ಕಾರ್ಕಳ:ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಕ್ರಿಮಿನಲ್ ‌ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ-Times of karkala

ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ  ಕಾರ್ಕಳ ಮುಖ್ಯಾಧಿಕಾರಿ ವಿರುದ್ಧ ಕ್ರಿಮಿನಲ್ ‌ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ. ಕಾರ್ಕಳ ಸ್ವಚ್ಛ ‌ಬ್ರಿಗೇಡ್ ಸದಸ್ಯರು ಹಾಗೂ ವಕೀಲರಾದ ವಿಪುಲ್ ಎಂ.ಕೆ ಎಂಬುವವರು ಸಾರ್ವಜನಿಕರ ಪರವಾಗಿ ‌ನೀಡಿದ ದೂರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ‌ಮಂಡಳಿ ಸ್ಪಂದಿಸುವ ಮೂಲಕ ಈ ಕ್ರಮ ಕೈಗೊಳ್ಳಲು ಮುಂದಾಗಿದೆ 

ಕಾರಣ ಏನು?

ಪುರಸಭೆ ಮುಖ್ಯಾಧಿಕಾರಿ ಹಾಗೂ ಸಂಬಂಧ ಪಟ್ಟ ಅಧಿಕಾರಗಳ ದಿವ್ಯ ನಿರ್ಲಕ್ಷಕ್ಕೆ ಕಾರ್ಕಳ ಪುರಸಭೆ ತ್ಯಾಜ್ಯ ನಿರ್ವಹಣೆ ಘಟಕ ಭಸ್ಮವಾಗಿ ಹೋಗಿದ್ದು ಅಷ್ಟೇ ಅಲ್ಲದೇ ಈ ಘನ ತ್ಯಾಜ್ಯ ಘಟಕ್ಕೆ ಬೆಂಕಿ ಬಿದ್ದ ಪರಿಣಾಮ ನಗರ ಪ್ರದೇಶಗಳೆಲ್ಲಾ ವಿಷಕಾರಿ ಹೊಗೆಯಿಂದ ವಾತಾವರಣ ಸೇರಿ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಿಗೆ ಇದೀಗ ಉಸಿರಾಟದ ತೊಂದರೆ ಕಾಣತೊಡಗಿದೆ.

ಪರಿಸರ ಮಾಲಿನ್ಯ ನಿಯಂತ್ರಣ ‌ಮಂಡಳಿ‌ ನೀಡಿದ ಪರವಾನಿಗೆ 2012ರಲ್ಲಿ ಅವಧಿ ಮುಗಿದು ಹೋಗಿದ್ದರೂ ನವೀಕರಣ ಮಾಡದ ಈ ಅಧಿಕಾರಿ ಸ್ಪಷ್ಟ ಕಾನೂನು ಉಲ್ಲಂಘಿಸಿದ್ದಾರೆ. ಈ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡಿರುವ ಅಂಶ ಬೆಳಕಿಗೆ ‌ಬಂದಿದೆ. ಈ ಕುರಿತು ಘನ ತ್ಯಾಜ್ಯ ಹಾಗೂ ಪರಿಸರ ಸಂರಕ್ಷಣೆ ಕಾಯ್ದೆ ಸ್ಪಷ್ಟವಾಗಿ‌ ಉಲ್ಲಂಘಿಸಿದ ತಮ್ಮ ಮೇಲೆ ಯಾಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂಬ ನೋಟೀಸ್ ‌ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪುರಸಭೆ ಮುಖ್ಯಾಧಿಕಾರಿಗೆ ನೀಡಿದೆ. ಹತ್ತು‌ ದಿನದೊಳಗೆ ಸೂಕ್ತ ಉತ್ತರ ನೀಡುವಂತೆ

ಪತ್ರ ಬರೆಯಲಾಗಿದ್ದು, ತಪ್ಪಿದ್ದಲ್ಲಿ ಕ್ರಿಮಿನಲ್ ‌ಕೇಸ್ ದಾಖಲಿಸುವುದಾಗಿ ಎಚ್ಚರಿಕೆಯೂ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಪುರಸಭೆ ‌ಮುಖ್ಯಾಧಿಕಾರಿ ರೇಖಾ ಶೆಟ್ಟಿ ಅಧಿಕಾರ ವಹಿಸಿದ ಬಳಿಕ ಮೂರು ಬಾರಿ ಘನ ತ್ಯಾಜ್ಯ ‌ನಿರ್ವಹಣಾ ಘಟಕಕ್ಕೆ ‌ಬೆಂಕಿ ಬಿದ್ದಿರುವುದು ಈ ಹಿಂದೆ ಇಂತಹ ಘಟನೆಗಳು‌ ನಡೆದಿಲ್ಲ. ಅಧಿಕಾರಗಳೇ ಇಂತಹ‌ ಕೃತ್ಯ ಎಸೆಗಿರುಬಹುದು ಎಂಬ ಸಂಶಯ ಮೂಡುತ್ತದೆ ಎಂದು ಸ್ಥಳೀಯರೊಬ್ಬರು ಆರೋಪಿಸಿದ್ದಾರೆ.

ಜಾಹೀರಾತು 

   
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget