ಕಾಂಗ್ರೆಸ್‌ ಸೋನಿಯಾ,ರಾಹುಲ್‌ ಹೆಸರಲ್ಲಿ ಮತ ಕೇಳಲಿ:ಮುಟ್ಲುಪಾಡಿ ಸತೀಶ ಶೆಟ್ಟಿ-Times of karkala

ಹೆಬ್ರಿ :ನಾವು ಪ್ರದಾನಿ ನರೇಂದ್ರ ಮೋದಿ ಮತ ಕೇಳುತ್ತೇವೆ ಎಂದು ಹೆಬ್ರಿಯ ಕೆಲವು ಕಾಂಗ್ರೆಸ್‌ ನಾಯಕರು ಅವರ ಪ್ರಚಾರಕ್ಕಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ನಮಗೆ ಮೋದಿಯೇ ಸರ್ವೋಚ್ಚ ನಾಯಕ, ಮೋದಿಯೇ ನಮಗೆ ಹೆಮ್ಮೆ, ನಾವು ಮೋದಿ ಅಭಿವೃದ್ಧಿ ಕೆಲಸಗಳು, ಅವರ ಸಮರ್ಥ ನಾಯಕತ್ವದಿಂದಾಗಿ ಮೋದಿಯ ಹೆಸರಿನಲ್ಲಿಯೇ ಮತ ಕೇಳುತ್ತೇವೆ. ಕಾಂಗ್ರೆಸ್ಸಿನವರಿಗೆ ತಾಕತ್ತು ಇದ್ದರೆ ಅವರ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹೆಸರಲ್ಲಿ ಮತಕೇಳಲಿ ಎಂದು ಕಾರ್ಕಳ ಕ್ಷೇತ್ರದ ಬಿಜೆಪಿ ವಕ್ತಾರರಾದ ಮುಟ್ಲುಪಾಡಿ ಸತೀಶ ಶೆಟ್ಟಿ ಸವಾಲು ಹಾಕಿದರು.


 


ಅವರು ಹೆಬ್ರಿಯ ಬಿಜೆಪಿ ಕಛೇರಿಯಲ್ಲಿ ಗುರುವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಚುನಾವಣೆಗೆ ಪಕ್ಷ ಇಲ್ಲದಿದ್ದರೂ ಕಾಂಗ್ರೆಸ್‌ ಬಿಜೆಪಿಯವರು ತಮ್ಮ ಬೆಂಬಲಿಗರನ್ನು ಚುನಾವಣೆಗೆ ನಿಲ್ಲಿಸುವುದು ಮಾಮೂಲಿಯಾಗಿ ನಡೆದುಕೊಂಡು ಬಂದಿದೆ. ಈ ಸಲ ಹೆಬ್ರಿ ಮತ್ತು ಕಾರ್ಕಳ ತಾಲ್ಲೂಕಿನಲ್ಲಿ ಕಾಂಗ್ರೆಸ್ಸಿನವರು ಪಕ್ಷೇತರರು ಎಂಬಂತೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಮತ ಕೇಳುತ್ತಿದ್ದಾರೆ. ಅವರಿಗೆ ಕಾಂಗ್ರೆಸ್‌ ಅಥವಾ ಕಾಂಗ್ರೇಸ್‌ ನಾಯಕರ ಹೆಸರಲ್ಲಿ ಮತಕೇಳಲು ಮುಖವೇ ಇಲ್ಲ. ಕಾಂಗ್ರೆಸ್ಸಿಗೆ ಈಗ ಜನ ಮತವನ್ನೇ ನೀಡುವುದಿಲ್ಲ ಎಂದು ಮುಟ್ಲುಪಾಡಿ ಸತೀಶ ಶೆಟ್ಟಿ ಹೇಳಿದರು. ಹೆಬ್ರಿ ಮತ್ತು ಕಾರ್ಕಳ ತಾಲ್ಲೂಕಿನಲ್ಲಿ ಬಿಜೆಪಿಯು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧವಾಗಿದ್ದು ಈಗಿರುವ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿಯನ್ನು ಉಳಿಸಿಕೊಂಡು ೩೪ ಪಂಚಾಯಿತಿಯಲ್ಲೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಗ್ರಾಮ ಪಂಚಾಯಿತಿ, ತಾಲ್ಲೂಕು, ಜಿಲ್ಲಾ ಪಂಚಾಯಿತಿ, ಶಾಸಕರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನವನ್ನು ಶಾಸಕ ಸುನೀಲ್‌ ಕುಮಾರ್‌ ಅವರು ಬಳಸಿಕೊಂಡು ಪ್ರತೀ ಗ್ರಾಮದಲ್ಲೂ ಸಮಗ್ರ ಅಭಿವೃದ್ಧಿಯನ್ನು ಮಾಡಲಾಗಿದೆ. ಹೆಬ್ರಿ ತಾಲ್ಲೂಕಿಗೂ ವಿಶೇಷ ಅನುದಾನ ತಂದು ಅಭಿವೃದ್ಧಿ ಮಾಡುತ್ತಿದ್ದಾರೆ. ಒಂದೇ ಸೂರಿನಡಿ ಕಂದಾಯ ಇಲಾಖೆ ಸೇರಿ ಬಹುತೇಕ ಸರ್ಕಾರಿ ಇಲಾಖೆಯನ್ನು ತಂದು ಜನತೆಗೆ ಅತೀ ಸುಲಭದಲ್ಲಿ ಸರ್ಕಾರಿ ಸೇವೆ ಒದಗಿಸಲು ಮಿನಿವಿಧಾನ ಸೌಧ ನಿರ್ಮಾಣವಾಗುತ್ತಿದೆ. ಇನ್ನಷ್ಟು ಅಭಿವೃದ್ಧಿ ಕೆಲಸಗಳು ಹೆಬ್ರಿ ತಾಲ್ಲೂಕಿನಲ್ಲಿ ಸುನೀಲ್‌ ಕುಮಾರ್‌ ನೇತ್ರತ್ವದಲ್ಲಿ ನಡೆಯುತ್ತಿದೆ. ಅಭಿವೃದ್ಧಿ ಕೆಲಸಗಳು ಮತ್ತು ನರೇಂದ್ರ ಮೋದಿ ನಾಯಕತ್ವವೇ ನಮಗೆ ಮತ ಕೇಳಲು ಶ್ರೀರಕ್ಷೆ ಎಂದು ಸತೀಶ ಶೆಟ್ಟಿ ಹೇಳಿದರು.

ಹೆಬ್ರಿ ಕಾರ್ಕಳದಲ್ಲಿ ಕಾಂಗ್ರೆಸ್ಸಿಗರಿಂದ ಪಕ್ಷೇತರ ಎಂಬ ಹೊಸ ನಾಟಕ:ಮುಟ್ಲುಪಾಡಿ ಸತೀಶ ಶೆಟ್ಟಿ. : ಗ್ರಾಮ ಪಂಚಾಯಿತಿ ಚುನಾವಣೆಗೆ ಪಕ್ಷ ಇಲ್ಲದಿದ್ದರೂ ಕಾಂಗ್ರೆಸ್‌ ಬಿಜೆಪಿಯವರು ತಮ್ಮ ಬೆಂಬಲಿಗರನ್ನು ಚುನಾವಣೆಗೆ ನಿಲ್ಲಿಸುವುದು ಮಾಮೂಲಿಯಾಗಿ ನಡೆದುಕೊಂಡು ಬಂದಿದೆ. ಈ ಸಲ ಹೆಬ್ರಿ ಮತ್ತು ಕಾರ್ಕಳ ತಾಲ್ಲೂಕಿನಲ್ಲಿ ಕಾಂಗ್ರೆಸ್ಸಿನವರು ಪಕ್ಷೇತರರು ಎಂಬಂತೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಮತ ಕೇಳುತ್ತಿದ್ದಾರೆ. ಅವರಿಗೆ ಕಾಂಗ್ರೆಸ್‌ ಅಥವಾ ಕಾಂಗ್ರೇಸ್‌ ನಾಯಕರ ಹೆಸರಲ್ಲಿ ಮತಕೇಳಲು ಮುಖವೇ ಇಲ್ಲ. ಕಾಂಗ್ರೆಸ್ಸಿಗೆ ಈಗ ಜನ ಮತವನ್ನೇ ನೀಡುವುದಿಲ್ಲ ಎಂದು ಮುಟ್ಲುಪಾಡಿ ಸತೀಶ ಶೆಟ್ಟಿ ಹೇಳಿದರು.

ಕಸ್ತೂರಿರಂಗನ್‌ ವರದಿಯಿಂದ ಜನತೆಗೆ ಅನ್ಯಾಯ ಆಗಲ್ಲ:ಕರಾವಳಿ ಮತ್ತು ಮಲೆನಾಡಿನ ಎಲ್ಲಾ ಶಾಸಕರು ಕಸ್ತೂರಿರಂಗನ್‌ ವರದಿಯಿಂದಾಗಿ ಜನತೆಗೆ ಯಾವೂದೇ ಸಮಸ್ಯೆ ಆಗಬಾರದು ಎಂದು ಸರ್ಕಾರದ ಮನವರಿಕೆ ಮಾಡಿದ್ದಾರೆ. ನಮ್ಮ ಶಾಸಕ ಸುನೀಲ್‌ ಕುಮಾರ್‌ ಕೂಡ ಸಮರ್ಥವಾಗಿ ಸರ್ಕಾರದ ಗಮನ ಸೆಳೆದಿದ್ದಾರೆ. ಇದರಿಂದ ಯಾವೂದೇ ಸಮಸ್ಯೆ ಇಲ್ಲ. ಒಂದು ವೇಳೆ ಜನರ ವಿರುದ್ಧ ಸರ್ಕಾರ ನಡೆದುಕೊಂಡರೆ ಹಿಂದಿನ ರೀತಿಯಲ್ಲೇ ಪಕ್ಷಾತೀತವಾಗಿ ಬೃಹತ್‌ ಹೋರಾಟ ನಡೆಸುವುದಾಗಿ ಕಸ್ತೂರಿರಂಗನ್‌ ವರದಿ ವಿರೋಧಿ ಹೋರಾಟಗಾರರಾದ ಮುಟ್ಲುಪಾಡಿ ಸತೀಶ ಶೆಟ್ಟಿ ಹೇಳಿದರು.

ಹೆಬ್ರಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳು ಬಿಜೆಪಿ ಮಡಿಲಿಗೆ : ಗುರುದಾಸ ಶೆಣೈ.

ಹೆಬ್ರಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳು ಬಿಜೆಪಿಯ ಮಡಿಲಿಗೆ ಬರಲಿದೆ. ಅದಕ್ಕಾಗಿ ಸಮರ್ಥವಾಗಿ ಬಿಜೆಪಿಯ ನಾಯಕರು ಮತ್ತು ಕಾರ್ಯಕರ್ತರು ದುಡಿಯುತ್ತಿದ್ದಾರೆ.ಜನತೆ ಕೂಡ ಮೋದಿ ಆಡಳಿತವನ್ನು ಮೆಚ್ಚಿ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿಯ ಹೆಬ್ರಿ ತಾಲ್ಲೂಕಿನ ಚುನಾವಣಾ ಉಸ್ತುವಾರಿಯಾದ ಬಿಜೆಪಿ ನಾಯಕ ಎಚ್.‌ ಗುರುದಾಸ ಶೆಣೈ ಹೇಳಿದರು.

ಬಿಜೆಪಿ ಮಹಿಳಾಮೋರ್ಚಾ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಮೀಳ ಹರೀಶ ಪೂಜಾರಿ ಸುದ್ದಿಗೋಷ್ಠಿಯಲ್ಲಿದ್ದರು.

ಜಾಹೀರಾತು 

   
Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget