ಮುರುಡೇಶ್ವರ ನಿರ್ಮಾಣದ ಕರ್ತೃ, ಖ್ಯಾತ ಉದ್ಯಮಿ ಆರ್. ಎನ್. ಶೆಟ್ಟಿ ಹೃದಾಯಾಘಾತದಿಂದ ಇಂದು ಬೆಳಿಗ್ಗೆ 3 .30 ರ ಹೊತ್ತಿಗೆ ಬೆಂಗಳೂರಿನಲ್ಲಿ ನಿಧನ ಹೊಂದಿದರು.ಅವರಿಗೆ 93 ವರ್ಷ ವಯಸ್ಸಾಗಿತ್ತು.
1928 ಆಗಸ್ಟ್ 15 ರಂದು ಭಟ್ಕಳ ತಾಲೂಕಿನ ಮುರುಡೇಶ್ವರದ ಕೃಷಿ ಕುಟುಂಬದಲ್ಲಿ ಜನಿಸಿದ ರಾಮ ನಾಗಪ ಶೆಟ್ಟಿಯವರು ಮುರುಡೇಶ್ವರದಲ್ಲಿ 123 ಅಡಿ ಶಿವನ ವಿಗ್ರಹ ನಿರ್ಮಿಸುವುದರ ಮೂಲಕ ಮುರುಡೇಶ್ವರದ ಅಭಿವೃದ್ಧಿಗೆ ಕಾರಣರಾಗಿದ್ದರು.
ಮುರುಡೇಶ್ವರ ದೇವಸ್ಥಾನದ ಅಧ್ಯಕ್ಷರಾಗಿರುವ ಅವರು 1967 ರಲ್ಲಿ ಆರ್ ಎನ್ ಉದ್ಯಮ ಪ್ರಾರಂಭಿಸಿದ್ದರು. ಕಟ್ಟಡ ನಿರ್ಮಾಣ,ಹೋಟೆಲ್ ಉದ್ಯಮ,ಶಿಕ್ಷಣ ಕ್ಷೇತ್ರ, ವೈದ್ಯಕೀಯ ರಂಗ, ಸಮಾಜ ಸೇವೆಯ ಮೂಲಕ ದೇಶ ವಿದೇಶದಲ್ಲಿ ಹೆಸರುವಾಸಿಯಾಗಿದ್ದರು.ಇವರ ಸೇವೆ ಗುರುತಿಸಿ ಬೆಂಗಳೂರು ವಿಶ್ವವಿದ್ಯಾನಿಲಯ 2009-10ರಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ಮೃತರು ಪತ್ನಿ,ಮೂರು ಗಂಡು ಮಕ್ಕಳು ಹಾಗೂ ನಾಲ್ಕು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಕೋರಿ ಸಿ ಎಂ ಯಡಿಯೂರಪ್ಪ ಶೋಕ ಸಂದೇಶ ತಿಳಿಸಿದ್ದಾರೆ.
ಜಾಹೀರಾತು
Post a comment