ಕ.ರಾಜ್ಯ ವಿಶೇಷ ಶಿಕ್ಷಕ ಶಿಕ್ಷಕೇತರರ ಸಂಘ ಉಡುಪಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಬಾಗದಲ್ಲಿ ವಿಶೇಷ ಶಿಕ್ಷಕ ಶಿಕ್ಷಕೇತರರ ಗೌರವಧನ ದ್ವಿಗುಣಗೊಳಿಸಬೇಕೆಂಬ ಬೇಡಿಕೆಯೊಂದಿಗೆ 1 ದಿನದ ಸಾಂಕೇತಿಕ ಮುಷ್ಕರವನ್ನು ನಡೆಸಲಾಯಿತು.
ರಾಜ್ಯದ ಬೆನ್ನೆಲುಬಾಗಿರುವ ರೈತರ ಸೇವೆಯನ್ನು ಸ್ಮರಿಸುತ್ತ ರೈತ ಗೀತೆ ಹಾಡುವ ಮೂಲಕ ಮುಷ್ಕರ ಪ್ರಾರಂಭಿಸಿ, ರಾಷ್ಟ್ರ ನಾಯಕರಿಗೆ ಬಾವ ಚಿತ್ರದ ಎದುರು ದೀಪ ಪ್ರಜ್ವಲಿಸಿ ಶ್ರೀ ಜಯಕರ್ ಶೆಟ್ಟಿ ಇಂದ್ರಾಳಿ ಮುಷ್ಕರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾರ್ಮಿಕರ ವೇದಿಕೆಯ ರಾಜ್ಯಾಧ್ಯಕ್ಷರು ಡಾ. ರವಿ ಶೆಟ್ಟಿ ಬೈಂದೂರ್, ಆಸರೆ ಸಂಸ್ಥೆಯ ಅಧ್ಯಕ್ಷರು ಶ್ರೀ ಜಯವಿಠ್ಠಲ್ , ಸಮಾಜಸೇವಕಿ ಸಮೃದ್ಧ ವೃತ್ತಿ ತರಬೇತಿ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸಾಧನಾ ಕಿಣಿ, ಮಾನಸ ಸಂಸ್ಥೆಯ ಅಧ್ಯಕ್ಷರು ಹೆನ್ರಿ ಡಿಸೋಜ, ಕೋಶಾಧಿಕಾರಿ ಶ್ರೀ ಸೈಮನ್,ಆಶಾ ನಿಲಯ ಸಂಸ್ಥೆಯ ಶ್ರೇಯೋಭಿವೃದ್ಧಿಸಮಿತಿ ಕಾರ್ಯದರ್ಶಿ ಸ್ಟೀಫನ್ ಕರ್ಕಡ, ಕಾರುಣ್ಯ ವಿಶೇಷ ಶಾಲಾ ಟ್ರಸ್ಟಿ ಶ್ರೀ ದೇವ ಪುತ್ರನ್, ಶ್ರೀ ಪ್ರಭಾಕರ್ ಅಮನ್ನ, ಉಪಸ್ಥಿತರಿದ್ದು ಮುಷ್ಕರಕ್ಕೆ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಜಿ ಜಗದೀಶ್ , ಅಪರ ಜಿಲ್ಲಾಧಿಕಾರಿಗಳಾದ ಶ್ರೀ ಸದಾಶಿವ ಪ್ರಭು, ವಿಕಲಚೇತನರ ಸಬಲೀಕರಣ ಅಧಿಕಾರಿಗಳಾದ ಶ್ರೀಮತಿ ರತ್ನಾ, ಇವರು ಮುಷ್ಕರ ನಡೆಯುವ ಸ್ಥಳಕ್ಕೆ ಆಗಮಿಸಿ ಮನವಿಯನ್ನು ಸ್ವೀಕರಿಸಿದರು .
ಜಾಹೀರಾತು
Post a comment