ಹೆಬ್ರಿ ತಾಲ್ಲೂಕು:ಗ್ರಾಮ ಪಂಚಾಯಿತಿ ಮತ ಎಣಿಕೆ.ಮುದ್ರಾಡಿ ಗ್ರಾಮ ಪಂಚಾಯಿತಿ ಬಿಜೆಪಿ ಭರ್ಜರಿ ಗೆಲುವು:ಕುಚ್ಚೂರಿನಲ್ಲಿ ಪಕ್ಷೇತರರಿಗೆ ಗದ್ದುಗೆ - ಮಡಾಮಕ್ಕಿಯಲ್ಲಿ ಕಾಂಗ್ರೆಸ್‌.-Times of karkala

ಹೆಬ್ರಿ ತಾಲ್ಲೂಕು : ಗ್ರಾಮ ಪಂಚಾಯಿತಿ ಮತ ಎಣಿಕೆ.

ಮುದ್ರಾಡಿ ಗ್ರಾಮ ಪಂಚಾಯಿತಿ ಬಿಜೆಪಿ ಭರ್ಜರಿ ಗೆಲುವು : ಕುಚ್ಚೂರಿನಲ್ಲಿ ಪಕ್ಷೇತರರಿಗೆ ಗದ್ದುಗೆ - ಮಡಾಮಕ್ಕಿಯಲ್ಲಿ ಕಾಂಗ್ರೆಸ್‌.ಹೆಬ್ರಿ : ಹೆಬ್ರಿ ತಾಲ್ಲೂಕಿನ ೯ ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಸಂಜೆ ೬ ಗಂಟೆಯ ಸುಮಾರಿಗೆ ೪ ಪಂಚಾಯಿತಿಯ ಫಲಿತಾಂಶ ಪ್ರಕಟಗೊಂಡಿದೆ. 

ಮುದ್ರಾಡಿ ೧೫ರಲ್ಲಿ ೧೫ ಸೀಟು ಬಿಜೆಪಿ ಮಡಿಲಿಗೆ : 

ಪ್ರತಿಷ್ಠೆಯ ಕಣವಾಗಿದ್ದ ಮುದ್ರಾಡಿ ಗ್ರಾಮ ಪಂಚಾಯಿತಿಯ ೧೫ ಸೀಟುಗಳಲ್ಲಿ ೧೫ ರಲ್ಲೂ ಬಿಜೆಪಿ ಬೆಂಬಲಿತರು ಜಯಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಕಳೆದ ೩೫ ವರ್ಷಗಳಿಂದ ಕಾಂಗ್ರೆಸ್‌ ಬೆಂಬಲಿತರು ಅಧಿಕಾರ ನಡೆಸುತ್ತಿದ್ದರು. ಪ್ರಸ್ತುತ ಸಾಲಿನ ಅಧ್ಯಕ್ಷೆ ಶಶಿಕಲಾ ಪೂಜಾರಿ ಸಹಿತ ಎಲ್ಲರೂ ಪರಾಭವಗೊಂಡಿದ್ದಾರೆ. ಗಣಪತಿ ಮುದ್ರಾಡಿ ೨೨೬, ವಸಂತಿ ಪೂಜಾರಿ ೪೧೦, ಶುಭದರ ಶೆಟ್ಟಿ ೪೫೭, ಜಗದೀಶ ಪೂಜಾರಿ ೨೭೪, ವನಿತಾ ರಾವ್‌ ೨೩೯, ನಾಗಶ್ರೀ ೪೪೪, ಸಂತೋಷ ಶೆಟ್ಟಿ ಉಪ್ಪಳ ೪೭೯, ಮಂಜುನಾಥ ಹೆಗ್ಡೆ ಡಿಪಿಎಂ ೫೨೫, ರತ್ನಾ ಪೂಜಾರಿ ೪೪೮, ಜಯಂತಿ ಗೌಡ ೪೩೦, ಸನತ್‌ ಕುಮಾರ್‌ ೬೩೪, ಶಾಂತಾ ೫೫೫, ರಮ್ಯಕಾಂತಿ ೫೪೩, ಪಲ್ಲವಿ ೩೦೩, ಸತೀಶ್‌ ಗೌಡ ೩೦೩ ಬಿಜೆಪಿ ಬೆಂಬಲಿತರಾಗಿ ಜಯ ಗಳಿಸಿದ್ದಾರೆ. 


ನಾಡ್ಪಾಲು ಗ್ರಾಮ ಪಂಚಾಯಿತಿ : ನಾಡ್ಪಾಲು ಗ್ರಾಮ ಪಂಚಾಯಿತಿಯಲ್ಲೂ ಕಳೆದ ಅವಧಿಯಲ್ಲಿ ಬಿಜೆಪಿ ಬೆಂಬಲಿತರ ಅಧಿಕಾರವಿದ್ದು ಈ ಬಾರಿಯೂ ಗದ್ದುಗೆ ಉಳಿಸಿಕೊಂಡಿದ್ದಾರೆ.  ೭ ರಲ್ಲಿ ೭ ಸ್ಥಾನವನ್ನು ಮತ್ತೇ ಬಿಜೆಪಿ ಉಳಿಸಿಕೊಂಡಿದೆ. ನವೀನ್‌ ಪೂಜಾರಿ ೨೬೩, ದಿನೇಶ ಹೆಗ್ಡೆ ೩೩೭, ಆಶಾ ಕುಮಾರಿ ೩೦೭, ರಾಘವೇಂದ್ರ ಹೆಗ್ಡೆ ೩೩೨, ಶ್ರೀಲತಾ ಪೂಜಾರಿ ೩೦೩ ಜಯಗಳಿಸಿದ್ದರೇ ಸುಮಾಂಗಲ ಮತ್ತು ಸವಿತಾ ಅವಿರೋಧವಾಗಿ ಆಯ್ಕೆಯಾಗಿದ್ದರು. 


ಕುಚ್ಚೂರು ಪಂಚಾಯಿತಿಯಲ್ಲಿ ಪಕ್ಷೇತರರಿಗೆ ಗದ್ದುಗೆ : ಕುಚ್ಚೂರು ಗ್ರಾಮ ಪಂಚಾಯಿತಿಯಲ್ಲಿ ಈ ಸಲ ಪಕ್ಷೇತರರು ಅಧಿಕಾರದ ಗದ್ದುಗೆ  ಹಿಡಿದಿದ್ದಾರೆ. ೧೧ ಸದಸ್ಯ ಬಲದ ಪಂಚಾಯಿತಿಯಲ್ಲಿ ಬಾದ್ಲು ಮಹೇಶ ಶೆಟ್ಟಿ ನೇತ್ರತ್ವದಲ್ಲಿ ೮ ಮಂದಿ ಪಕ್ಷೇತರರು ಜಯಗಳಿಸಿ ಗದ್ದುಗೆ ಏರಿದ್ದಾರೆ. ಅಧಿಕಾರದಲ್ಲಿದ್ದ ಬಿಜೆಪಿ ಕೇವಲ ೩ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಪಕ್ಷೇತರರಾದ ರೇವತಿ ಶೆಟ್ಟಿ, ೪೦೬, ಸತೀಶ ನಾಯ್ಕ್‌ ೩೯೯, ಸುಕನ್ಯಾ ೪೨೯, ಬಾದ್ಲು ಮಹೇಶ ಶೆಟ್ಟಿ ೫೧೫, ರಾಘವೇಂದ್ರ ಪೂಜಾರಿ, ಶಶಿಕಲಾ ೩೨೦, ಸುಜಾತ ಶೆಟ್ಟಿ ೩೭೦, ಕುಚ್ಚೂರು ಮಹೇಶ ಶೆಟ್ಟಿ ೫೦೧ ಮತ ಗಳಿಸಿ ಜಯಗಳಿಸಿದ್ದಾರೆ. ಬಿಜೆಪಿ ಬೆಂಬಲಿತರಾದ ಸತೀಶ ಪೂಜಾರಿ ೪೭೨, ಶಕುಂತಳಾ ೩೯೧ ಮತ್ತು ಮಾಲಿನಿ೪೨೨ ಜಯಗಳಿಸಿದ್ದಾರೆ. 


ಮಡಾಮಕ್ಕಿಯಲ್ಲಿ ಕಾಂಗ್ರೆಸ್‌ ಗೆ ಗದ್ದುಗೆ :

ಹೆಬ್ರಿ ತಾಲ್ಲೂಕಿನ ಮಡಾಮಕ್ಕಿ ಗ್ರಾಮ ಪಂಚಾಯಿತಿಯ ೧೧ ಸೀಟಿನಲ್ಲಿ ೬ ಕಡೆ ಕಾಂಗ್ರೆಸ್‌ ಜಯಗಲಿಸಿದೆ. ೫ಕಡೆ ಬಿಜೆಪಿ ಜಯಗಳಿಸಿದೆ. ಕಾಂಗ್ರೆಸ್‌ ಬೆಂಬಲಿತರಾದ ದಯಾನಂದ ಪೂಜಾರಿ ೩೨೫, ಪ್ರತಾಪ ಶೆಟ್ಟಿ ೨೫೯, ಸುರೇಶ ಶೆಟ್ಟಿ ೩೫೪, ಉದಯ ಕುಮಾರ್‌ ಶೆಟ್ಟಿ ೫೫೭, ಸುಶೀಲಾ ೪೪೫, ಬೇಬಿ ಹೆಗ್ಡೆ ೪೫೪ ಮತ ಪಡೆದು ವಿಜಯಿಯಾಗಿದ್ದಾರೆ. ಬಿಜೆಪಿಯ ರತಿ ಕುಲಾಲ್‌ ೨೩೫, ಜಯಲಕ್ಷ್ಮೀ ೨೫೫, ಸದಾನಂದ ಪೂಜಾರಿ ೩೫೬ ಮತ್ತು ಜ್ಯೋತಿ ಸೀತಾರಾಮ್‌ ೩೧೭ ಮತ ಪಡೆದು ಜಯಮಾಲೆ ಧರಿಸಿಕೊಂಡಿದ್ದಾರೆ. 


ಶಿವಪುರ ಅಧಿಕಾರ ಉಳಿಸಿಕೊಂಡ ಬಿಜೆಪಿ ಬೆಂಬಲಿಗರು.

ಅಧಿಕಾರದಲ್ಲಿ ಬಿಜೆಪಿ ಬೆಂಬಲಿತ ಶಿವಪುರ ಗ್ರಾಮ ಪಂಚಾಯಿತಿಯಲ್ಲಿ ಸುರೇಶ ಶೆಟ್ಟಿ ಹುಣ್ಸೆದಡಿ ನೇತ್ರತ್ವದಲ್ಲಿ ಚುನಾವಣೆ ನಡೆದಿದ್ದು ೧೩ರಲ್ಲಿ ೮ ಮಂದಿ ಬಿಜೆಪಿಯ ಬೆಂಬಲಿತರು ಜಯಗಳಿಸಿ ಅಧಿಕಾರ ಉಳಿಸಿಕೊಂಡಿದ್ದಾರೆ. ಪಕ್ಷೇತರರು ೫ ಸ್ಥಾನಕ್ಕೆ ತೃಪ್ತಿ ಪಡೆದಿದ್ದಾರೆ. 

ಸುಕನ್ಯಾ ಆಚಾರ್ಯ ೪೨೦, ಸುಗಂಧಿನಾಯ್ಕ್‌ ೪೨೦, ಶೇಖರ ಶೆಟ್ಟಿ ೩೧೮, ಜ್ಯೋತಿ ೩೦೬, ಶೋಭಾ ೩೧೧, ಶಂಕರ ಬಡ್ಕಿಲ್ಲಾಯ ೩೬೫, ಮಯೂರ್‌ ಹೆಗ್ಡೆ ೩೦೬, ಶ್ವೇತಾ ಪೂಜಾರಿ ೨೮೮ ಮತ ಪಡೆದು ಬಿಜೆಪಿ ಬೆಂಬಲಿತರಾಗಿ ಜಯಗಳಿಸಿದ್ದಾರೆ. ಸಂತೋಷ ಶೆಟ್ಟಿ ನಾಯರಕೋಡು ೩೨೬, ವನಿತಾ ೩೮೫, ರಂಜಿತಾ ಪ್ರಭು ೪೧೦, ಜಗನ್ನಾಥ ಕುಲಾಲ್‌ ೪೬೮, ಮತ್ತು ಸುಮಿತ್ರಾ ನಾಯ್ಕ್‌ ೩೦೭ ಮತ ಪಡೆದು ಪಕ್ಷೇತರರಾಗಿ ಜಯ ಗಳಿಸಿದ್ದಾರೆ.

ಜನಾರ್ಧನ್  ಇವರು ಹೆಬ್ರಿ ತಾಲೂಕುನಲ್ಲಿ ಅತೀ ಹೆಚ್ಚು ಮತ ಪಡೆದವರು, ಗಿಲ್ಲಾಳಿ ಕ್ಷೇತ್ರದ ಮೂಲಕ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದವರು  698 ಮತಗಳನ್ನ ಪಡೆದರು.


ಜಾಹೀರಾತು 

   

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget