"ವಿದ್ಯಾರ್ಥಿಗಳು ಆದಾಯ ಗಳಿಸಲು ಯಾವುದೋ ಒಂದು ಕೆಲಸವನ್ನು ಪಡೆದುಕೊಳ್ಳುವತ್ತ ಗಮನಹರಿಸುವ ಬದಲಾಗಿ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ಸೂಕ್ತ ಉದ್ಯೋಗವನ್ನು ಪಡೆದುಕೊಂಡು ಉನ್ನತ ಸ್ಥಾನಕ್ಕೇರಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಸಂಬಧಿಸಿದ ಕೌಶಲ್ಯ ಹಾಗೂ ತರಬೇತಿಗಳನ್ನು ಪಡೆದುಕೊಳ್ಳುವ ಅಗತ್ಯವಿದೆ" ಎಂದು ಮೃದು ಕೌಶಲ್ಯ ತರಬೇತುದಾರರಾದ ಶ್ರೀ ನವೀನ್ ನಾಯಕ್ ಅವರು ಹೇಳಿದರು.
ಅವರು ಕಾರ್ಕಳದ ಮಂಜುನಾಥ ಪೈ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, ಪ್ಲೇಸ್ಮೆಂಟ್ ಸೆಲ್ ಹಾಗೂ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಒಂದು ದಿನದ ಸಂದರ್ಶನ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನ ಕಾಂರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಶತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಶ್ರೀವರ್ಮ ಅಜ್ರಿ ಎಂ ಮಾತನಾಡಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ಲೇಸ್ಮೆಂಟ್ ಸೆಲ್ ನ ಸಂಯೋಜಕರಾದ ಸುಷ್ಮಾ ರಾವ್ ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಅಸೋಸಿಯೇಶನ್ನ ಸಂಯೋಜಕರಾದ ಸುಮಂತ್ ಕುಮಾರ್ ಜೈನ್ ಧನ್ಯವಾದ ಸಲ್ಲಿಸಿದರು. ಸ್ನಾತಕೋತ್ತರ ವಿಭಾÀಗದ ಪ್ಲೇಸ್ ಮೆಂಟ್ಮೆ೦ಟ್ ಸೆಲ್ನ ಸಂಯೋಜಕಿ ಮೈತ್ರಿ. ಬಿ. ಕಾಂ ಕಾರ್ಯಕ್ರಮ ನಿರೂಪಿಸಿದರು. ಇನ್ನೋರ್ವ ಸಂಚಾಲಕರಾದ ಸಂಧ್ಯಾ ಭಂಡಾರಿ ಸ್ವಾಗತಿಸಿದರು. ಪ್ರಾಧ್ಯಾಪಕ ವೃಂದದವರಾದ ಯೋಗೇಶ್, ನವೀನ್, ಗಣೇಶ್, ವೆಂಕಟೇಶ್ , ಕೃಷ್ಣಮೂರ್ತಿ ವೈದ್ಯ ,ಮಂಜುನಾಥ, ಜ್ಯೋತಿ ಶೆಟ್ಟಿ, ದಿವ್ಯಾ ಪ್ರಭು, ಸುನೀತಾ ಪಿರೇರಾ ಉಪಸ್ಥಿತರಿದ್ದರು.
ಜಾಹೀರಾತು
Post a comment