಣ ಉಪಸ್ಥಿತಿದ್ದರು.
ಈ ಸಮಾವೇಶದಲ್ಲಿ ನಾನಾ ಬೂತ್ ಸಮಿತಿಯ ಅಧ್ಯಕ್ಷರುಗಳು ಹಾಗೂ ಪ್ರಧಾನ ಕಾರ್ಯದರ್ಶಿ ಗಳು, ಯುವ ಮೋರ್ಚಾದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು, ಮಹಿಳಾ ಮೋರ್ಚಾದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು,ಹಿತೈಷಿಗಳು ಉಪಸ್ಥಿತಿದ್ದರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಮಣಿರಾಜ್ ಶೆಟ್ಟಿಯವರನ್ನು ಈದು ಶಕ್ತಿಕೇಂದ್ರದ ವತಿಯಿಂದ ಅಭಿನಂದಿಸಿ, ಗೌರವಿಸಲಾಯಿತು.
ಮಿಯ್ಯಾರು ಮಹಾಶಕ್ತಿ ಕೇಂದ್ರದ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಚಿತ್ತಾರ ಸ್ವಾಗತಿಸಿ, ಈದು ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಗಂಗಾಧರ ಗೌಡ ಕಾರ್ಯಕ್ರಮ ನಿರೂಪಿಸಿದರು. ನೂರಾಳ್ ಬೆಟ್ಟು 2 ನೇ ಬೂತ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಆಚಾರ್ಯ ವಂದಿಸಿದರು.
ಜಾಹೀರಾತು
Post a comment