ಸಿಡಿಲು ಬಡಿದು ವ್ಯಕ್ತಿ ಸಾವು-Times of karkala

ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ವಿಟ್ಲ ಸಮೀಪದ ಕರೋಪಾಡಿ ಗ್ರಾಮದ ಸಾರ್ಥಕೋಡಿ ಎಂಬಲ್ಲಿ  ಗುರುವಾರ ರಾತ್ರಿ ನಡೆದಿದೆ.


ಸಾಂಧರ್ಭಿಕಚಿತ್ರ 

ಮೃತಪಟ್ಟವರನ್ನುಚಂದಪ್ಪ ಮೂಲ್ಯ ಎಂದು ಗುರುತಿಸಲಾಗಿದೆ.

ರಾತ್ರಿಯ ಬಳಿಕ ಗುಡುಗು ಸಿಡಿಲು ಇದ್ದು, ಈ ಸಂದರ್ಭ ಮನೆಗೆ ಸಿಡಿಲು ಬಡಿದಿದೆ, ಸುಮಾರು 12.30ರ ಬಳಿಕ ಘಟನೆ ನಡೆದಿದ್ದು, ಚಂದಪ್ಪ ಮೂಲ್ಯ ಅವರು ಸಿಡಿಲಾಘಾತದಿಂದ ತೀವ್ರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಇದೇ ಸಂದರ್ಭ ಮನೆಗೂ ಸಿಡಿಲಾಘಾತದಿಂದ ಹಾನಿಗಳುಂಟಾಗಿ ವಿದ್ಯುತ್ ಉಪಕರಣಗಳು ಸುಟ್ಟುಹೋಗಿದ್ದು ,ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.

ಜಾಹೀರಾತು 

  



 








Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget