ಗುಡ್ಡೆಯಂಗಡಿ ಫ್ರೆಂಡ್ಸ್ (ರಿ.) ಕಾರ್ಕಳ ಮತ್ತು ನಿಟ್ಟೆ ಗಜರಿಯಾ ಆಸ್ಪತ್ರೆದ ನೇತೃತ್ವದಲ್ಲಿ ರಕ್ತನಿಧಿ ಘಟಕ, ಅಜ್ಜರಕಾಡು ಉಡುಪಿ ಇವರ ಸಹಕಾರದೊಂದಿಗೆ ರಕ್ತದಾನ ಶಿಬಿರವು ಗಜಾರಿಯಾ ಆಸ್ಪತ್ರೆಯಲ್ಲಿ ನಡೆಯಿತು.
ಶಿಬಿರವನ್ನು ಗಜಾರಿಯಾ ಆಸ್ಪತ್ರೆಯ ನಿರ್ದೇಶಕರಾದ ಡಾ. ಸಚ್ಚಿದಾನಂದ ಪ್ರಭು ಇವರು ಉದ್ಘಾಟಿಸಿ ರಕ್ತದಾನದ ಮಹತ್ವವನ್ನು ತಿಳುಹಿಸಿದರು.
ಕರ್ನಾಟಕ ಗೇರು ನಿಗಮದ ಅಧ್ಯಕ್ಷರಾದ ಬಿ. ಮನಿರಾಜ್ ಶೆಟ್ಟಿ, ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ಸುಮಾ ಕೇಶವ್, ಜಿಲ್ಲಾ ರಕ್ತದಾನ ನಿಧಿ ಕೇಂದ್ರದ ಮುಖ್ಯಸ್ಥರಾದ ಡಾ. ವೀಣಾ, ಪುರಸಭಾ ಸದಸ್ಯರಾದ ಶ್ರೀಮತಿ ಭಾರತಿ ಅಮೀನ್, ಗುಡ್ಡೆಯಂಗಡಿ ಫ್ರೆಂಡ್ಸ್ ನ ಸ್ಥಾಪಕ ಅಧ್ಯಕ್ಷರಾದ ವಿಜಯ್ ಸಪಲಿಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್, ವಿನಾಯಕ ಫ್ರೆಂಡ್ಸ್ ಕಾರ್ಕಳ, ಆಟೋರಿಕ್ಷಾ ಚಾಲಕ ಮಾಲಕ ಸಂಘ ಕಾರ್ಕಳ ಹಾಗೂ ಉತ್ಸಾಹಿ ಮಹಿಳೆಯರು ಸೇರಿದಂತೆ 90ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರಕ್ತವನ್ನು ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮವನ್ನು ಗಜಾರಿಯಾ ಆಸ್ಪತ್ರೆಯ ಮ್ಯಾನೇಜರ್ ಸುಧಾಕರ್ ಇವರು ನಿರೂಪಿಸಿ, ಗುಡ್ಡೆಯಂಗಡಿ ಫ್ರೆಂಡ್ಸ್ ಕ್ಲಬ್ ಇದರ ಅಧ್ಯಕ್ಷರಾದ ಸುಕೇಶ್ ಶೆಟ್ಟಿ ಇವರು ಸ್ವಾಗತಿಸಿದರು.
ಜಾಹೀರಾತು
Post a comment