ಹಿರಿಯಂಗಡಿ:ದುರ್ಗಾಪರಮೇಶ್ವರಿ ದೇವಸ್ಥಾನದ ದೀಪೋತ್ಸವ ಮತ್ತು ದಾರ್ಮಿಕ ಕಾರ್ಯಕ್ರಮ-Times of karkala

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದೀಪೋತ್ಸವ ಪ್ರಯುಕ್ತ ದಾರ್ಮಿಕ ವಿಧಿ ವಿಧಾನಗಳು, ಕ್ಷೇತ್ರದ ತಂತ್ರಿಗಳಾದ ಎಡಪದವು  ಬಿ. ಸುಬ್ರಮಣ್ಯ ಭಟ್ ಇವರ ನೇತೃತ್ವದಲ್ಲಿ, ಆರ್ಚಕರಾದ ಪ್ರಕಾಶ್ ಭಟ್ ಇವರ ಉಪಸ್ಥಿತಿಯಲ್ಲಿ ನಡೆದ ದೇವತಾ ಕಾರ್ಯಗಳು, ರಂಗಪೂಜೆ, ದೇವರ ಪಲ್ಲಕಿ ಉತ್ಸವ ಮತ್ತು ಆಕಷಕ ಬಲಿ‌ ಎಲ್ಲಾ ಭಕ್ತರ ಮನಸೂರೆಗೊಂಡಿತು. ಸಾಯಂಕಾಲ ಧಾರ್ಮಿಕ ಸಭಾ ಕಾರ್ಯಕ್ರಮವು ದೇವಳದ ಆಡಳಿತ‌ ಮೊಕ್ತೇಸರಾದ ಗಿರೀಶ್ ರಾವ್ ಮೋರೆ ಇವರ ಅಧ್ಯಕ್ಷತೆಯನ್ನು ನಡೆಯಿತು.ಉಮಾಮಹೇಶ್ವರಿ ದೇವಸ್ಥಾನ  ಶಿವತಿಕೆರೆ ಇಲ್ಲಿನ ಪ್ರಧಾನ ಅರ್ಚಕರಾದ ವಿನಾಯಕ್ ಭಟ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು, ದೇವಳದ ಮೊಕ್ತೇಸರುಗಳಾದ ಶೇಖರ್ ರಾವ್, ಗಣೇಶ್ ರಾವ್, ರಾಮಚಂದ್ರ ರಾವ್, ಸುದೀಂದ್ರ ರಾವ್, ವಾಮನ್ ಮುಳ್ಳಂಗೋಡು ವಾಗ್ಮಾನ್, ಆಶಾ ಜಿ. ರಾವ್, ಜೀರ್ಣೋದ್ಧಾರ ಸಮಿತಿಯ ಅದ್ಯಕ್ಷರಾದ ಪ್ರಕಾಶ್ ರಾವ್ ಜಾಧವ್ ಭಜನಾ ಸೇವಾ ಸಮಿತಿಯ‌ ಸಂಚಾಲಕ ಸುರೇಂದ್ರ ರಾವ್ ಮೊದಲಾದವರ ಉಪಸ್ಥಿತಿಯಲ್ಲಿ ಎಸ್ ಎಸ್ ಎಲ್‌ ಸಿ, ಪಿಯುಸಿ, ಪದವಿ, ಮತ್ತು ಡಿಪ್ಲೊಮಾ ದಲ್ಲಿ ಸಾದನೆಗೈದ ಸಮಾಜದ ಪ್ರತಿಭಾವಂತ 16 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ವೃತ್ತಿ ನಿವೃತ್ತಿ ಹೊಂದಿದ ಸರಕಾರಿ ನೌಕರರಾದ ಸುರೇಂದ್ರ ರಾವ್ ಕಾಳಿಕಾಂಬ,ಚಂದ್ರಶೇಖರ್ ಜೋಡುಕಟ್ಟೆ, ಬಾಬೋಜಿರಾವ್ ಮೂಡಬಿದ್ರಿ, ಸುಧಾಕರ್ ಮುಲ್ಕಿ, ಏಕನಾಥ್, ಮತ್ತು  ದೇವೇಂದ್ರ ತೀರ್ಥಹಳ್ಳಿ, ಮೊದಲಾದವರನ್ನು ಸನ್ಮಾನಿಸಲಾಯಿತು. ಸಮಾಜದ ಹಿರಿಯ ವ್ಯಕ್ತಿ ವಾಸೋಜಿರಾವ್ ಮತ್ತು ದೇವಸ್ಥಾನದಲ್ಲಿ 50 ವರ್ಷ ಸ್ವಚ್ಚತಾ ಸೇವೆ ಸಲ್ಲಿಸಿದ ಕಮಲ ದೇವಾಡಿಗ ಇವರನ್ನು ಗೌರವಿಸಲಾಯಿತು.

 ಉಪ ತಾಹಶೀಲ್ದಾರರಾಗಿ ಸೇವಾ ಭಡ್ತಿ ಹೊಂದಿದ ರವಿಶಂಕರ್ ಇವರಿಗೆ ಅಭಿನಂದಿಸಲಾಯಿತು. ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುವಾನ ವಿತರಣೆಯ ಜೊತೆಗೆ  ದಾನಿಗಳನ್ನು ಗೌರವಿಸಲಾಯಿತು.  ಕ್ಷತ್ರೀಯ ಮರಾಠ ಸಮಾಜ ಅದ್ಯಕ್ಷರಾದ ಶುಭದರಾವ್ ಕಾರ್ಯದರ್ಶಿ ಪ್ರಸನ್ನರಾವ್, ಪಧಾದಿಕಾರಿಗಳಾದ ಹರೇಂದ್ರರಾವ್ ಆಶಾಲತಾ, ಮತ್ತಿತರ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

ಜಾಹೀರಾತು   
Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget