ರಾಜ್ಯ ಮಟ್ಟದ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿಗೆ ಸಾಣೂರು ಯುವಕ ಮಂಡಲ ಆಯ್ಕೆ-Times of karkala

 ಯುವಕ ಮಂಡಲ (ರಿ.) ಸಾಣೂರು ಸಂಸ್ಥೆಯ ಕಿರೀಟಕ್ಕೆ ರಾಜ್ಯ ಪ್ರಶಸ್ತಿಯ ಗರಿ ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಸಂಘಟನೆ ಉಡುಪಿ ಇವರು ನೀಡುವ 2019/20 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಬೆಂಗಳೂರಿನಲ್ಲಿ  ಡಿಸೆಂಬರ್ 17ರಂದು ಯುವ ವ್ಯವಹಾರ ಮತ್ತು ಯುವ ಸಶಕ್ತಿಕರಣ ಇಲಾಖೆಯ ಆಯುಕ್ತ  ಕೆ  ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ ಆಯ್ಕೆ ಸಮಿತಿ  ಸಭೆಯಲ್ಲಿ 2019/20 ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿಗೆ ಯುವಕ ಮಂಡಲ (ರಿ.)  ಸಾಣೂರು ಈ ಸಂಸ್ಥೆಗೆ ಲಭಿಸಿರುವುದನ್ನು ಘೋಷಿಸಿದ್ದಾರೆ.

ಪ್ರಶಸ್ತಿಯು 75 ಸಾವಿರ  ನಗದು ಮತ್ತು ಪ್ರಸಂಶ ಪತ್ರ ಒಳಗೊಂಡಿದ್ದು ಜನವರಿ 23 ರಂದು ನಡೆಯುವ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಶ್ರೀ ಜಿ. ಜಗದೀಶ್ ಅವರು ಈ ಪ್ರಶಸ್ತಿಯನ್ನು ವಿತರಿಸಲಿದ್ದಾರೆ ಎಂದು ನೆಹರು ಯುವ ಕೇಂದ್ರ ಸಂಘಟನೆ ಉಡುಪಿ ಇದರ ಜಿಲ್ಲಾ ಸಮನ್ವಯಾಧಿಕಾರಿ ಶ್ರೀ ವಿಲ್ಫ್ರೆಡ್ ಡಿ ಸೋಜಾ ತಿಳಿಸಿದ್ದಾರೆ.

67 ನೇ  ವರ್ಷಾಚರಣೆಯಲ್ಲಿರುವ ಸಾಣೂರು ಯುವಕ ಮಂಡಲವು ಕಳೆದ 66 ವರ್ಷಗಳಿಂದ ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಕೊಂಡು ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಸಾಣೂರು ಗ್ರಾಮಕ್ಕೆ ಮೂಲಭೂತ ಸೌಕರ್ಯಗಳಾದ ಸಾರ್ವಜನಿಕ ಶೌಚಾಲಯ, ಹಿಂದೂ ರುದ್ರಭೂಮಿ, ಮಾಹಿತಿ ಸಿಂಧು ಕಂಪ್ಯೂಟರ್ ಕೊಠಡಿ, ಬಸ್ಸು ತಂಗುದಾಣ ನಿರ್ಮಾಣ, ಮದ್ಯವರ್ಜನ ಶಿಬಿರ,ಮಕ್ಕಳಿಗೆ ಯಕ್ಷಗಾನ ತರಭೇತಿ ಶಿಬಿರ, ಆರೋಗ್ಯ ವೈದ್ಯಕೀಯ ಶಿಬಿರ, ಶೈಕ್ಷಣಿಕ ಕಾರ್ಯಗಾರ‌, ಪರಿಸರ ಕಾಳಜಿ ಸಂಬಂಧಿಸಿದ ಮಾಹಿತಿ, ವನ ಮಹೋತ್ಸವ ಆಚರಣೆ, ಸ್ವಚ್ಛತಾ ಅಭಿಯಾನ, ಹಲವಾರು ರಾಷ್ಟ್ರೀಯ ಹಬ್ಬಗಳ ಆಚರಣೆ,ಕ್ರೀಡಾಕೂಟಗಳ ಆಯೋಜನೆ,ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ,ಸ್ವಚ್ಛತಾ ಅಭಿಯಾನ, ವಿವಿಧ ಮಾಹಿತಿ ಶಿಬಿರಗಳು  ಜನಹಿತ ಜನಪರ ಜನಜಾಗ್ರತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತ ವಿವಿಧ ವಿನೂತನ ಯೋಜನೆಗಳನ್ನು ಅಳವಡಿಸಿ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.‌

ಕೊರೊನ ವೈರಸ್ ನಿಂದ ದೇಶದೆಲ್ಲೆಡೆ ಲಾಕ್ ಡೌನ್ ಜಾರಿಯಿಂದ ಜನರ ಜೀವನ ಸಂಕಷ್ಟಗೊಳಗಾದಾಗ ಉಡುಪಿ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಸಾಣೂರು ಯುವಕ ಮಂಡಲವು ದಾನಿಗಳ ಸಹಕಾರದಿಂದ ಸಾಣೂರು ಗ್ರಾಮದಲ್ಲಿ ಅತಿ ಅಗತ್ಯವಿರುವವರಿಗೆ ತಲಾ 10 ಕೆ.ಜಿ ಯಂತೆ ಸುಮಾರು 370 ಕುಟುಂಬಗಳಿಗೆ ಅಕ್ಕಿ ನೀಡಿ ಆಸರೆಯಾಗಿದ್ದು ಅದೇ ರೀತಿ ತರಕಾರಿ ಹಾಲು ದಿನಸಿ ಸಾಮಾನುಗಳ ಕಿಟ್ ಸಾರ್ವಜನಿಕರಿಗೆ ಮಾಸ್ಕ್ ವಿತರಣೆ ಕೊರೊನ ಜಾಗೃತಿ ಭಿತ್ತಿ ಪತ್ರ ಸಾರ್ವಜನಿಕ ಪ್ರದೇಶಗಳಲ್ಲಿ ಕೊರೊನ ಜಾಗೃತಿ ಗೋಡೆ ಬರಹ ವೃತ್ತಿ ಶಿಕ್ಷಣ ಕಂಪ್ಯೂಟರ್ ತರಬೇತಿ ಶಿಬಿರ ಸ್ವ ಉದ್ಯೋಗ ಪ್ರೇರಣೆಗೆ ಟೈಲರಿಂಗ್ ಮತ್ತು ಬ್ಯುಟಿಷನ್  ತರಬೇತಿ ಶಿಬಿರ ಹಮ್ಮಿಕೊಂಡಿದ್ದು ಸಾರ್ವಜನಿಕವಾಗಿ ಮುಕ್ತ ಪ್ರಶಂಸೆಗೆ ಒಳಗಾಗಿದೆ.

ಸ್ವಚ್ಛತಾ ಅಭಿಯಾನದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಉಡುಪಿ ಜಿಲ್ಲಾ ಮಟ್ಟದ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದೆ ಅಲ್ಲದೆ 2018 ರಲ್ಲಿ ನೆಹರು ಯುವ ಕೇಂದ್ರ ಉಡುಪಿ ಇವರು ಕೊಡಮಾಡುವ ಜಿಲ್ಲಾ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ  2018 ನೇ ಸಾಲಿನಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 2018/19 ರಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಡಮಾಡುವ ಉಡುಪಿ ಜಿಲ್ಲಾ ಮಟ್ಟದ ಸಾಂಘಿಕ ಯುವ ಪ್ರಶಸ್ತಿ 2019 ನೇ ಸಾಲಿನಲ್ಲಿ 10 ನೇ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಸಂಘ ರತ್ನ ರಾಜ್ಯ ಪ್ರಶಸ್ತಿ ಗಳಿಂದ  ಪುರಸ್ಕೃತಗೊಂಡಿವೆ.

ಈ ಎಲ್ಲಾ ಸಾಧನೆಗಳನ್ನು  ಸಾರ್ವಜನಿಕ ಚಟುವಟಿಕೆಗಳನ್ನು ಮತ್ತು 2019/20ನೇ ಸಾಲಿನಲ್ಲಿ ಸಲ್ಲಿಸಿದ ಸಾಮಾಜಿಕ ಶೈಕ್ಷಣಿಕ  ಸೇವೆಯನ್ನು ಪರಿಗಣಿಸಿ ಉಡುಪಿ ಜಿಲ್ಲೆಗೆ  ಪ್ರಥಮ ಬಾರಿಗೆ ಸಾಣೂರು ಯುವಕ ಮಂಡಲಕ್ಕೆ ರಾಜ್ಯ ಮಟ್ಟದ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ 2019/20 ಲಭಿಸಿದೆ.


ಜಾಹೀರಾತು 

   
Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget