ಉಡುಪಿ:ಬಾಲಕರಿಬ್ಬರ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್-Times of karkala

ಉಡುಪಿ: ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿ ಡಿ.3ರಂದು ಆಡುತ್ತಿದ್ದ ಬಾಲಕರಿಬ್ಬರು ಅಪಹರಣಕ್ಕೆ ಒಳಗಾಗಿರಬಹುದೆಂದು ಶಂಕಿಸಿ ಮಹಿಳಾ ಠಾಣೆಗೆ ನೀಡಿರುವ ದೂರಿನ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. 


ಈ ಬಗ್ಗೆ ಪ್ರಕಟಣೆ ನೀಡಿರುವ ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಉಡುಪಿಯಲ್ಲಿ ಬಾಲಕರಿಬ್ಬರಅಪಹರಣ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಡಿ.2ರಂದು ಇಬ್ಬರು ಬಾಲಕರು, ನಿಟ್ಟೂರಿನಲ್ಲಿರುವ ಬಾಲಕಿಯರ ಬಾಲ ಮಂದಿರಕ್ಕೆ ಬ೦ದಿದ್ದು, ಅವರ ಅಕ್ಕ ಅಲ್ಲೇ ಇರುವುದರಿಂದ ನಾವು ಕೂಡ ಇಲ್ಲೇ ಇರುವುದಾಗಿ ಹೇಳಿಕೊಂಡಿದ್ದರು. 

ನಮ್ಮ ತಾಯಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ವಾಸ ಮಾಡಿಕೊಂಡು ಮದ್ಯಪಾನ ಸೇವಿಸಿ ಹೊಡೆಯುತ್ತಾರೆ.ನಮಗೆ ರಕ್ಷಣೆ ಮತ್ತು ಪುನರ್ವಸತಿ ನೀಡುವಂತೆ ಕೇಳಿಕೊ0ಡಿದ್ದರು.

ತಕ್ಷಣ ವಿಷಯವನ್ನು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಿಗೆ ತಿಳಿಸಲಾಯಿತು. ಅಧ್ಯಕ್ಷರ ಆದೇಶದಂತೆ  ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಕ್ಕಳನ್ನು ಪುನರ್ವಸತಿಗಾಗಿ ಹಟ್ಟಿಯಂಗಡಿಯಲ್ಲಿರುವ ನಮ್ಮ ಭೂಮಿ ಸಂಸ್ಥೆಗೆ ದಾಖಲಿಸಿದರು. ಒಂದು  ಮಗುವಿನ ತಂದೆ ನಾಗರಾಜ್, ಮಕ್ಕಳ ಸಹಾಯವಾಣಿ ಸಹಾಯ ಪಡೆದು,ಯಾರನ್ನು ಈ ಬಗ್ಗೆ ವಿಚಾರಿಸದೆ ನೇರವಾಗಿ ಮಹಿಳಾ ಪೊಲೀಸ್ ಠಾಣೆಗೆಹೋಗಿ ದೂರು ನೀಡಿದ್ದಾರೆ. 

ಆದರೆ ಉಡುಪಿಯಲ್ಲಿ ಯಾವುದೇ ಮಕ್ಕಳ ಅಪರಹಣ ನಡೆದಿಲ್ಲ. ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲು ಶಕ್ತರಾಗಿದ್ದಲ್ಲಿ ಅಗತ್ಯ ದಾಖಲೆಗಳೊಂದಿಗೆ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಾಗಿ ಮಕ್ಕಳನ್ನು ವಶಕ್ಕೆ ಪಡೆಯಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.

ಜಾಹೀರಾತು 

   
Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget