ಭಾರತೀಯ ವೈದ್ಯಕೀಯ ಸಂಘ ಕಾರ್ಕಳ ಘಟಕದ ವತಿಯಿಂದ ಕಾರ್ಕಳ ಬಸ್ಸು ನಿಲ್ದಾಣದಲ್ಲಿ ಕೇಂದ್ರ ಸರಕಾರದ ನೂತನ ಅಧಿಸೂಚನೆ ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಅಳವಡಿಸಿದ ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ (ಸಿಸಿಐಎಂ) ವಿರುದ್ಧ ಪಟ್ಟಣದ ವೈದ್ಯರು ಪ್ರತಿಭಟನೆ ನಡೆಸಿ, ಭಿತ್ತಿಪತ್ರ ಪ್ರದರ್ಶಿಸಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಬಳಿಕ ಕಾರ್ಕಳ ತಾಲೂಕು ಕಚೇರಿಗೆ ತೆರಳಿ, ಕಾರ್ಕಳ ತಾಲೂಕು ತಹಶೀಲ್ದಾರ್ ಪುರಂದರ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಭಾರತೀಯ ವೈದ್ಯಕೀಯ ಸಂಘ ಕಾರ್ಕಳ ಘಟಕದ ಅಧ್ಯಕ್ಷ ಡಾ. ಜ್ಞಾನೇಶ್ ಕಾಮತ್, ಕಾರ್ಯದರ್ಶಿ ಡಾ.ಪ್ರಕಾಶ್ ಶೆಟ್ಟಿ, ನಿಯೋಜಿತ ಅಧ್ಯಕ್ಷ ಡಾ. ಅನಂತ ಕಾಮತ್, ನಿಯೋಜಿತ ಕಾರ್ಯದರ್ಶಿ ಡಾ. ವಿಘ್ನೇಶ್ ಶೆಣೈ, ನಿಯೋಜಿತ ಕರ್ನಾಟಕ ರಾಜ್ಯ ಐ.ಎಂ.ಎ. ಅಧ್ಯಕ್ಷ ಡಾ. ಸುರೇಶ್ ಕುಡ್ವ, ಭಾರತೀಯ ವೈದ್ಯಕೀಯ ಸಂಘ ಕಾರ್ಕಳ ಘಟಕದ ನಿಕಟಪೂರ್ವ ಅಧ್ಯಕ್ಷ, ಭಾರತೀಯ ರೆಡ್ಕ್ರಾಸ್ ಸೊಸೈಟಿ ಕಾರ್ಕಳ ಘಟಕದ ಅಧ್ಯಕ್ಷ ಡಾ. ಕೆ. ಆರ್. ಜೋಶಿ, ಡಾ. ರಿಜ್ವಾನ್ ಅಹಮ್ಮದ್, ಡಾ.ಪ್ರದೀಪ್ ಕಿಣಿ, ಡಾ. ತುಷಾರ್, ಡಾ.ವಿಕ್ರಮ್ ಅಡ್ಯಂತಾಯ, ಡಾ. ಎಂ.ಎಸ್. ಪಡಿವಾಳ್, ಡಾ. ಪ್ರಭಾಕರ ನಾಯಕ್, ಡಾ.ಪ್ರಶಾಂತ್ ಹೆಗ್ಡೆ, ಡಾ. ರಾಮ್ದಾಸ್ ಶೆಣೈ
ಉಪಸ್ಥಿತರಿದ್ದರು.
ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಅಳವಡಿಸಿದ ಸೆಂಟ್ರಲ್ ಕೌನ್ಸಿಲ್ಆಫ್ ಇಂಡಿಯನ್ ಮೆಡಿಸಿನ್(ಸಿಸಿಐಎಮ್)ನ ವಿಚಿತ್ರ ನೀತಿಯಿಂದಾಗಿ ಆಧುನಿಕ ವೈದ್ಯಕೀಯ ವೃತ್ತಿ ಸಂಕಷ್ಟಕ್ಕೆ ಒಳಗಾಗಲಿದೆ.ಸ್ನಾತಕೋತ್ತರ ಆಯುರ್ವೇದ ಶಿಕ್ಷಣ ತಿದ್ದುಪಡಿ ನಿಯಮಾವಳಿಗಳ ಅಧಿಸೂಚನೆಯಲ್ಲಿ ಎಂ.ಎಸ್. ಶಲ್ಯತಂತ್ರ,ಎ೦.ಎಸ್. ಶಾಲಕ್ಯ ತಂತ್ರ ಎಂಬ ಸ್ನಾತಕೋತ್ತರ ಕೋರ್ಸ್ಗಳನ್ನು ಸೇರ್ಪಡೆ ಮಾಡಲಾಗಿದೆ. ಶಲ್ಯತಂತ್ರ ಹಾಗೂ ಶಾಲಕ್ಯ ತಂತ್ರಗಳ ವಿಷಯಗಳಲ್ಲಿ ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳ ದೀರ್ಘ ಪಟ್ಟಿಯನ್ನು ಸೇರಿಸಲಾಗಿದೆ.ಆದರೆ ಪ್ರಸ್ತುತ ಭಾರತೀಯ ವೈದ್ಯಕೀಯ ಮಂಡಳಿಯ ಶಿಫಾರಸ್ಸಿನಂತೆಈ ಎಲ್ಲ ಶಸ್ತ್ರಚಿಕಿತ್ಸೆಗಳು ಆಧುನಿಕವೈದ್ಯಕೀಯ ಶಾಸ್ತ್ರದ ಪರಿಮಿತಿಯೊಳಗೆ ಬರುವುದರಿಂದ ಈ ತಿದ್ದುಪಡಿ ನಿಯಮಾವಳಿ ಅಧಿಸೂಚನೆಯನ್ನು ತತ್ಕ್ಷಣ ಹಿಂಪಡೆಯಲು ಭಾರತೀಯ ವೈದ್ಯಕೀಯ ಸಂಘ ಆಗ್ರಹಿಸಿದೆ.
ಜಾಹೀರಾತು
Post a comment