ಗುಡ್ಡೆಯಂಗಡಿ ಫ್ರೆಂಡ್ಸ್ (ರಿ) ತೆಳ್ಳಾರ್ ರಸ್ತೆ ಕಾರ್ಕಳ ಹಾಗೂನಿಟ್ಟೆ ಗಾಜ್ರಿಯಾ ಸ್ಪೆಷಾಲಿಟಿ ಆಸ್ಪತ್ರೆ ಇವರ ಸಂಯೋಗದಲ್ಲಿ ನಿಟ್ಟೆ ಗಾಜ್ರಿಯಾ ಸ್ಪೆಷಾಲಿಟಿ ಆಸ್ಪತ್ರೆ ತೆಳ್ಳಾರ್ ರಸ್ತೆ ಕಾರ್ಕಳ ಇಲ್ಲಿ ದಿನಾಂಕ 06/12/2020 ಆದಿತ್ಯವಾರ ದಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.
ರಕ್ತದಾನ ಶಿಬಿರವನ್ನು ನಿಟ್ಟೆ ಗಾಜ್ರೀಯಾ ಆಸ್ಪತ್ರೆ M.D. ಡಾ: ಸಚಿದಾನಂದ ಪ್ರಭು ಉದ್ಘಾಟಿಸಲಿದ್ದಾರೆ. ಗುಡ್ಡೆಯಂಗಡಿ ಫ್ರೆಂಡ್ಸ್ (ರಿ.) ಕಾರ್ಕಳ ಇದರ ಅಧ್ಯಕ್ಷರಾದ ಸುಕೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಪುರಸಭೆ ಅಧ್ಯಕ್ಷೆ ಶ್ರೀಮತಿ ಸುಮಾ ಕೇಶವ್,ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮನಿರಾಜ್ ಶೆಟ್ಟಿ, ಪುರಸಭಾ ಸದಸ್ಯೆ ಭಾರತಿ ಅಮಿನ್,ಪುರಸಭಾ ಸದಸ್ಯ ಸೇೂಮನಾಥ ನಾಯ್ಕ್,ಗುಡ್ಡೆಯಂಗಡಿ ಪ್ರೆಂಡ್ಸ್ ಸ್ಥಾಪಕಾಧ್ಯಕ್ಷ ವಿಜಯ್ ಸಫಲಿಗ ಮತ್ತಿತರರು ಉಪಸ್ಥಿತಲಿರಲಿದ್ದಾರೆ.
ಸಾರ್ವಜನಿಕರು ಹಾಗೂ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಗುಡ್ಡೆಯಂಗಡಿ ಪ್ರೆಂಡ್ಸ್ (ರಿ.) ತೆಳ್ಳಾರು ರಸ್ತೆ ಕಾರ್ಕಳ ಇದರ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಮನವಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಜಾಹೀರಾತು
Post a comment