ಮುನಿಯಾಲು ಸಂಜೀವಿನಿ ಫಾರ್ಮ್ ಮತ್ತು ಡೈರಿಯಲ್ಲಿ ದೇಶೀಯ ಗೋ ತಳಿಗಳ ಲೋಕಾರ್ಪಣೆ ಮತ್ತು ಗೋಧಾಮದ ಉದ್ಘಾಟನೆ. "ಅಪೂರ್ವ ಗೋತಳಿಗಳ ಸಂರಕ್ಷಣೆ ಪುಣ್ಯದ ಕೆಲಸ"-ಸುಬ್ರಹ್ಮಣ್ಯ ಶ್ರೀ-Times of karkala
ಹೆಬ್ರಿ ಸಮೀಪದ ಮುನಿಯಾಲು ಸಂಜೀವಿನಿ ಫಾರ್ಮ್ ಮತ್ತು ಡೈರಿಯಲ್ಲಿ ಭಾನುವಾರ ದೇಶೀಯ ಗೋ ತಳಿಗಳ ಲೋಕಾರ್ಪಣೆ ಮತ್ತು ಗೋ ಧಾಮದ ಉದ್ಘಾಟನೆಯಲ್ಲಿ ಮಂಗಳೂರು ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಆಶೀರ್ಚವನ ನೀಡಿದರು.
ಹೆಬ್ರಿ : ಜೀವರಾಶಿಗಳಲ್ಲಿ ಅತ್ಯಂತ ಶ್ರೇಷ್ಟ ಹಾಗೂ ಪೂಜನೀಯ ಸ್ಥಾನ ಪಡೆದ ಗೋವು ನಮಗೆ ಆದರ್ಶವಾಗಿದೆ. ಎಲ್ಲಾ ದೇವರ ಸನ್ನಿದಾನ ಇರುವ ಗೋವು ಭಗವಂತನಿಗೂ ಬಹಳ ಇಷ್ಟ. ಗೋವು ಹಾಗೂ ಭೂಮಿ ಧರ್ಮದ ಪ್ರತೀಕವಾಗಿದ್ದು ಗೋಮಯದಲ್ಲಿ ಲಕ್ಷ್ಮೀ ದೇವತೆ ಸಾನ್ನಿಧ್ಯವಿದೆ. ಗೋವಿಗೆ ಅದ್ಭುತವಾದ ಅನುಗ್ರಹವಾದ ಶಕ್ತಿ ಹಾಗೂ ಮಹಾಲಕ್ಷ್ಮಿಯ ದಿವ್ಯ ಸಾನ್ನಿಧ್ಯ ಇರುವುದರಿಂದ ಗೃಹಪ್ರವೇಶದ ಸಂದರ್ಭ ಗೋವನ್ನು ಮೊದಲು ಮನೆಯೊಳಗೆ ಪ್ರವೇಶಿಸುತ್ತಾರೆ. ಆಮ್ಲಜನಕವನ್ನೇ ಸೇವಿಸಿ ಆಮ್ಲಜನಕವನ್ನೆ ಹೊರಹಾಕುವ ಅಪರೂಪದ ಭಾರತೀಯ ವಿವಿಧ ಗೋ ತಳಿಗಳ ಹಾಲಿನಲ್ಲಿ ವಿಶೇಷತೆ ಇದೆ. ದೇಶಿಯ ತಳಿಯ ಗೋವುಗಳಲ್ಲಿ ಅದ್ಭುತ ಸಾಮರ್ಥ್ಯ ಇದೆ. ಅಪೂರ್ವ ಗೋತಳಿಗಳ ಸಂರಕ್ಷಣೆ ಮಾಡುವ ಪುಣ್ಯದ ಕೆಲಸವನ್ನು ರಾಮಕೃಷ್ಣ ಆಚಾರ್ಯ ದಂಪತಿಗಳು ಮಾಡುತ್ತಿದ್ದಾರೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನದಲ್ಲಿ ನುಡಿದರು.
ಅವರು ಭಾನುವಾರ ಮೂಡಬಿದಿರೆ ಎಸ್ ಕೆ ಎಫ್ ಉದ್ಯಮ ಸಮೂಹ ಸಂಸ್ಥೆಯ ಮುುನಿಯಾಲಿನ ಸಂಜೀವಿನಿ ಫಾರ್ಮ್ & ಡೈರಿಯಲ್ಲಿ ‘ಗೋ ಧಾಮ’ ಉದ್ಘಾಟನೆ ಹಾಗೂ ದೇಶಿಯ ಗೋ ತಳಿಗಳ ಲೋಕಾರ್ಪಣ ಸಂಭ್ರಮದಲ್ಲಿ ಆಶೀರ್ಚನ ನೀಡಿದರು.
ಮಂಗಳೂರಿನ ರಾಮಕೃಷ್ಣಮಠದ ಶ್ರೀ ಏಕಗಮ್ಯಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ ತ್ಯಾಗ ಹಾಗೂ ಸೇವೆ ನಮ್ಮ ಅವಳಿ ಆದರ್ಶಗಳು. ಭಾರತೀಯರು ಹಿಂದಿನ ಪರಂಪರೆಗೆ ಮರಳಬೇಕಾಗಿದೆ. ಯಾವುದೋ ಕಾರಣದಿಂದ ಪಾಶ್ಚಿಮಾತ್ಯ ಸಂಸ್ಕೃತಿಗೆ ಮರುಳಾಗಿ ನಮ್ಮತನ ಮರೆತು ಅದರ ಹಿಂದೆ ಹೋಗಿದ್ದೇವೆ. ಮರಳಿ ನಾವು ನಮ್ಮ ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ಅದನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ನುಡಿದರು.
ನಿಟ್ಟೆಯ ಡಾ|ಎನ್.ಎಸ್.ಎ.ಎಮ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಕು|ಅಕ್ಷಯ ಗೋಖಲೆ ಗೋಸ್ಮರಣೆ ಉಪನ್ಯಾಸ ನೀಡಿದರು.ಸಂಜೀವಿನಿ ಫಾರ್ಮ್ & ಡೈರಿಯ ಸ್ಥಾಪಕ ಜಿ.ರಾಮಕೃಷ್ಣ ಆಚಾರ್ ಮಾತನಾಡಿ ಎಸ್ಕೆ.ಎಫ್ ಇಂಡಸ್ಟ್ರೀಸ್ ಸಂಸ್ಥೆಯ ಮೂಲಕ ಆಹಾರಧಾನ್ಯ ಸಂಸ್ಕರಣೆಗೆ ತಾಂತ್ರಿಕತೆಯನ್ನು, ಯಂತ್ರಗಳನ್ನು ಹಲವಾರು ದೇಶಗಳಿಗೆ ಒದಗಿಸಿದ್ದೇವೆ. ಜನರ ಆರೋಗ್ಯದ ದೃಷ್ಟಿಯಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿದ್ದೇವೆ. ಇದೀಗ ಗೋವುಗಳು ನಮ್ಮ ದೇಶಕ್ಕೆ, ನಮಗೆ, ಪೃಕೃತಿಗೆ ಎಷ್ಟು ಅಮೂಲ್ಯ ಎಂಬುದನ್ನು ಜನರಿಗೆ ಪರಿಚಯಿಸುವ ಉದ್ದೇಶದಲ್ಲಿ ಗೋಧಾಮ ನಿರ್ಮಿಸಿದ್ದೇವೆ. ವಿದ್ಯಾರ್ಥಿ ಜೀವನ ಮುಗಿಸಿದ ಅನೇಕ ಯುವಕ ಯುವತಿಯರು ನಗರದ ಕಡೆಗೆ ಮುಖ ಮಾಡುತ್ತಾರೆ. ಅದು ಸರಿಯಲ್ಲ. ಹಳ್ಳಿಯಲ್ಲೂ ಸಾಧನೆ ಮಾಡಲು ಸಾಧ್ಯವಿದೆ ಎಂದರು.ಯುವಕರಿಗೆ ಪ್ರೇರಣೆಯಾಗಲಿ ಎಂಬ ಮಹತ್ವದ ಉದ್ದೇಶದಿಂದ ಗೋಸೇವೆಯ ಕಾಯಕಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ ಗೋಧಾಮ ನಿರ್ಮಿಸುವುದರ ಮೂಲಕ ರಾಮಕೃಷ್ಣ ಆಚಾರ್ಯ ಅವರು ನಮ್ಮ ಸಂಸ್ಕೃತಿ, ಪರಂಪರೆಯನ್ನು ನೆನಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶುಭ ಹಾರೈಸಿದರು. ಮೂಡಬಿದ್ರೆಯ ಉದ್ಯಮಿ ಕೆ. ಶ್ರೀಪತಿ ಭಟ್ ಶುಭ ಕೋರಿದರು. ಸಂಜೀವಿನಿ ಫಾರ್ಮ್ ಮತ್ತು ಡೈರಿಯ ಟ್ರಸ್ಟಿ ಸವಿತಾ ಆರ್.ಆಚಾರ್ ಸ್ವಾಗತಿಸಿ ಡಾ| ಜಯಪ್ರಕಾಶ್ ಮಾವಿನಕುಳಿ ನಿರೂಪಿಸಿ ವಂದಿಸಿದರು.
Post a comment