ಕಾರ್ಕಳ:ಅಧಿಕಾರ ವಹಿಸಿ ತಿಂಗಳು ಕಳೆದರೂ ಸಾಮಾನ್ಯ ಸಭೆ ಕರೆಯದ ಪುರಸಭೆ,ತಕ್ಷಣ ಸಭೆ ಕರೆಯುವಂತೆ ಪುರಸಭಾ ಸದಸ್ಯ ಶುಭದ ರಾವ್ ಆಗ್ರಹ-Times of karkala

ಕಾರ್ಕಳ : ಪುರಸಭೆಯಲ್ಲಿ ಹೊಸ ಆಡಳಿತ ಅಧಿಕಾರ ವಹಿಸಿ ಒಂದು ತಿ೦ಗಳು ಕಳೆದರೂ ಸಾಮಾನ್ಯ ಸಭೆ ಕರೆಯದೆ ನಿರ್ಲಕ್ಷ ವಹಿಸುತ್ತಿದೆ. ಇದರಿಂದಾಗಿ ಅಭಿವೃದ್ಧಿ ಕುಂಠಿತವಾಗಿದೆ.ಆದ್ದರಿ೦ದ  ಪುರಸಭಾ ಆಡಳಿತವು ತಕ್ಷಣ ಪ್ರತಿನಿಧಿಗಳ ಸಾಮಾನ್ಯ ಸಭೆಯನ್ನು ಕರೆದು ಚರ್ಚೆಗೆ ಅವಕಾಶನೀಡಬೇಕೆಂದು ಪುರಸಭಾ ಸದಸ್ಯ ಶುಭದರಾವ್ ಆಗ್ರಹಿಸಿದ್ದಾರೆ.


ನೂತನ ಆಡಳಿತ ಅಧಿಕಾರ ವಹಿಸಿಕೊಂಡ ತಕ್ಷಣ ಚುನಾಯಿತ ಸದಸ್ಯರ ಸಭೆಯನ್ನು ಕರೆದು ಅಭಿವೃದ್ಧಿಕಾರ್ಯಗಳ ಬಗ್ಗೆ ಚರ್ಚೆ ನಡೆಸುವುದು ವಾಡಿಕೆ. ಆ ಸಂದರ್ಭದಲ್ಲಿ ಚುನಾಯಿತ ಎಲ್ಲಾ ಸದಸ್ಯರು ತಮ್ಮ ತಮ್ಮ ವಾರ್ಡಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮತ್ತು ಆ ಬಗ್ಗೆ ಪರಿಹಾರ ಕಂಡುಕೊಳ್ಳಲು ಸಹಾಯವಾಗಿದೆ. 

ಆದರೆ ನೂತನ ಆಡಳಿತ ಅಧಿಕಾರ ವಹಿಸಿಕೊಂಡು ತಿಂಗಳು ಕಳೆದರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಲಕ್ಷಿಸುತ್ತಿದೆ. ಹಾಗಾಗಿ ತಕ್ಷಣ ಸಭೆ ಕರೆಯುವಂತೆ ಮನವಿ ಮಾಡುತ್ತೇನೆ.ಸ್ಪಂದನೆ ಸಿಗದೇ ಇದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು 

 



 








Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget