ಹೆಬ್ರಿ ರಮೇಶ ಆಚಾರ್ಯ ಅವರಿಗೆ 'ಹೃದಯವಂತರು' ಪ್ರಶಸ್ತಿ-Times of karkala

 ಮಂಗಳೂರು : ಮಂಗಳೂರಿನ ಕುದ್ಮಲ್‌ ರಂಗರಾವ್‌ ಪುರಭವನದಲ್ಲಿ ಡಿಸೆಂಬರ್‌ 12ರಂದು ನಡೆಯುವ 13ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ನೀಡುವ 2020ನೇ ಸಾಲಿನ "ಹೃದಯವಂತರು" ಪ್ರಶಸ್ತಿಗೆ ಉದ್ಯಮಿಯಾಗಿರುವ ಕಾಷ್ಠಶಿಲ್ಪಿ ಹೆಬ್ರಿಯ ಎಚ್. ರಮೇಶ್‌ ಆಚಾರ್ಯ ಆಯ್ಕೆಯಾಗಿದ್ದಾರೆ.  ಕಾಷ್ಠ ಶಿಲ್ಪ ಮತ್ತು ವಿನ್ಯಾಸ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅನುಪಮ ಸೇವೆಗಾಗಿ ಹೃದಯವಂತರು ಪ್ರಶಸ್ತಿ ನೀಡಲಾಗುತ್ತಿದೆ ಎಂದು ಮಂಗಳೂರಿನ ಕೆ.ಪಿ.ಮಂಜುನಾಥ ಸಾಗರ್‌ ತಿಳಿಸಿದ್ದಾರೆ.

ಕಾಷ್ಠಶಿಲ್ಪದಲ್ಲಿ ಅನೇಕ ವಿನ್ಯಾಸಗಳಲ್ಲಿ ಹೆಸರು ಮಾಡಿ ಜನಮನ ಗೆದ್ದು ವಿನ್ಯಾಸ ಪ್ರವೀಣ ಎಂದೇ ಖ್ಯಾತರಾಗಿದ್ದಾರೆ.

ಹೆಬ್ರಿಯಲ್ಲಿ ಶ್ರೀ ವಿಶ್ವಕರ್ಮ ವುಡ್‌ ಇಂಡಸ್ಟ್ರೀಸ್‌ ಎಂಬ ಉದ್ಯಮವನ್ನು ಮುನ್ನಡೆಸುತ್ತಿರುವ ರಮೇಶ ಆಚಾರ್ಯ ತೆರೆಮರೆಯಲ್ಲಿ ನಿರಂತರವಾಗಿ ಸಮಾಜ ಸೇವೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಸಾರ್ವಜನಿಕ, ರಾಜಕೀಯ, ಸಾಮಾಜಿಕ ಮತ್ತು ವಿವಿಧ ಸಂಘಸಂಸ್ಥೆಗಳಲ್ಲೂ ವಿಶೇಷ ಸೇವೆ ಸಲ್ಲಿಸುತ್ತಿದ್ದಾರೆ. 

ನಾಡಿನ ಹಲವು ದೇವಸ್ಥಾನಗಳ ನವೀಕರಣ ಕಾರ್ಯದಲ್ಲೂ ಸೇವೆ ಮಾಡುವ ಅವಕಾಶ ದೊರೆತಿದೆ. ಪ್ರತಿಷ್ಠಿತ ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯರಾಗಿ, ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾಗಿ,ಹೆಬ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿ ಮತ್ತು ಸರ್ಕಾರಿ ಪ್ರೌಢಶಾಲೆಯ ಅಭಿವೃದ್ಧಿ ಸಮಿತಿಯ ಸದಸ್ಯರಾಗಿ, ಹೆಬ್ರಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಮೇಲುಸ್ತುವಾರಿಯಾಗಿಯೂ ಸೇವೆ ಮಾಡಿದ್ದಾರೆ. 

ಹೆಬ್ರಿ ತಾಣ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ರಮೇಶ ಆಚಾರ್ಯ ಪ್ರತಿಷ್ಠಿತ ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ಅಧ್ಯಕ್ಷರಾಗಿ 2 ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಲಯನ್ಸ್‌ ಕ್ಲಬ್‌ ನಲ್ಲಿ ಜಿಲ್ಲೆಯ ಹಲವು ಪ್ರಮುಖ ಸ್ಥಾನಗಳಲ್ಲೂ ಸೇವೆ ಮಾಡಿದ್ದಾರೆ. ಅಸಾಯಕರಿಗೆ ತನ್ನಿಂದಾದ ಸಹಾಯವನ್ನು ತೆರೆಮರೆಯಲ್ಲೇ ನಿರಂತರವಾಗಿ ಮಾಡುತ್ತ ಬರುತ್ತಿರುವ ಹೆಬ್ರಿರ ರಾಗಿಹಕ್ಲು ರಮೇಶ ಆಚಾರ್ಯರು ಹೆಬ್ರಿ ವಿಶ್ವಕರ್ಮ ಸಮಾಜ ಅಭಿವೃದ್ಧಿ ಮತ್ತು ಸಮುದಾಯ ಭವನದ ನಿರ್ಮಾಣದಲ್ಲಿ ವಿಶೇಷ ಕೊಡುಗೆ ನೀಡಿದ್ದಾರೆ. 

ಹೆಬ್ರಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಗೌರವಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕೆ.ಪಿ.ನಂಜುಂಡಿ ವಿಶ್ವಕರ್ಮ ನೇತ್ರತ್ವದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಹೆಬ್ರಿ ತಾಲ್ಲೂಕು ಅಧ್ಯಕ್ಷರಾಗಿ ಸೇವೆ ಮಾಡುತ್ತಿದ್ದಾರೆ. ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ವಿಶ್ವಕರ್ಮ ಸಮ್ಮೇಳನದಲ್ಲಿ " ರಾಷ್ಟ್ರೀಯ ವಿಶ್ವಕರ್ಮ ರತ್ನ" ಪ್ರಶಸ್ತಿ, ಬಾರ್ಕೂರು ಶ್ರೀಕಾಳಿಕಾಂಭ ದೇವಸ್ಥಾನದಲ್ಲಿ ಅಂದಿನ ಜಿಲ್ಲಾಧಿಕಾರಿ ವಿ.ಪೊನ್ನರಾಜ್‌ ಅವರಿಂದ ಗೌರವ ಸನ್ಮಾನ, ವಿನ್ಯಾಸ ಪ್ರವೀಣ ಪ್ರಶಸ್ತಿ, ಕಾಷ್ಠಶಿಲ್ಪ ಚತುರ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಗೌರವ ಸನ್ಮಾನಗಳು ರಮೇಶ ಆಚಾರ್ಯರಿಗೆ ಸಂದಿದೆ.

ಜಾಹೀರಾತು 

  
Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget