ಜಿಲ್ಲಾ ಯುವಮೋರ್ಚಾ ವತಿಯಿಂದ ದಿ.ಅಟಲ್ ಬಿಹಾರಿ ವಾಜಪೇಯಿಯವರ ದಿನಾಚರಣೆ ಪ್ರಯುಕ್ತ ನೀಲಾವರ ಗೋಶಾಲೆಯಲ್ಲಿ ಗೋಸೇವೆ-Times of karkala

ಕಾರ್ಕಳ ಡಿ.25:ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ನೀಲಾವರ ಗೋಶಾಲೆಯಲ್ಲಿ ಮಾಜಿ ಪ್ರಧಾನ ಮಂತ್ರಿ ದಿ. ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆ ಅಂಗವಾಗಿ ಮತ್ತು ಇತ್ತೀಚೆಗೆ ರಾಜ್ಯ ಸರಕಾರ ಜಾರಿಗೆ ತಂದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸ್ವಾಗತಿಸಿ ಗೋಶಾಲೆಯನ್ನು ಸ್ವಚ್ಛಗೊಳಿಸಿ,ಗೋಪೂಜೆ ಮಾಡುವ ಮೂಲಕ ಆಚರಿಸಿದರು.

ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ವಿಖ್ಯಾತ್ ಶೆಟ್ಟಿ ಮಾತನಾಡಿ "ಅಟಲ್‌ಜೀ ಕೇವಲ ಅಜಾತ ಶತ್ರು ಮಾತ್ರವಲ್ಲ,ನಿಜಾರ್ತದಲ್ಲಿ ವಿಶ್ವ ಮಾನವ ಎಂಬುವುದಕ್ಕೆ ಅವರ ನಡೆ, ನುಡಿ ಸಾಕ್ಷಿ. ಅತ್ಯಂತ ಸರಳ ಜೀವನ ಶೈಲಿಅಳವಡಿಸಿಕೊಂಡಿದ್ದ ವಾಜಪೇಯಿ ಯಾರ ಮನಸ್ಸನ್ನು ನೋವಿಸಿದವರಲ್ಲ. ಪ್ರತಿಪಕ್ಷಗಳನ್ನು ಸಹ ಗೌರವಯುತವಾಗಿ ಕಾಣುತ್ತಿದ್ದ ಅವರನ್ನು ಅಜಾತ ಶತ್ರು ಎಂದು ದೇಶದ ಜನತೆ ಕರೆಯುತ್ತಿದ್ದರು" ಎಂದರು.

ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ಕುಮಾರಿ ಶ್ವೇತಾ ರವರು ಸಭೆಯನ್ನು ಉದ್ದೇಶಿಸಿ ಅಟಲ್‌ಜೀಯವರು ದೇಶದಲ್ಲಿ ಗೋಹತ್ಯೆ ನಿಷೇಧ ಆಗುವ ಬಗ್ಗೆ ಬಹಳ ಪ್ರಯತ್ನ ಪಟ್ಟಿದ್ದರು. ಇಂದಿನ ಸಮಯದಲ್ಲಿ ರಾಜ್ಯ ಸರಕಾರ ಜಾರಿಗೆ ತಂದ ಗೋಹತ್ಯೆ ನಿಷೇಧ ಸ್ವರ್ಗಿಯ ಶ್ರೀಯುತ ಅಟಲ್ ಬಿಹಾರಿ ವಾಜಪೇಯಿಯವರ ಅಂದಿನ ಪ್ರಯತ್ನ ಇವತ್ತು ಸಾಕಾರಗೊಂಡಿರುವುದಕ್ಕೆ ಗೋಪ್ರೇಮಿಗಳು ಸಂತಸ ವ್ಯಕ್ತಪಡಿಸುತ್ತಾರೆ ಎಂದರು.


ಈ ಸಂದರ್ಭದಲ್ಲಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ಕು. ಶ್ವೇತಾ, ಪ್ರಧಾನ ಕಾರ್ಯದರ್ಶಿ ಶರತ್ ಉಪ್ಪುಂದ, ವಿನೋದ್ ಪೂಜಾರಿ, ಕಾರ್ಯದರ್ಶಿ ಅಭಿರಾಜ್ ಸುವರ್ಣ ಮತ್ತು ಇನ್ನಿತರ ಯುವಮೋರ್ಚಾ ಪಧಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. 


ಜಾಹೀರಾತು 

   
Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget