ನಿಧನ:ರಾಧಾ ಬಾಯಿ-Times of karkala

ಕಾರ್ಕಳ : ದಿವಂಗತ ಗಣಪತಿ ಕಾಮತ್ ಅವರ ಧರ್ಮ ಪತ್ನಿ ರಾಧಾ ಬಾಯಿ ಅವರು ಡಿಸೆಂಬರ್ ೧೮, ಶುಕ್ರವಾರ ಕಾರ್ಕಳ ಜೋಡುಕಟ್ಟೆಯ ಪುತ್ರನ ಮನೆಯಲ್ಲಿ ನಿಧನರಾದರು.



ಜನಾನುರಾಗಿಯಾಗಿದ್ದ ಅವರು ಇನ್ನಂಜೆಯಲ್ಲಿ ಆರು ವರ್ಷಗಳ ಶಿಕ್ಷಕಿಯಾಗಿ ಸೇವೆಸಲ್ಲಿಸಿ ಬಳಿಕ ಪಾಣೆಮಂಗಳೂರಿನ ಶ್ರೀ ಶಾರದಾ ಪ್ರೌಢಶಾಲೆಗೆ ವರ್ಗಾವಣೆಯಾಗಿ ಇಪ್ಪಂತೊಂದು ವರ್ಷಗಳ ಕಾಲ ಹಿಂದಿ ಹಾಗೂ ಕಲಾ ಶಿಕ್ಷಕಿಯಾಗಿ ಸೇವೆಗೈದು ನಿವೃತ್ತಿ ಹೊಂದಿದರು.

ನಿವೃತ್ತಿಯ ಬಳಿಕವೂ ತಮ್ಮದೇ ಆದ ಸಿದ್ಧ ಉಡುಪುಗಳ ತಯಾರಿಕಾ ಘಟಕವನ್ನು ಹೊಂದಿದ್ದರು. ಸಾವಿರಾರು ಜನರಿಗೆ ಹೊಲಿಗೆ ತರಬೇತಿಯನ್ನು ನೀಡಿ ಅವರ ಜೀವನಕ್ಕೊಂದು ದಾರಿ ತೋರಿಸಿದ್ದರು.

ಸದಾ ಚಟುವಟಿಕೆಯಿಂದ ಇರುವ ಇವರು ಕಸದಿಂದಲೂ ರಸವನ್ನು ತೆಗೆಯುವ ಪ್ರವೀಣೆಯಾಗಿದ್ದರು.ಅವರು ಓರ್ವ ಪುತ್ರ, ಸೊಸೆ, ಲೇಖಕಿ ವೀಣಾ ಶ್ಯಾನಭೋಗ್ ಸಹಿತ ನಾಲ್ವರು ಪುತ್ರಿಯರು, ಅಳಿಯಂದಿರು,

ಹದಿನೈದು ಮೊಮ್ಮಕ್ಕಳು, ನಾಲ್ಕು ಮರಿಮಕ್ಕಳನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಜಾಹೀರಾತು 

  



 








Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget