"ಶಿಕ್ಷಕರೊಂದಿಗೆ ನಾವು" ವಿಶೇಷ:ಉಪನ್ಯಾಸಕರಿಗೆ ಕೊರೊನಾ ಜಾಗ್ರತಿಯ ಬಗ್ಗೆ ಕಾರ್ಯಾಗಾರ-Times of karkala

ಕಾರ್ಕಳ:ಪುರಸಭೆ ಹಾಗೂ ರೋಟರಿ ಆನ್ಸ್ ಕ್ಲಬ್ ಕಾರ್ಕಳ ಇದರ ಸಂಯುಕ್ತ ಆಶ್ರಯದಲ್ಲಿ "ಶಿಕ್ಷಕರೊಂದಿಗೆ ನಾವು" ಎಂಬ ವಿಶೇಷ ಶೀರ್ಷಿಕೆಯಡಿ  ಸಂಸ್ಥೆಯ ಉಪನ್ಯಾಸಕರಿಗೆ ಕೊರೊನಾ ಜಾಗ್ರತಿಯ ಬಗ್ಗೆ ಕಾರ್ಯಾಗಾರ ನಡೆಯಿತು. 

ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಶಶಿಧರ್ ಜಿ.ಎಸ್. ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಚಂದ್ರಹಾಸ ಸುವರ್ಣ ರವರು ವಹಿಸಿದ್ದರು. 

ಸಂಪನ್ಮೂಲ ವ್ಯಕ್ತಿಯಾಗಿ ಕ್ಷೇತ್ರ ಆರೋಗ್ಯಧಿಕಾರಿಗಳಾದ ಡಾ. ಶಶಿಧರ್ ಮುಖ್ಯ ಅಥಿತಿಗಳಾಗಿ ಪುರಸಭಾ ಅಧ್ಯಕ್ಷರಾದ ಶ್ರೀಮತಿ ಸುಮಾ ಕೇಶವ್, ಪುರಸಭಾ ಸದಸ್ಯರಾದ ಭಾರತಿ ಅಮಿನ್, ರೋಟರಿ ಆನ್ಸ್ ಅಧ್ಯಕ್ಷರಾದ ಶ್ರೀಮತಿ ರಮಿತ ಶೈಲೇಂದ್ರ ರಾವ್, ಪ್ರಾಂಶುಪಾಲರಾದ ಅಭಿಷೇಕ್ ಸುವರ್ಣ, ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಗಳಾದ ಆಶೀಷ್ ಶೆಟ್ಟಿ ಉಪಸ್ಥಿತರಿದ್ದರು.

ಜಾಹೀರಾತು 

  



 








Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget