ಕಾರ್ಕಳ:ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಕುಕ್ಕುಂದೂರು ಬಳಿ ನಡೆದಿದೆ.
ಕುಕ್ಕುಂದೂರು ಗ್ರಾಮದ ಹೊಸಹೊಕ್ಕಿಲು ಮನೆಯ ಜಗನ್ನಾಥ ದೇವಾಡಿಗ (70) ಮೃತಪಟ್ಟವರು.ಇವರಿಗೆ ಸರಿಯಾಗಿ ಕಣ್ಣು ಹಾಗೂ ಕಿವಿ ಕೇಳಿಸದೇ ಇದ್ದು ತಲೆತಿರುಗಿ ಬೀಳುವ ಖಾಯಿಲೆಯಿಂದ ಬಳಲುತ್ತಿದ್ದರು.
ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಪೊಲೀಸ್ ವರದಿ:
ಕಾರ್ಕಳ: ಜಗನ್ನಾಥ ದೇವಾಡಿಗ (70) ಇವರಿಗೆ ಸರಿಯಾಗಿ ಕಣ್ಣು ಹಾಗೂ ಕಿವಿ ಕೇಳಿಸದೇ ಇದ್ದು ತಲೆತಿರುಗಿ ಬೀಳುವ ಖಾಯಿಲೆ ಇರುತ್ತದೆ. ಇವರು ಸುಮಾರು ಆರು ತಿಂಗಳ ಹಿಂದೆ ಕಾರ್ಕಳ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ದಿನಾಂಕ 09/12/2020 ರಂದು ಸಂಜೆ 04:30 ಗಂಟೆಗೆ ಮನೆ ಸಮೀಪದ ಗದ್ದೆ ಪ್ರದೇಶದಲ್ಲಿ ಬೈಹುಲ್ಲಿಗೆ ಮುಳ್ಳು ಹಾಕುತ್ತಿದ್ದು ಆ ಸಮಯದಲ್ಲಿ ಮೃತರ ಪತ್ನಿ ಅವರಿಗೆ ಚಹಾ ತಿಂಡಿ ಕೊಟ್ಟು ಮನೆಗೆ ಹೋಗಿದ್ದು ಮೃತರು ಅಲ್ಲೇ ಇದ್ದ ಆವರಣ ಗೋಡೆ ಇಲ್ಲದ ಬಾವಿಯ ಬಳಿ ಚಹಾ ಕುಡಿಯುತ್ತಿದ್ದರು. ಸಂಜೆಯಾದರೂ ವಾಪಾಸು ಮನೆಗೆ ಬಾರದೇ ಇದ್ದುದ್ದನ್ನು ನೋಡಿ ಅವರನ್ನು ಎಲ್ಲಾ ಕಡೆ ಹುಡುಕಾಡಿ ಸಂಜೆ 6:30 ಗಂಟೆಗೆ ಬಾವಿಯ ಬಳಿ ಹೋಗಿ ನೋಡಿದಾಗ ಮೃತ ದೇಹ ನೀರಿನಲ್ಲಿ ತೇಲಾಡುತ್ತಿದ್ದು ಅವರನ್ನು ಸ್ಥಳೀಯರ ನೆರವಿನಿಂದ ನೀರಿನಿಂದ ಮೇಲಕ್ಕೆ ಎತ್ತಿ ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ರಾತ್ರಿ 10:30 ಗಂಟೆಗೆ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು ಇವರು ಆಕಸ್ಮಾತ್ ಬಾವಿಗೆ ಬಿದ್ದು ಮೃತಪಟ್ಟಿದ್ದು ಇವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬುದಾಗಿ ಅನಿಲ್ ದೇವಾಡಿಗ (40) ತಂದೆ: ಜಗನ್ನಾಥ ದೇವಾಡಿಗ ವಾಸ:ಹೊಸಹೊಕ್ಕಿಲು ಮನೆ ಕುಕ್ಕುಂದೂರು ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣಾ ಯು.ಡಿ.ಆರ್ ಕ್ರಮಾಂಕ 38/2020 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜಾಹೀರಾತು
Post a comment