ಕಾರ್ಕಳ:ವಿಶ್ವ ರೈತರ ದಿನಾಚರಣೆ-Times of karkala

ವಿಶ್ವ ರೈತರ ದಿನಾಚರಣೆಯ ಅಂಗವಾಗಿ ರೈತರೊಂದಿಗೆ ನಾವು ನಮ್ಮೊಂದಿಗೆ ರೈತರು ಹೇಳುವ ಕಾರ್ಯಕ್ರಮವನ್ನು ರೋಟರಿ ಆನ್ಸ್ ಕ್ಲಬ್ ಕಾರ್ಕಳ ಮತ್ತು ಯುವವಾಹಿನಿ ಘಟಕ ಕಾರ್ಕಳ ಇವರ ನೇತೃತ್ವದಲ್ಲಿ ಕಾರ್ಕಳ ತೆಳ್ಳಾರು ಭಾಸ್ಕರ ಹೆಗಡೆ ಅವರ ಮನೆಯಲ್ಲಿ ನಡೆಯಿತು. 

ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಕೇಶವ ಮರಾಟೆರವರು   ಹಿಂದಿನ ಕಾಲದ ಕೃಷಿಗೂ ಆಧುನಿಕ  ಕಾಲದ ಕೃಷಿಗು ಎಷ್ಟು ವ್ಯತ್ಯಾಸಗಳಿವೆ ಎಂದು ಜನರಿಗೆ ತಿಳಿಸಿದರು. ರೈತರಿಗೆ ಸಾವಯವ ಗೊಬ್ಬರದ ಬಗ್ಗೆ ಮಾಹಿತಿ ನೀಡಿದ ಮಂಗಳೂರು ಕ್ಲಸ್ಟರ್ ಹೆಡ್ ಆಗಿರುವ ಮೋಹನ್ ಅಮಿನ್ ಮತ್ತು ದೇವಕುಮಾರ್ ಅವರು ಪ್ರಾತ್ಯಕ್ಷಿಕತೆ ಹಾಗೂ ವಿವರಗಳನ್ನು ನೀಡುವ ಮೂಲಕ ರೈತರಿಗೆ ತಿಳಿಸಿದರು. 

ಕಾರ್ಯಕ್ರಮದಲ್ಲಿ ರೋಟರಿ ಆನ್ಸ್ ಸಂಸ್ಥೆಯ ಅಧ್ಯಕ್ಷೆಯಾಗಿರುವ ರೋ.ರಮಿತಾ ಶೈಲೇಂದ್ರ ರಾವ್ ಅವರು ಯುವವಾಹಿನಿ ಘಟಕ ಅಧ್ಯಕ್ಷರಾಗಿರುವ ರೋ.ಗಣೇಶ್ ಸಾಲಿಯಾನ್ ಅವರು ವೇದಿಕೆ ಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಗೆ ಬಜಗೋಳಿ ಕ್ಷೇತ್ರದ ರೈತ ಮೋರ್ಚಾ ಅಧ್ಯಕ್ಷರಾಗಿರುವ ಭಾಸ್ಕರ್ ಹೆಗಡೆ ದಂಪತಿಗಳಿಗೆ ಹಾಗೂ ಕಾರ್ಕಳ ತಾಲೂಕು ರೈತಮೋರ್ಚಾ ಉಪಾಧ್ಯಕ್ಷರಾಗಿರುವ ಕೇಶವ ಮರಾಟೆ ಅವರಿಗೆ ಸನ್ಮಾನವನ್ನು ಮಾಡುವ ಮೂಲಕ ರೈತರಿಗೆ ಗೌರವವನ್ನು ಸಲ್ಲಿಸಲಾಯಿತು. ಕಾರ್ಯಕ್ರಮದ ಸ್ವಾಗತವನ್ನು ಆನ್ ಶ್ರೀಮತಿ ವೃಂದ ಶೆಟ್ಟಿಯವರು,  ಧನ್ಯವಾದ ಯುವವಾಹಿನಿ ಘಟಕದ ಕಾರ್ಯದರ್ಶಿಯಾಗಿರುವ ಅರುಣ್, ಕಾರ್ಯಕ್ರಮದ ನಿರೂಪಣೆ ಅಭಿ ಅವರು ನಿರೂಪಿಸಿದರು.


ಜಾಹೀರಾತು 

  



 








Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget