ಪಳ್ಳಿ:ಮಹಿಳೆಯ ಕುತ್ತಿಗೆಯಿಂದ ಚೈನ್ ಎಗರಿಸಲು ಯತ್ನ-Times of karkala

 

ಬೈಕ್ ಸವಾರನೋರ್ವ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚೈನ್ ಎಗರಿಸಲು ಪ್ರಯತ್ನಪಟ್ಟ ಘಟನೆ ಕಾರ್ಕಳ ತಾಲೂಕಿನ ಪಳ್ಳಿ ಬಳಿ ನಡೆದಿದೆ. 

ಘಟನೆಯ ವಿವರ:

ಪಳ್ಳಿ ಗ್ರಾಮದ ವಿಜಯಶ್ರೀ ಎಂಬುವವರು ದಿನಾಂಕ 21/12/2020 ರಂದು ಸುಮಾರು ಸಂಜೆ 05:50 ಗಂಟೆಗೆ ತನ್ನ ಸಂಬಂದಿ ಕುಮಾರಿ ನವ್ಯ ರವರ ಜೊತೆ ಪಳ್ಳಿ ಗ್ರಾಮದ ಪಳ್ಳಿ ಹೊಸ ಬ್ರಡ್ಜ್‌ಬಳಿ  ರಸ್ತೆ ಬದಿಯಲ್ಲಿ ನಿಂತುಕೊಂಡು ಮಾತನಾಡುತ್ತಿದ್ದಾಗ KA-20-EW-1080 ನೇ ನೊಂದಣಿ ಸಂಖ್ಯೆಯ ಬೈಕ್ ನಲ್ಲಿ ಹಿಂದಿನಿಂದ ಬಂದ ಅಪರಿಚಿತನೋರ್ವ ನಿಧಾನವಾಗಿ ಮುಂದೆ ಹೋಗಿ ಸ್ವಲ್ಪ ದೂರದಿಂದ ಬೈಕ್ ತಿರುಗಿಸಿಕೊಂಡು ಬಂದು ವಿಜಯಶ್ರೀಯವರ ಬಳಿ ಬಂದು ಕುತ್ತಿಗೆಗೆ ಏಕಾಏಕಿ ಕೈ ಹಾಕಿ ಕುತ್ತಿಗೆಯಲ್ಲಿ ಧರಿಸಿದ್ದ ಬಂಗಾರದ ಸರವನ್ನು ಎಳೆಯಲು ಯತ್ನಿಸಿದ್ದಾನೆ.

ಬೈಕ್ ನಲ್ಲಿ ಬಂದ ವ್ಯಕ್ತಿಯು  ತುಂಬು ತೋಳಿನ ಕಡು ನೀಲಿ ಬಣ್ಣದ ಟೀ – ಶರ್ಟ್‌, ಕಡು ನೀಲಿ ಬಣ್ಣದ ಪ್ಯಾಂಟ್‌ ಧರಿಸಿದ್ದು ಸಪೂರ ಶರೀರ ಹೊಂದಿದ್ದು ಸುಮಾರು 20 ರಿಂದ 25 ವರ್ಷ ಆಗಿರಬಹುದು ಎಂದು ಈ ಕುರಿತು  ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ವರದಿ:

ಕಾರ್ಕಳ: ಪಿರ್ಯಾದಿದಾರರಾಧ ವಿಜಯಶ್ರೀ (26) ತಂದೆ: ಆನಂದ ನಾಯ್ಕ್‌,ವಾಸ: ಆಶಿರ್ವಾದ್‌ ನಿಲಯ, ಬ್ರಹ್ಮ ದೇವಸ್ಥಾನದ ಹತ್ತಿರ ಕಲ್ಲಾಪು ಪಳ್ಳಿ ಗ್ರಾಮ ಮತ್ತು ಅಂಚೆ. ಕಾರ್ಕಳ ತಾಲೂಕು ಇವರು ದಿನಾಂಕ 21/12/2020 ರಂದು ತನ್ನ ಸಂಬಂದಿ ಕುಮಾರಿ ನವ್ಯ ರವರ ಜೊತೆ ಪಳ್ಳಿ ಗ್ರಾಮದ ಪಳ್ಳಿ ಹೊಸ ಬ್ರಡ್ಜ್‌ಬಳಿ  ರಸ್ತೆ ಬದಿಯಲ್ಲಿ ಮಾತನಾಡುತ್ತಿದ್ದಾಗ KA-20-EW-1080 ನೇ ನೊಂದಣಿ ಸಂಖ್ಯೆಯ ಮೋಟಾರ್‌ ಸೈಕಲನ್ನು ಅದರ ಸವಾರನು ಇವರ ಹಿಂದಿನಿಂದ ನಿಧಾನವಾಗಿ ಸವಾರಿ ಮಾಡಿಕೊಂಡು ಮುಂದಕ್ಕೆ ಹೋಗಿ ಮೋಟಾರ್‌ ಸೈಕಲನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಬಳಿಕ ಆತನು ಅಲ್ಲಿಂದಲೇ ವಾಪಾಸು ಮೋಟಾರ್‌ ಸೈಕಲನ್ನು  ವಿಜಯಶ್ರೀ ಇವರ ಬಳಿಗೆ ಸವಾರಿ ಮಾಡಿಕೊಂಡು ಬಂದು ಕುತ್ತಿಗೆಗೆ ಏಕಾಏಕೀ ಕೈ ಹಾಕಿ ಧರಿಸಿದ್ದ ಬಂಗಾರದ ಸರವನ್ನು ಎಳೆಯಲು ಪ್ರಯತ್ನಿಸಿರುತ್ತಾನೆ ಈ ಘಟನೆಯು ಸಮಯ ಸುಮಾರು ಸಂಜೆ 05:50 ಗಂಟೆಗೆ ಆಗಿರುತ್ತದೆ. ಮೋಟಾರ್‌ ಸೈಕಲಿನಲ್ಲಿ ಬಂದ ವ್ಯಕ್ತಿ ತುಂಬು ತೋಳಿನ ಕಡು ನೀಲಿ ಬಣ್ಣದ ಟೀ – ಶರ್ಟ್‌, ಕಡು ನೀಲಿ ಬಣ್ಣದ ಪ್ಯಾಂಟ್‌ ಧರಿಸಿದ್ದು ಸಪೂರ ಶರೀರ ಹೊಂದಿದ್ದು ಸುಮಾರು 20 ರಿಂದ 25 ವರ್ಷ ಆಗಿರಬಹುದುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 108/2020 ಕಲಂ: 393 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜಾಹೀರಾತು 

  



 








Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget