![]() |
ಸಾಂಧರ್ಬಿಕ ಚಿತ್ರ |
ಕೆರ್ವಾಶೆ:ನೀರಲ್ಲಿ ಮುಳುಗಿ ಸಂಶಯಾಸ್ಪದ ರೀತಿಯಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ಅಜೆಕಾರು ಠಾಣಾ ವ್ಯಾಪ್ತಿಯ ಕೆರ್ವಾಶೆ ಬಳಿ ನಡೆದಿದೆ.ಕಿರಣ್ (21 ಎಂಬಾತ ಮೃತಪಟ್ಟ ಯುವಕ.
ಘಟನೆಯ ವಿವರ:ಐದು ಮಂದಿ ಗೆಳೆಯರ ತಂಡವೊಂದು ಸಮೀಪದ ಫಾಲ್ಸ್ ಗೆ ಭೇಟಿ ನೀಡಿದ್ದು ಸ್ನಾನ ಮಾಡುತ್ತಿದ್ದ ಸಂಧರ್ಭ ತನಗೆ ಟಾಯ್ಲೆಟ್ ಬರುತ್ತಿದೆಯೆಂದು ಇನ್ನೊಂದು ಬದಿಗೆ ಹೋದ ಕಿರಣ್ ತುಂಬಾ ಹೊತ್ತಾದರೂ ಮರಳಲಿಲ್ಲ.ಇದನ್ನು ಗಮನಿಸಿದ ಯುವಕರ ತಂಡ ಸಾಕಷ್ಟು ಹುಡುಕಾಡಿದರೂ ಕಿರಣ್ ಪತ್ತೆಯಾಗಲಿಲ್ಲ.
ಬಳಿಕ ಈ ಬಗ್ಗೆ ಸ್ಥಳೀಯರಾದ ಸುನೀಲ್ಶೆಟ್ಟಿ ಎಂಬುವವರ ಬಳಿ ತಿಳಿಸಿದಾಗ ಸುನೀಲ್ ರವರು ತನ್ನ ಪರಿಚಯಸ್ಥರಾದ ಅಕ್ಷಯ್ ಕುಮಾರ್, ಧರ್ಮರಾಜ್ ಹೆಗ್ಡೆ ಮತ್ತು ಸುಜೀತ ಶೆಟ್ಟಿ ರವರೊಂದಿಗೆ ಹೋಗಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಬಳಿಕ ಮುಳುಗು ತಜ್ಞರಾದ ಮಯ್ಯದ್ದಿ ಹಾಗೂ ತೇಜಸ್ರನ್ನು ಕರೆಯಿಸಿ ನೀರಿನಲ್ಲಿ ಹುಡುಕಲಾಯಿತು.
ರಾತ್ರಿ 8.30 ರ ಹೊತ್ತಿಗೆ ಕಿರಣ್ ದೇಹ ದೊರೆತಿದ್ದು ಅದಾಗಲೇ ಮೃತಪಟ್ಟಿದ್ದರು. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ವರದಿ:
ಅಜೆಕಾರು: ಅಲ್ಲಿ ಪಿರ್ಯಾದಿದಾರರಾದ ಸುನೀಲ್ಶೆಟ್ಟಿ (39), ತಂದೆ:ಸಂಜೀವ ಶೆಟ್ಟಿ, ವಾಸ:ಅರ್ಬಿ ದರ್ಖಾಸು ಮನೆ, ಕೆರ್ವಾಶೆ ಗ್ರಾಮ, ಕಾರ್ಕಳ ತಾಲೂಕು ಇವರ ಮನೆಯ ಹತ್ತಿರದಲ್ಲಿ ಅರ್ಬಿ ಫಾಲ್ಸ್ ಇದ್ದು ಶನಿವಾರ ಹಾಗೂ ಭಾನುವಾರದಂದು ಹೊರಗಿನಿಂದ ಪ್ರವಾಸಿಗರು ಬರುತ್ತಿರುತ್ತಾರೆ. ದಿನಾಂಕ 20/12/2020 ರಂದು ಪಿರ್ಯಾದಿದಾರರು ಮನೆಯಲ್ಲಿರುವಾಗ ಸಂಜೆ 5:30 ಗಂಟೆಗೆ ಅರ್ಬಿ ಫಾಲ್ಸ್ಗೆ ಬಂದಿದ್ದ ಸುನಿಲ್ ಪೂಜಾರಿ, ಪುರುಷೋತ್ತಮ, ರವಿಚಂದ್ರ, ಶೈಲೇಶ್ ಶೆಟ್ಟಿ ಎಂಬುವವರು ಮನೆಗೆ ಬಂದು ನಾವು ಮದ್ಯಾಹ್ನ 2:00 ಗಂಟೆಗೆ ಕಿರಣ್(21) ಎಂಬುವವನೊಂದಿಗೆ ಅರ್ಬಿ ಫಾಲ್ಸ್ಗೆ ಬಂದು ನೀರಿನ ಒಂದು ಬದಿಯಲ್ಲಿ ಸ್ನಾನ ಮಾಡುತ್ತಿರುವಾಗ ಕಿರಣ್ನು ತನಗೆ ಟಾಯ್ಲೆಟ್ ಬರುತ್ತಿರುವುದಾಗಿ ಹೇಳಿ ನೀರಿನ ಇನ್ನೊಂದು ಬದಿಗೆ ಹೋದವನು ಸುಮಾರು ಹೊತ್ತಾದರೂ ಬರದೇ ಇದ್ದು, ಎಲ್ಲಾ ಕಡೆ ಹುಡುಕಾಡಿದ್ದಲ್ಲಿ ಎಲ್ಲಿಯೂ ಕಾಣುತ್ತಿಲ್ಲವಾಗಿ ತಿಳಿಸಿದ ಮೇರೆಗೆ ಪಿರ್ಯಾದಿದಾರರು ತಮ್ಮ ಪರಿಚಯದ ಅಕ್ಷಯ್ ಕುಮಾರ್, ಧರ್ಮರಾಜ್ ಹೆಗ್ಡೆ ಮತ್ತು ಸುಜೀತ ಶೆಟ್ಟಿ ರವರೊಂದಿಗೆ ಹೋಗಿ ಹುಡುಕಾಡಿ ನಂತರ ನೀರಿನಲ್ಲಿ ಮುಳುಗಿರುವ ಸಾದ್ಯತೆ ಬಗ್ಗೆ ಮುಳುಗು ತಜ್ಞರಾದ ಮಯ್ಯದ್ದಿ ಹಾಗೂ ತೇಜಸ್ರನ್ನು ಕರೆಯಿಸಿ ನೀರಿನಲ್ಲಿ ಹುಡುಕಾಡುತ್ತಿರುವಾಗ ರಾತ್ರಿ 8:35 ಗಂಟೆಗೆ ಮಯ್ಯದ್ದಿ ರವರು ನೀರಿನಲ್ಲಿ ಮುಳುಗಿ ಕಿರಣ್ರ ದೇಹವನ್ನು ಮೇಲಕ್ಕೆ ತಂದಿದ್ದು, ಅದಾಗಲೇ ಕಿರಣ್ನು ಮೃತಪಟ್ಟಿರುವುದಾಗಿದೆ. ಈತನ ಸಾವಿನ ಬಗ್ಗೆ ಅನುಮಾನವಿರುವುದಾಗಿ ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 20/2020 ಕಲಂ: 174(C) CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜಾಹೀರಾತು
Post a comment