ಕಾರ್ಕಳ ಪುರಸಭಾ ವ್ಯಾಪ್ತಿಯ ಕಾಳಿಕಾಂಬಾ ಪರಿಸರದಲ್ಲಿ ಮಂಗಗಳ ಹಾವಳಿ ದಿನನಿತ್ಯ ಹೆಚ್ಚುತ್ತಿದ್ದು ಇದರಿಂದಾಗಿ ಸ್ಥಳೀಯರಿಗೆ ಹಾಗೂ ಕೃಷಿಕರಿಗೆ ವಿಪರೀತ ತೊಂದರೆಯಾಗುತ್ತಿದೆ. ಅರಣ್ಯ ಇಲಾಖೆ ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕಾರ್ಕಳ ಅರಣ್ಯ ವಲಯಾಧಿಕಾರಿಗೆ ಪುರಸಭಾ ಸದಸ್ಯ ಶುಭದರಾವ್ ಹಾಗೂ ಪ್ರಶಾಂತ್ ಕೋಟ್ಯಾನ್ ಮನವಿ ಸಲ್ಲಿಸಿದ್ದಾರೆ.
ಈ ಸಂಧರ್ಭ ಯುವಶಕ್ತಿ ಎಜುಕೇಷನ್ ಸೊಸೈಟಿ ಯ ಅಬ್ದುಲ್ ಖಾಲಿಕ್,ಜ್ಯೋತಿ ಯುವಕಮಂಡಲದ ಅಧ್ಯಕ್ಷ ನಾಗೇಶ್ ಹೆಗ್ಡೆ ಉಪಸ್ಥಿತರಿದ್ದರು.
Post a comment