ಶಿವಪುರ ಲಕ್ಷ್ಮೀನರಸಿಂಹ ಮಠ : ನಮ್ಮ ಉದ್ದೇಶ ಒಂದೇ ಶಿವಪುರ ಗ್ರಾಮದ ಸಮಗ್ರ ಅಭಿವೃದ್ಧಿ ಮಾತ್ರ. ಕಳೆದ 5 ವರ್ಷಗಳಲ್ಲಿ 29.50 ಕೋಟಿ ರೂಪಾಯಿ ಅನುದಾನಗಳ ಮೂಲಕ ಊರಿನ ಅಭಿವೃದ್ಧಿ ಮಾಡಲಾಗಿದೆ. ಪ್ರತೀ ಮನೆಗೂ ಸರ್ಕಾರದ ಸವಲತ್ತುಗಳನ್ನು ತಲುಪಿಸಲಾಗಿದೆ. ಗ್ರಾಮದ ಎಲ್ಲಾ ರಸ್ತೆಗಳಿಗೂ ಕಾಂಕ್ರೀಟ್, ಡಾಂಬಾರು ಹಾಕಲಾಗಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಮುಂದಿನ ಮಾರ್ಚ್ ತಿಂಗಳ ಒಳಗೆ ನಡೆಯಲಿದೆ. ರಸ್ತೆ ಮತ್ತು ಕುಡಿಯುವ ನೀರಿಗಾಗಿ ವಿಶೇಷ ಆಧ್ಯತೆ ನೀಡಿ ನಮ್ಮ ನಾಯಕರ ಸಹಕಾರದಲ್ಲಿ ಒಂದು ತಂಡವಾಗಿ ನಿರಂತರವಾಗಿ ಜನಸೇವೆ ಮಾಡಲಾಗಿದೆ, ಊರಿನ ಅಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಎಂದು ಶಿವಪುರದ ನಾಯಕರಾದ ಬಿಜೆಪಿ ಕಾರ್ಕಳ ಕ್ಷೇತ್ರದ ಉಪಾಧ್ಯಕ್ಷರಾದ ಸುರೇಶ ಶೆಟ್ಟಿ ಮನವಿ ಮಾಡಿದರು.
ಅವರು ಶಿವಪುರ ಲಕ್ಷ್ಮೀನರಸಿಂಹ ಮಠದಲ್ಲಿ ಭಾನುವಾರ ಶಿವಪುರ ಬಿಜೆಪಿ ವತಿಯಿಂದ ನಡೆದ ಗ್ರಾಮಸ್ವರಾಜ್ ಸಮಾವೇಶದಲ್ಲಿ ಮಾತನಾಡಿದರು.ಶಿವಪುರ ಪಂಚಾಯಿತಿಯ 13 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಸುರೇಶ ಶೆಟ್ಟಿ ಮನವಿ ಮಾಡಿದರು.
ಮಾದರಿ ಗ್ರಾಮ ಪಂಚಾಯಿತಿ ಆಗಿರುವ ಶಿವಪುರ ಪಂಚಾಯಿತಿಯ ಮೂಲಕ ಕಲ್ಪನೆಗೂ ಮೀರಿ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದು ಬಿಜೆಪಿ ನಾಯಕ ಮುನಿಯಾಲು ದಿನೇಶ ಪೈ ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ಹರೀಶ ಪೂಜಾರಿ, ಹೆಬ್ರಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಕುಮಾರ್ ಶಿವಪುರ, ಶಿವಪುರ ಬಿಜೆಪಿ ಅಧ್ಯಕ್ಷ ಗಣೇಶ ಕುಲಾಲ್, ಕಾರ್ಯದರ್ಶಿ ಹರೀಶ್, ಶಿವಪುರ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಗಂಧಿ ನಾಯ್ಕ್, ಸೂರಿಮಣ್ಣು ಸದಾಶಿವ ಉಪಾಧ್ಯಾಯ, ಪಾಂಡುಕಲ್ಲು ಶಂಕರ ಬಡ್ಕಿಲ್ಲಾಯ, ಕೆರೆಬೆಟ್ಟು ಉದಯ ಕುಮಾರ್ ಶೆಟ್ಟಿ, ಹೆಬ್ರಿ ಬಿಜೆಪಿ ಮುಖಂಡ ಸುಧಾಕರ ಹೆಗ್ಡೆ ಮತ್ತಿತರರು ಭಾಗವಹಿಸಿದ್ದರು.
ಜಾಹೀರಾತು
Post a comment