ಮುನಿಯಾಲಿನಲ್ಲೊಂದು ಮನಮೋಹಕ ಸಂಜೀವಿನಿ ಪಾರ್ಮ್‌ ಮತ್ತು ದೇಶಿಯ ತಳಿಗಳ ಗೋಧಾಮ:ನಾಳೆ ಲೋಕಾರ್ಪಣೆ-Times of karkala

ಮುನಿಯಾಲು : ಅತ್ಯಂತ ಗ್ರಾಮೀಣ ಪ್ರದೇಶವಾದ ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕು ಮುನಿಯಾಲಿನ ಪ್ರಕೃತಿಯ ನಡುವಿನ ವಿಶಾಲ ಪ್ರದೇಶದಲ್ಲಿ ದೇಶಿಯ ಗೀರ್‌ ತಳಿಗಳ ಗೋಧಾಮ ಸಂಜೀವಿನಿ ಫಾರ್ಮ್‌ ಮತ್ತು ಡೈರಿ ಲೋಕಾರ್ಪಣೆಗೆ ಸಿದ್ಧಗೊಂಡಿದೆ. 

ಪುರಾತನ ಶೈಲಿಯ ಆಧುನಿಕ ಸ್ಪರ್ಶದಲ್ಲಿ ಕಾನನದ ನಡುವೆಯೇ ಡೈರಿಯು ನಿರ್ಮಾಣಗೊಂಡಿದ್ದು ಗೀರ್‌ ಗೋವು ಮತ್ತು ದೇಶೀಯ ವಿವಿಧ ಜಾತಿಯ ಗೋವುಗಳು ಡೈರಿಯಲ್ಲಿ ಸ್ವಚ್ಚಂದ್ಧವಾಗಿ ವಿಹರಿಸುವ ದೃಶ್ಯ ಮನಮೋಹಕವಾಗಿದೆ. ರಾಷ್ಟ್ರೀಯ ಮಟ್ಟದ ಕೈಗಾರಿಕೋಧ್ಯಮಿಯಾಗಿರುವ ಮೂಡಬಿದರೆಯ ಎಸ್‌.ಕೆ.ಎಫ್‌ ಉದ್ಯಮ ಸಮೂಹ ಸಂಸ್ಥೆಗಳ ಸ್ಥಾಪಕರೂ ಮತ್ತು ಅಧ್ಯಕ್ಷರಾಗಿರುವ ಎಸ್.ಕೆ.ಎಫ್. ಜಿ.ರಾಮಕೃಷ್ಣ ಆಚಾರ್‌ ಅವರ ಅತ್ಯಂತ ಹೆಚ್ಚಿನ ಗೋ ಪ್ರೀತಿ ಮತ್ತು ಕೃಷಿಯ ಒಲವಿನಿಂದ ಸಂಜೀವಿನಿ ಫಾರ್ಮ್‌ ಮತ್ತು ಡೈರಿ ಭವ್ಯವಾಗಿ ತಲೆಎತ್ತಿದೆ. ಪದವೀಧರೆಯಾಗಿ ಸಿಎಯೂ ಆಗಿರುವ ರಾಮಕೃಷ್ಣ ಆಚಾರ್‌ ಅವರ ಪತ್ನಿ ಸವಿತಾ ಆರ್‌ ಆಚಾರ್‌ ಉದ್ಯೋಗ ಸಹಿತ ಯಾವೂದಕ್ಕೂ ಮುಖ ಮಾಡದೇ ಗೋಪ್ರೇಮಿಯಾಗಿ ಗೋವುಗಳೊಂದಿಗೆ ಬೆರೆತು ಡೈರಿಯನ್ನು ಮುನ್ನಡೆಸುತ್ತಿದ್ದಾರೆ. ಯಾವೂದೇ ಲಾಭದ ಉದ್ದೇಶದಿಂದ ಡೈರಿಯನ್ನು ನಡೆಸುತ್ತಿಲ್ಲ. ಗೋಸೇವೆಗೆ ನನ್ನ ಮೊದಲ ಆಧ್ಯತೆ. ಜೊತೆಗೆ ಹಳ್ಳಿಯ ಫಾರ್ಮನ್ನು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿ ಯುವ ಸಮುದಾಯ ಮತ್ತು ಪ್ರವಾಸಿಗರನ್ನು ಆಕರ್ಷಿಸುವುದು ಕಲ್ಪನೆಯಾಗಿದೆ. ಯುವ ಸಮುದಾಯ ಮುಂದೆ ಕೃಷಿಯ ಜೊತೆಗೆ ದೇಶೀಯ ಹೈನುಗಾರಿಕೆಯಲ್ಲಿ ತೊಡುಗುವಂತೆ ಪ್ರೇರೆಪಿಸಲು ನಮ್ಮ ಫಾರ್ಮನ್ನು ರೂಪಿಸಲಾಗಿದೆ ಎಂದು ಫಾರ್ಮನ ಸ್ಥಾಪಕ ಜಿ. ರಾಮಕೃಷ್ಣ ಆಚಾರ್‌ ಅಭಿಮಾನದಿಂದ ಹೇಳುತ್ತಾರೆ. 

ನಾಗಾರಾಧನೆ:ಪುರಾತನ ನಾಗಬನ : ಬರಡು ಭೂಮಿಯಂತಿದ್ದ ಮುನಿಯಾಲು ಚಟ್ಕಲ್‌ಪಾದೆ ಬಳಿಯ ಭೂಮಿಯನ್ನು ಅತ್ಯಂತ ಒಳ್ಳೇಯ ಕೃಷಿ ಭೂಮಿಯ ಜೊತೆಗೆ ಪ್ರಖ್ಯಾತಿ ಪಡೆದಿರುವ ಸಂಜೀವಿನಿ ಫಾರ್ಮ್‌ ಆಗಿ ರೂಪಿಸಲಾಗಿದೆ. ಹಚ್ಚಹಸಿರಿನ ಪ್ರದೇಶದಲ್ಲಿ ಪುರಾತನ ಶೈಲಿಯಲ್ಲೇ ಮೊದಲಿದ್ದ ನಾಗಬನವನ್ನು ಈಗ ಆಕರ್ಷಕವಾಗಿ ಪುನರ್‌ ನಿರ್ಮಾಣ ಮಾಡಲಾಗಿದೆ. ನಾಗನಿಗೆ ಪ್ರಿಯವಾದ ಹೂವು ಔಷಧೀಯ ಗಿಡಗಳ ವನದ ನಡುವೆ ನಾಗಬನ ಕಂಗೋಳಿಸುತ್ತಿದೆ. ಚಿತ್ರಕೂಟ ಮತ್ತು ನಾಗಬನದ ಬಾವಿಯನ್ನು ಆಕರ್ಷಕವಾಗಿ ನಿರ್ಮಾಣ ಮಾಡಲಾಗಿದೆ. ಪೃಕೃತಿಯನ್ನು ಉಳಿಸಿ ಅರಣ್ಯ ಬೆಳೆಸಲು ಅರಣ್ಯ ಇಲಾಖೆಯ ಸಹಕಾರದಲ್ಲಿ ಮಾವು ಹಲವು ಹೆಬ್ಬಲಸು ಪುನರ್ಪುಳಿ ಸಹಿತ ವಿವಿಧ ಜಾತಿಯ ಗಿಡಮರಗಳನ್ನು ಬೆಳೆಸಲಾಗುತ್ತಿದೆ. ಫಾರ್ಮ್‌ ನಲ್ಲಿ ಕೆಲಸ ಮಾಡುವ ನೌಕರರಿಗೆ ನಿರ್ಮಿಸಿರುವ ವಸತಿಗೃಹಕ್ಕೆ ಗೋವಿನ ಸಗಣಿಮಿಶ್ರಿತ ಮಣ್ಣಿನಲ್ಲಿ ಗೊಡೆಗಳಿಗೆ ಮಾಡಿರುವ ಗಾರೆ ಕೂಡ ಮನಸೂರೆಗೊಳ್ಳುತ್ತಿದೆ. 

ಬಹುತೇಕ ಮಂದಿಯ ಮೆಚ್ಚುಗೆಗೆ ಪಾತ್ರವಾದ ಇಂತಹ ಅತ್ಯಾಧುನಿಕ ಪಶ್ಚಿಮ ಘಟ್ಟದ ಹಚ್ಚ ಹಸುರಿನ ರುದ್ರ ರಮಣೀಯ ಕಾನನದ ಮಡಿಲಿನ ಮುನಿಯಾಲು ಸಂಜೀವಿನಿ ಫಾರ್ಮ್‌ ಮತ್ತು ಡೈರಿ - "ಗೋ ಧಾಮ "ಮತ್ತು ದೇಶಿಯ ಗೋ ತಳಿಗಳ ಲೋಕಾರ್ಪಣೆಯು ಇದೇ  27ರಂದು ನಡೆಯಲಿದ್ದು ಕುಕ್ಕೆ ಸುಬ್ರಹ್ಮಣ್ಯ ಮಠಾದೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಲೋಕಾರ್ಪಣೆ ಮಾಡುವರು. ಮಂಗಳೂರು ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ವಿವಿಧ ಗಣ್ಯರು ಭಾಗವಹಿಸುವರು./ 

ಜಾಹೀರಾತು 

   
Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget