ಬಜಗೋಳಿ:ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಸೈಕಲ್ ಸವಾರನ ಮೇಲೆ ರಿಕ್ಷಾ ಡಿಕ್ಕಿಹೊಡೆದ ಪರಿಣಾಮ ಸೈಕಲ್ ಸವಾರ ಮೃತಪಟ್ಟ ಘಟನೆ ಬಜಗೋಳಿಯ ಮುಡಾರು ಅಬ್ಬೆಂಜಾಲು ಬಳಿ ನಡೆದಿದೆ.
ಘಟನೆಯ ವಿವರ:
ದಿನಾಂಕ 22/12/20 ರಂದು ಸಾಯಂಕಾಲ 7:10 ಗಂಟೆಗೆ ಬಜಗೋಳಿಯಿಂದ ಮನೆಗೆ ಸೈಕಲ್ ನಲ್ಲಿ ಬರುತ್ತಿದ್ದ ನೋಣಯ್ಯ ಎಂಬುವವರಿಗೆ ಬಜಗೋಳಿಯಿಂದ ಕಡಾರಿಗೆ ಅತೀ ವೇಗದಿಂದ ಹೋಗುತ್ತಿದ್ದ ರಿಕ್ಷಾ ಡಿಕ್ಕಿ ಹೊಡೆದಿದೆ.
ಸೈಕಲ್ ನ ಹಿಂಬಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ನೋಣಯ್ಯ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಗಂಭೀರ ಗಾಯವಾಗಿತ್ತು.
ಕೂಡಲೇ ನೋಣಯ್ಯರವರನ್ನು ಅವರ ಅಣ್ಣ ಸುಂದರ ಹಾಗೂ ಡಿಕ್ಕಿ ಹೊಡೆದ ರಿಕ್ಷಾ ಚಾಲಕ ಚಾಲಕ ಜಾನ್ ಡಿಸೋಜ ಸೇರಿ ಆಸ್ಪತ್ರೆಗೆ ಕೊಂಡು ಹೋದರೂ ಅದಾಗಲೇ ಮೃತಪಟ್ಟಿದ್ದರು.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಪೊಲೀಸ್ ವರದಿ:
ಕಾರ್ಕಳ: ದಿನಾಂಕ 22/12/20 ರಂದು ಪಿರ್ಯಾದಿದಾರರಾದ ಸುಂದರ (50), ತಂದೆ: ದಿ|| ಪರ್ದೇಶಿ, ವಾಸ: ಹಲೆಕ್ಕಿ ಮನೆ, ಮುಡಾರು ಗ್ರಾಮ, ಬಜಗೋಳಿ ಅಂಚೆ, ಕಾರ್ಕಳ ತಾಲೂಕು ಇವರು ಸಾಯಂಕಾಲ ಬಜಗೋಳಿ ಪೇಟೆಗೆ ಬಂದು ವಾಪಾಸ್ಸು ಮನೆಗೆ ಬರುತ್ತಿರುವಾಗ ಮುಡಾರು ಗ್ರಾಮದ ಅಬ್ಬೆಂಜಾಲು ಬಳಿ ಪರಿಚಯದ ಹರೀಶ್ ರವರು ಕಾಣ ಸಿಕ್ಕಿದ್ದು, ಅವರೊಡನೆ ಮತನಾಡುತ್ತಿರುವಾಗ 7:10 ಗಂಟೆಗೆ ಬಜಗೋಳಿ ಕಡೆಯಿಂದ ಕಡಾರಿ ಕಡೆಗೆ ಒರ್ವ ಆಟೋ ರಿಕ್ಷಾ ಚಾಲಕನು ಆಟೋ ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡ ಭಾಗಕ್ಕೆ ಚಲಾಯಿಸಿ ಎದುರಿನಿಂದ ಹೋಗುತ್ತಿದ್ದ ಸೈಕಲಿನ ಹಿಂದುಗಡೆಗೆ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು , ಪಿರ್ಯಾದಿದಾರರು ಹಾಗೂ ಹರೀಶ್ ಸ್ಥಳಕ್ಕೆ ಹೋಗಿ ನೋಡಲಾಗಿ ಸೈಕಲ್ ಸವಾರನು ಪಿರ್ಯಾದಿದಾರರ ಅಣ್ಣ ನೋಣಯ್ಯ ಆಗಿದ್ದು ಅವರ ತಲೆಯ ಹಿಂಬದಿಗೆ, ಹಣೆಯ ಬಲಗಡೆ, ತುಟಿಗೆ ಹಾಗೂ ಬಲಗೈಗೆ ರಕ್ತ ಗಾಯವಾಗಿದ್ದು, ಅಪಘಾತವೆಸಗಿದ ಆಟೋ ರಿಕ್ಷಾ ನಂಬ್ರ ನೋಡಲಾಗಿ KA-20-C-2263 ಹಾಗೂ ಅದರ ಚಾಲಕ ಜಾನ್ ಡಿಸೋಜ ಆಗಿದ್ದು , ಕೂಡಲೇ ಗಾಯಾಳುವನ್ನು ಒಂದು ಆಟೋ ರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 95/2020 ಕಲಂ:279,304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಜಾಹೀರಾತು
Post a comment