ಕಾರ್ಕಳ:ಕೋವಿಡ್ 19 ಜನ ಜಾಗೃತಿ ಜಾಥ-Times of karkala

ಉಡುಪಿ ಜಿಲ್ಲೆ ಕಾರ್ಕಳ ಗೃಹರಕ್ಷಕ ದಳದ ಮತ್ತು ರೋಟರಿ ಆನ್ಸ್ ಕ್ಲಬ್ ಕಾರ್ಕಳ ವತಿಯಿಂದ ಕೋವಿಡ್ 19 ಜನ ಜಾಗೃತಿ ಜಾಥ ದಿನಾಂಕ ೩೦ ಸೋಮವಾರ ದಂದು ಹಮ್ಮಿಕೊಂಡಿದ್ದು  ಪೂರ್ವಾಹ್ನ 10:00  ಗಂಟೆಗೆ ಸರಿಯಾಗಿ ಆನೆಕೆರೆ ಸರ್ಕಲ್ ನಿಂದ ಶ್ರೀ ಕೃಷ್ಣ ಕ್ಷೇತ್ರ ಆನೆಕೆರೆಯವರಿಗೆ ಜಾಥಾವು ನಡೆಯಿತು.


ಕಾರ್ಯಕ್ರಮದಲ್ಲಿ ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಡಾ|| ಪ್ರಶಾಂತ್ ಶೆಟ್ಟಿ ಡೆಪ್ಯೂಟಿ ಕಮಾಂಡೆಂಟ್ ಶ್ರೀ ರಮೇಶ್ ಕಾರ್ಕಳ ನಗರ ಠಾಣಾ ಉಪನಿರೀಕ್ಷಕರಾದ  ಮಧು ಬಿ ಹಾಗೂ ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ರಮಿತಾ ಶೈಲೇಂದ್ರ ಅವರು ಮತ್ತು ಕಾರ್ಯದರ್ಶಿ ಸುಮಾ ನಾಯಕ್ ಅವರು ಹಾಗೂ ಕಾರ್ಕಳ ಗೃಹರಕ್ಷಕ ದಳ ಘಟಕದ ಘಟಕಾಧಿಕಾರಿ ಶ್ರೀ ಪ್ರಭಾಕರ್ ಸುವರ್ಣ ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.


ಜಾಥದ  ಉದ್ದಕ್ಕೂ ಸಾರ್ವಜನಿಕರಿಗೆ ಉಚಿತ ಮಾಸ್ಕ ವಿತರಿಸಲಾಯಿತು.ಸಮಾರೋಪ ಸಮಾರಂಭವನ್ನು ದೇವಸ್ಥಾನದ ದೇವಾಲಯದಲ್ಲಿ ಸಿಬ್ಬಂದಿವರ್ಗದವರಿಗೆ ಅಭಿನಂದನ ಪದಕಗಳನ್ನು ನೀಡುವ ಮೂಲಕ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಲಾಯಿತು.

ಜಾಹೀರಾತು 

 



 








Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget